ಅಂಕೋಲಾ : ರಾಜ್ಯದಲ್ಲಿ ಕಾನೂನನ್ನ ಮೀರಿಸುವ ಪ್ರಯತ್ನ ಯಾರು ಮಾಡಬಾರದು ಎಂದು ಸಾರಿಗೆ ಮತ್ತು ಪರಿಶಿಷ್ಟ ಪಂಗಡಗಳ ಸಚಿವ ಶ್ರೀರಾಮುಲು ಹೇಳಿದ್ದಾರೆ.
ಅಂಕೋಲಾದಲ್ಲಿ ನೂತನ ಬಸ್ ನಿಲ್ದಾಣ ಉದ್ಘಾಟಿಸಿ ಬಳಿಕ ಮಾದ್ಯಮದವರೊಂದಿಗೆ ಮಾತನಾಡಿದ ಅವರು, ಆಜಾನ್ ಗೆ ಪ್ರತಿಯಾಗಿ ಶ್ರೀರಾಮ ಸೇನೆಯಿಂದ ಓಂಕಾರ ಹೊರಡಿಸಬೇಕೆನ್ನುವ ವಿಚಾರಕ್ಕೆ ಪ್ರತಿಕ್ರೀಯಿಸಿದರು. ರಾಜ್ಯದಲ್ಲಿ ಕಾನೂನಿನಂತೆ ಎಲ್ಲವೂ ನಡೆಯಬೇಕೆಂದರು.
ಪಿಎಸ್ಐ ನೇಮಕ ವಿಷಯದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸರ್ಕಾರದ ಮೇಲೆ ಮಾಡುತ್ತಿರುವ ಆರೋಪಕ್ಕೆ ಹರಿಹಾಯ್ದ ಶ್ರೀರಾಮುಲು, ಭೃಷ್ಟಾಚಾರದ ಜನಕ ಕಾಂಗ್ರೆಸ್ ಪಕ್ಷ. ಕಳೆದ 60 ವರ್ಷಗಳಿಂದ ಕಾಂಗ್ರೆಸ್ ಪಕ್ಷದವರು ಲೂಟಿ ಮಾಡಿದ್ದಾರೆ. ನಮ್ಮ ಅವಧಿಯಲ್ಲಿ ಅವರ ಭೃಷ್ಟಾಚಾರವನ್ನ ಸರಿಪಡಿಸುವ ಕೆಲಸ ಮಾಡ್ತೀವೆಂದು ಹೇಳಿದರು.
ಸಾರಿಗೆ ಇಲಾಖೆಯ ನಾಲ್ಕು ನಿಗಮಗಳನ್ನ ಒಂದುಗೂಡಿಸುವ ಕಾರ್ಯ ಮಾಡಲಾಗುತ್ತಿದೆ.
ನಾಲ್ಕು ನಿಗಮಗಳ ಮರ್ಜ್ ಮಾಡಿದರೇ ನಷ್ಟ ಕಡಿಮೆ ಮಾಡಬಹುದೆಂದು ಶ್ರೀನಿವಾಸ ಮೂರ್ತಿ ಕಮಿಟಿ ವರದಿ ನೀಡಿದೆ. ನಾಲ್ಕು ನಿಗಮಗಳನ್ನು ಒಂದು ಮಾಡಿದರೇ ಸಾರಿಗೆ ಇಲಾಖೆಯಲ್ಲಿ ಹೊಸ ಬದಲಾವಣೆಯಾಗಲಿದೆ ಎಂದರು.
ಎಲ್ಲಾ ಬಸ್ ನಿಲ್ದಾಣಗಳಲ್ಲಿ ಸಿಬ್ಬಂದಿಗಳಿಗೆ ವಸತಿ ವ್ಯವಸ್ಥೆ ಮಾಡಲಾಗುವುದು. ರಾಜ್ಯದಲ್ಲಿ ಹೊಸ ಬಸ್ಗಳನ್ನ ತರಲು ಪ್ರಯತ್ನಿಸಲಾಗಿದ್ದು, ಮುಂದಿನ ದಿನಗಳಲ್ಲಿ ಎಲ್ಲಾ ಜಿಲ್ಲಾ ಘಟಕಗಳಿಗೆ ನಾಲ್ಕೈದು ಸಿಎನ್ಜಿ ಬಸ್ ನೀಡಲಾಗುವುದು ಎಂದು ಸಚಿವ ಶ್ರೀರಾಮುಲು ಹೇಳಿದ್ದಾರೆ.