ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಕಾರವಾರ : ಬಾಲಮಂದಿರ ಹಿ.ಪ್ರಾ.ಶಾಲೆಯ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ

ಕಾರವಾರ : ಬಾಲಮಂದಿರ ಹಿ.ಪ್ರಾ.ಶಾಲೆಯ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ

Sat, 01 Oct 2022 20:17:01  Office Staff   Press release

ಕಾರವಾರ : ಶಾಲಾ ಶಿಕ್ಷಣ ಮತ್ತು ಸಾಕ್ಷತಾ ಇಲಾಖೆಯ ಸಹಯೋಗದಲ್ಲಿ ಭಟ್ಕಳದಲ್ಲಿ ನಡೆದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಇಲಾಖಾ ಕ್ರೀಡಾಕೂಟದಲ್ಲಿ ಬಾಲಮಂದಿರ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಅಸಾಮಾನ್ಯ ಸಾಧನೆ ಮಾಡಿ, ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಕು. ಪ್ರತಿಕ್ಷಾ ಎಸ್. ಭಂಡಿವಾಡ (100ಮೀ.ಓಟ-ದ್ವಿತೀಯ), ಕು. ಯಾನ್ ಜೆ. ಗೋವೇಕರ (400ಮೀ.ಓಟ- ಪ್ರಥಮ), ಕು. ವಿನುತ ಎ. ಗೌಡ (600ಮೀ.ಓಟ-ತೃತೀಯ), ಕು. ವಿನಯ ಜಿ. ನಾಯ್ಕ (80ಮೀ. ಹರ್ಡಲ್- ದ್ವಿತೀಯ) ಮತ್ತು ಕು. ಕಾಂಚಿಕಾ ಆರ್. ನಾಯ್ಕ (ಚೆಸ್-ಪ್ರಥಮ), ಕು. ನಮನ್ ಎನ್. ಅಣ್ವೇಕರ ಮತ್ತು ಕು. ಆದ್ಯಾ ಎಸ್. ಬಿರಕೋಡಿ (ಶಟಲ್ ಬ್ಯಾಡ್ಮಿಂಟನ್-ಪ್ರಥಮ) ಬಹುಮಾನವನ್ನು ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ 

ಇವರ ಈ ಸಾಧನೆಗೆ ಕಾರವಾರ ಎಜ್ಯುಕೇಷನ್ ಸೊಸೈಟಿಯ ಅಧ್ಯಕ್ಷರು, ಆಡಳಿತಾಧಿಕಾರಿಗಳು ಹಾಗೂ ಸದಸ್ಯರು ಮತ್ತು ಬಾಲಮಂದಿರ ಪ್ರೌಢಶಾಲೆಯ ಮುಖ್ಯಾಧ್ಯಾಪಕರಾದ ಶ್ರೀಮತಿ ಅಂಜಲಿ ಮಾನೆ, ಶಿಕ್ಷಕರು ಹಾಗೂ ಸಿಬ್ಬಂದಿಗಳು ಅಭಿನಂದಿಸಿರುತ್ತಾರೆ. ಈ ವಿದ್ಯಾರ್ಥಿಗಳಿಗೆ ದೈಹಿಕಶಿಕ್ಷಣ ಶಿಕ್ಷಕರಾದ ಶ್ರೀ ಪ್ರಶಾಂತ ಆರ್. ನಾಯ್ಕ ಹಾಗೂ ಶ್ರೀ ಆರ್. ಡಿ. ನೀರಾವರಿ ಮಾರ್ಗದರ್ಶನ ನೀಡಿದ್ದು, ಇವರಿಗೂ ಶಾಲೆಯ ಆಡಳಿತ ಮಂಡಳಿ, ಶಿಕ್ಷಕವೃಂದ ಹಾಗೂ ಪಾಲಕರು ಅಭಿನಂದಿಸಿರುತ್ತಾರೆ.


Share: