ಬೆಳ್ತಂಗಡಿ, ಜ.೨೬: ಹಿಂದೂ ಜನ ಜಾಗೃತಿ ಸಮಿತಿಯ ವತಿಯಿಂದ ಉಜಿರೆಯ ಜನಾರ್ದನ ಸ್ವಾಮಿ ದೇವಸ್ಥಾನದ ವಠಾರದಲ್ಲಿ ಏರ್ಪಡಿಸ ಲಾಗಿದ್ದ ಹಿಂದೂ ಧರ್ಮ ಜಾಗೃತಿ ಸಭೆಯ ಬಗೆಗೆ ವರದಿ ಮಾಡಲು ತೆರಳಿದ್ದ ಪತ್ರಕರ್ತನೋರ್ವನನ್ನು ಮುಸ್ಲಿಂ ಎಂಬ ಕಾರಣಕ್ಕೆ ಸಭೆಯಿಂದ ಹೊರಗೆ ಕಳುಹಿಸಿದ ಘಟನೆ ಇಂದು ನಡೆದಿದೆ.
ಸ್ಥಳೀಯ ಸುದ್ದಿ ಬಿಡುಗಡೆ ಪತ್ರಿಕೆಯ ಕಚೇರಿಯ ವರದಿಗಾರ ಅಶ್ರಫ್ ಅಲಿಕುಂಞಿ ಎಂಬವರನ್ನು ವರದಿ ಮಾಡುವುದಕ್ಕಾಗಿ ಸಭೆಗೆ ಕಳುಹಿಸ ಲಾಗಿತ್ತು. ಸಭೆ ಆರಂಭವಾಗಲು ಸಿದ್ಧತೆಗಳು ನಡೆಯುತ್ತಿದ್ದಾಗ ಅಶ್ರಫ್, ಪತ್ರಕರ್ತರಿಗಾಗಿ ಹಾಕಲಾಗಿದ್ದ ಆಸನ ದಲ್ಲಿ ಕುಳಿತರು. ಕೂಡಲೇ ಇದನ್ನು ಗುರುತಿಸಿದ ಸಂಘಟಕರು ಇವರಲ್ಲಿಗೆ ಬಂದು ಇಲ್ಲಿ ಮುಸ್ಲಿಮರಿಗೆ ಪ್ರವೇಶ ವಿಲ್ಲ ಎಂದು ತಿಳಿಸಿದರು.
“ಮುಸ್ಲಿಮನಾಗಿ ನಾನು ಇಲ್ಲಿಗೆ ಬಂದಿಲ್ಲ. ಪತ್ರಿಕೆಯೊಂದಕ್ಕೆ ವರದಿ ಮಾಡಲು ಬಂದಿದ್ದೇನೆ” ಎಂದು ಅಶ್ರಫ್ ವಿವರಿಸಿದರೂ, ಸಂಘಟಕರು ಅದಕ್ಕೆ ಕಿವಿಕೊಡದೆ ಅವರನ್ನು ಹೊರಗೆ ಕಳುಹಿಸಿದ್ದಾರೆ.
ಹಿಂದೂ ಜನಜಾಗೃತಿ ಸಮಿತಿಯ ಪರವಾಗಿ ರಮೇಶ ನಾಯಕ್ ಎಂಬ ವರು ಎಲ್ಲಾ ಪತ್ರಿಕೆ ಗಳಿಗೂ ಆಮಂತ್ರಣ ನೀಡಿ ಕಾರ್ಯ ಕ್ರಮಕ್ಕೆ ಬರುವಂತೆ ವಿನಂತಿಸಿದ್ದರು. ಅದರಂತೆ ಅಲ್ಲಿಗೆ ತೆರಳಿ ದಾಗ ಮೇಲಿನ ಅನುಭವ ಎದುರಾಗಿದೆ.
ಪ್ರಚೋದನಕಾರಿ ಘೋಷಣೆಗಳ ಬ್ಯಾನರ್‌ಗಳನ್ನು ಹಾಕಲಾಗಿತ್ತಾದರೂ, ಇಂದಿನ ಸಭೆ ಯಾವುದೇ ಗುಪ್ತ ಸಭೆಯಾಗಿರದೆ ಧ್ವನಿವರ್ಧಕ ಹಾಕಿಯೇ ನಡೆಸಲಾಗಿತ್ತು. ಆದರೂ ಪತ್ರಕರ್ತ ನನ್ನು ಹೊರಗೆ ಕಳುಹಿಸಿದ್ದು ವಿಶೇಷ.