ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಕಾರವಾರ : ಮೊಬೈಲ್ ಚಾರ್ಜರ್‌ನಿಂದ ಪುಟಾಣಿ ಸಾವು.

ಕಾರವಾರ : ಮೊಬೈಲ್ ಚಾರ್ಜರ್‌ನಿಂದ ಪುಟಾಣಿ ಸಾವು.

Wed, 02 Aug 2023 23:46:32  Office Staff   S O News

ಕಾರವಾರ : ಮೊಬೈಲ್ ಚಾರ್ಜರ್‌ನ ಶಾಖ್  ತಗುಲಿ ಮಗುವೊಂದು ಸಾವನ್ನಪ್ಪಿದ ಘಟನೆ ಕಾರವಾರ ತಾಲೂಕಿನ ಸಿದ್ದರ ಗ್ರಾಮದಲ್ಲಿ ನಡೆದಿದೆ‌.

ಎಂಟು ತಿಂಗಳ ಹೆಣ್ಣು ಮಗು ಸಾನಿಧ್ಯ ಸ್ಥಳದಲ್ಲೇ ಸಾವನ್ನಪ್ಪಿದ ದುರ್ದೈವಿ. ಸಂತೋಷ ಕಲ್ಗುಟ್ಕರ್ ಹಾಗೂ ಸಂಜನಾ ಅವರ ಮಗುವಾಗಿದ್ದು ಬುಧವಾರ ಬೆಳಿಗ್ಗೆ ಸಾವನ್ನಪ್ಪಿದೆ.

ರಾತ್ರಿ ಮೊಬೈಲ್ ಚಾರ್ಜ್‌ಗೆ  ಹಾಕಿದ ಪೋಷಕರು  ಆಫ್ ಮಾಡದೇ ಹಾಗೆಯೇ ಬಿಟ್ಟಿದ್ದರು. ಆನ್ ಇದ್ದ ಮೊಬೈಲ್ ಚಾರ್ಜರ್‌ನ್ನ ಆಟವಾಡುತ್ತಿದ್ದ  ಹಸುಗೂಸು ಬಾಯಿಗೆ ಹಾಕಿಕೊಂಡಿದ್ದರಿಂದ ಮಗು ಸಾವನ್ನಪ್ಪಿದೆ. ಮಗುವನ್ನ ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

Mobile Charger Claims the Life of Eight-Month-Old baby girl in Karwar


Share: