ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಕಾರವಾರ : ಜುಲೈ 3ರಿಂದ 7ರವರೆಗೆ ಬಾರೀ ಮಳೆ ಸಾಧ್ಯತೆ.

ಕಾರವಾರ : ಜುಲೈ 3ರಿಂದ 7ರವರೆಗೆ ಬಾರೀ ಮಳೆ ಸಾಧ್ಯತೆ.

Sun, 03 Jul 2022 01:30:14  Office Staff   SO News

ಕಾರವಾರ : ಜುಲೈ  03 ರಿಂದ 07 ರ ಬೆಳಿಗ್ಗೆ 8-30 ರವರೆಗೆ ಜಿಲ್ಲೆಯಲ್ಲಿ ಭಾರೀ ಮಳೆ ಬೀಳುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆಯು ನೀಡಿದೆ ಎಂದು ಕಾರವಾರ ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ‌

ಕಾರಣ ಸಾರ್ವಜನಿಕರು, ಮೀನುಗಾರರು ಹಾಗೂ ಪ್ರವಾಸಿಗರು ಅಗತ್ಯ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಿದೆ. 

ಈ ದಿನದಂದು ಬಾರೀ ಮಳೆ-ಗಾಳಿ ಉಂಟಾಗುವ ಸಾಧ್ಯತೆಯಿದ್ದು, ಮಕ್ಕಳು, ಸಾರ್ವಜನಿಕರು ಅಪಾಯಕಾರಿ ವಿದ್ಯುತ್ ಕಂಬ, ಕಟ್ಟಡ, ಮರಗಳ ಹತ್ತಿರ ಹಾಗೂ ಕೆಳಗೆ ನಿಲ್ಲದೇ, ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆಯಬೇಕೆಂದು ಸೂಚಿಸಿದೆ.

ತುರ್ತು ಸೇವೆಗೆ ಟೋಲ್ ಫ್ರೀ ಸಂಖ್ಯೆ 24*7 ಕಂಟ್ರೋಲ್ ರೂಮ್ : 1077,  08382-229857, ವಾಟ್ಸಪ್ ಸಂಖ್ಯೆ: 9483511015 ಸಂಪರ್ಕಿಸಬೇಕೆಂದು ಕೋರಿದೆ.


Share: