ಹೊಸದಿಲ್ಲಿ: ರಾಷ್ಟ್ರಪತಿ ಚುನಾವಣೆಯಲ್ಲಿ ಕಾಂಗ್ರೆಸ್‌ನ ಒಬ್ಬರು ಹಾಗೂ ಎನ್‌ಸಿಪಿಯ ಇಬ್ಬರು ಶಾಸಕರು ಎನ್‌ಡಿಎಯ ರಾಷ್ಟ್ರಪತಿ ಅಭ್ಯರ್ಥಿ ಬ್ರೌಪದಿ ಮುರ್ಮು ಅವರಿಗೆ ಮತ ನೀಡಿದ್ದಾರೆ. ಎನ್‌ಸಿಪಿಯ ಗುಜರಾತ್ ಶಾಸಕ ಕಂದಲ್ ಎಸ್, ಜಡೇಜಾ, ಜಾರ್ಖಂಡ್‌ನ ಶಾಸಕ ಕಮಲೇಶ್ ಸಿಂಗ್ ತಾವು ಮುರ್ಮು ಅವರಿಗೆ ಮತ ನೀಡಿದ್ದೇವೆ ಎಂದು ಹೇಳಿದ್ದಾರೆ.
ಒಡಿಶಾ ಕಾಂಗ್ರೆಸ್ ಶಾಸಕ ಮುಹಮ್ಮದ್ ಮೊಕಿಮ್, “ನಾನು ಕಾಂಗ್ರೆಸ್ ಶಾಸಕ. ಆದರೆ, ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿಗೆ ಮತ ಚಲಾಯಿಸಿದ್ದೇನೆ. ನನ್ನ ಆತ್ಮಸಾಕ್ಷಿಯಂತೆ ನಡೆದುಕೊಂಡಿದ್ದೇನೆ. ಇದು ನನ್ನ ವೈಯಕ್ತಿಕ ನಿರ್ಧಾರ' ಎಂದು ಹೇಳಿದ್ದಾರೆ. ಎನ್‌ಸಿಪಿ ಹಾಗೂ ಕಾಂಗ್ರೆಸ್ ಪ್ರತಿಪಕ್ಷದ ರಾಷ್ಟ್ರಪತಿ ಅಭ್ಯರ್ಥಿ ಯಶವಂತ್ ಸಿನ್ಹಾ ಅವರನ್ನು ಬೆಂಬಲಿಸಿದೆ.