ಕಾರವಾರ : ಮೀನುಗಾರಿಕೆಗೆ ತೆರಳಿದ್ದ ಬೋಟ್ ಅರಬ್ಬಿ ಸಮುದ್ರದಲ್ಲಿ ಮುಳುಗಿದ ಘಟನೆ ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿ ನಡೆದಿದೆ. ಪದ್ಮಾವತಿ ಹೆಸರಿನ ಬೋಟ್ ಮೀನುಗಾರಿಕೆಗೆ ತೆರಳಿದ್ದ ವೇಳೆ ಬೋಟ್ ನ ತಳಭಾಗ ಡ್ಯಾಮೇಜ್ ಆಗಿದ್ದರಿಂದ ನೀರು ತುಂಬಿದೆ. ಘಟನೆಯಲ್ಲಿ ಬೋಟಿನಲ್ಲಿದ್ದ 30 ಮೀನುಗಾರರನ್ನ ರಕ್ಷಣೆ ಮಾಡಲಾಗಿದ್ದು, ಹಿಡಿದ 30 ಟನ್ ಮೀನನ್ನ ವಾಪಸ್ ಸಮುದ್ರಕ್ಕೆ ಚೆಲ್ಲಲಾಗಿದೆ. ಬಳಿಕ ಮುಳುಗುತಿದ್ದ ಬೋಟನ್ನ ಇತರೆ ಬೋಟಿನವರು ಕಾರವಾರದ ಬೈತಕೋಲ್ ಬಂದರಿಗೆ ಎಳೆತಂದಿದ್ದಾರೆ.
ವಾಮನ ಹರಿಕಂತ್ರ ಎಂಬುವವರಿಗೆ ಸೇರಿದ ಬೋಟ್ ಆಗಿದೆ. ಘಟನೆಯಲ್ಲಿ ಅಂದಾಜು ₹50 ಲಕ್ಷ ರೂ. ಹಾನಿಯಾಗಿದೆ ಎಂದು ತಿಳಿದುಬಂದಿದೆ.