ಭಟ್ಕಳ: ತಾಲೂಕಿನ ಮೂಡಭಟ್ಕಳ ಬೈಪಾಸ ಭಾಗದ ಕ್ರಷಿಕರಿಗೆ ಕ್ರಷಿ ಕೆಲಸಕ್ಕೆ ಉಪಯುಕ್ತವಾದ ಕಲ್ಲುಸಂಕ ಹೊಳೆಗೆ ಅಲ್ಲಿನ ಟಾಪ್ ಟವರನಲ್ಲಿರುವ ಲಾಡ್ಜ ನ ಮಲಿನ ತ್ಯಾಜ್ಯ ನೀರು ಸೇರುತ್ತಿರುವ ಹಿನ್ನೆಲೆ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಖಾಸಗಿ ವ್ಯಕ್ತಿಯ ಮಾಲೀಕತ್ವದ ಟಾಪ್ ಟವರನ ಲಾಡ್ಜನ ಕಟ್ಟಡದಿಂದ ಮಲೀನ ತ್ಯಾಜ್ಯ ನೀರನ್ನು ಈ ಭಾಗದ ಹೊಳೆಗೆ
ಬೀಡಲಾಗುತ್ತಿದ್ದು,ಈ ಬಗ್ಗೆ ಅದೆಷ್ಟೇ ಮನವಿ ಸಲ್ಲಿಸಿ ಸಮಸ್ಯೆ ಪರಿಹಾರಕ್ಕೆ ಸ್ಥಳೀಯರು ಒತ್ತಾಯಿಸಿದರು ಸಹ ಪುರಸಭೆ ಅತ್ತ ಗಮನ ಹರಿಸುತ್ತಿಲ್ಲ ಎಂದು ಅಧಿಕಾರಿಗಳ ವಿರುದ್ದ ಕಿಡಿಕಾಡಿದ್ದಾರೆ.
ಮೂಡಭಟ್ಕಳದಲ್ಲಿರುವ ಹೊಟೇಲಿನವರು ಹಾಗೂ ಸ್ಥಳೀಯ ಅಂಗಡಿಕಾರರು ತಮ್ಮ ಅಂಗಡಿಯ ತ್ಯಾಜ್ಯ ನೀರು ಹಾಗೂ ಬಾಟಲಿ ಹಾಗೂ ಇನ್ನಿತರ ವಸ್ತುಗಳನ್ನು ನದಿಗೆ ಎಸೆಯುತ್ತಿರುವುದರಿದಲೇ ಹೊಳೆ ತ್ಯಾಜ್ಯಮಯವಾಗಿ ಕಲುಷಿತಗೊಳ್ಳಲು ಕಾರಣ ಎನ್ನಲಾಗಿದೆ.
ಈ ನೀರನ್ನು ಪ್ರಾಣಿಗಳು ಕುಡಿದರೂ ರೋಗ ಬರುವ ಸಾಧ್ಯತೆ ಇದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಹೊಳೆಗೆ ತ್ಯಾಜ್ಯ ನೀರು ಬಿಡುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪುರಸಭೆ, ಎಸಿ ಹಾಗೂ ಶಾಸಕರಿಗೆ ಸ್ಥಳೀಯರು ಮನವಿ ಮಾಡಿದ್ದರೂ ಯಾವುದೇ ಕ್ರಮ ಆಗಿಲ್ಲ
ಕಲುಷಿತ ನೀರಿನಿಂದಾಗಿ ಸೊಳ್ಳೆಗಳ ಕಾಟ ಹೆಚ್ಚಾಗಿ ರೋಗರುಜಿನಗಳು ಹರಡುವ ಭಯ ಉಂಟಾಗಿದೆ.
ಕೂಡಲೇ ಈ ಕುರಿತು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಪ್ರತಿಭಟನೆ ನಡೆಸುವುದು. ಅನಿವಾರ್ಯವಾದೀತು ಎಂದು ಸ್ಥಳೀಯರಾದ ಮಾದೇವ ನಾಯ್ಕ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.