ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಕಲಘಟಗಿಯಲ್ಲಿ ಅಕ್ರಮವಾಗಿ ಬೆಳೆದಿದ್ದ ಗಾಂಜಾ ಗಿಡಗಳು ಅಬಕಾರಿ ಪೊಲೀಸರ ವಶಕ್ಕೆ. ಆರೋಪಿ ವಿರುದ್ಧ ಪ್ರಕರಣ ದಾಖಲು

ಕಲಘಟಗಿಯಲ್ಲಿ ಅಕ್ರಮವಾಗಿ ಬೆಳೆದಿದ್ದ ಗಾಂಜಾ ಗಿಡಗಳು ಅಬಕಾರಿ ಪೊಲೀಸರ ವಶಕ್ಕೆ. ಆರೋಪಿ ವಿರುದ್ಧ ಪ್ರಕರಣ ದಾಖಲು

Fri, 17 Jun 2022 01:02:04  Office Staff   SO News

ಧಾರವಾಡ :  ಕಲಘಟಗಿ ತಾಲೂಕಿನ ದೇವಿಕೊಪ್ಪ ಗ್ರಾಮದಿಂದ ಶಿಂಗನಳ್ಳಿ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿರುವ ಮಾರುತಿ ಗಂಗಪ್ಪ ಕಿಳ್ಳಿಕ್ಯಾತರಗೆ ಸೇರಿದ ಜಮೀನಿನಲ್ಲಿ ಅಕ್ರಮವಾಗಿ ಬೆಳೆಸಿದ್ದ 5.5 ಅಡಿ ಯಿಂದ 8 ಅಡಿ ಎತ್ತರದ 4 ಹಸಿ ಗಾಂಜಾ ಗಿಡಗಳನ್ನು ಪತ್ತೆ ಹಚ್ಚಿ ವಶಪಡಿಸಿಕೊಳ್ಳಲಾಗಿದೆ. 

ಮಾರುತಿ ಗಂಗಪ್ಪ ಕಿಳ್ಳಿಕ್ಯಾತ ಎಂಬಾತ ನಾಪತ್ತೆಯಾಗಿದ್ದು, ಬಂಧನಕ್ಕಾಗಿ ಬಲೆ ಬೀಸಿದ್ದಾರೆ. ಆತನ ವಿರುದ್ಧ ಕಲಘಟಗಿ ವಲಯದ ಅಬಕಾರಿ ನಿರೀಕ್ಷಕ ಅಮೀತ ಬೆಳ್ಳುಬ್ಬಿ ಅವರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

 ಘಟನೆಯಲ್ಲಿ 15500ರೂ ಮೌಲ್ಯದ ಹಸಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ.
ಬೆಳಗಾವಿ ಕೇಂದ್ರಸ್ಥಾನದ ಅಬಕಾರಿ ಅಪರ ಆಯುಕ್ತ ಡಾ. ವೈ ಮಂಜುನಾಥ, ಬೆಳಗಾವಿ ವಿಭಾಗದ ಅಬಕಾರಿ ಜಂಟಿ ಆಯುಕ್ತ ಫಿರೋಜ ಕಿಲ್ಲೆದಾರ ಹಾಗೂ ಧಾರವಾಡ ಜಿಲ್ಲೆಯ ಡೆಪ್ಯೂಟಿ ಕಮೀಶನರ್ ಆಫ್ ಎಕ್ಸೈಸ್ ಆಗಿರುವ ಕೆ.ಪ್ರಶಾಂತಕುಮಾರ ಮಾರ್ಗದರ್ಶನದಲ್ಲಿ ಹಾಗೂ ಧಾರವಾಡ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕರ ನೇತೃತ್ವದಲ್ಲಿ  ಅಬಕಾರಿ ನಿರೀಕ್ಷಕ ಅಮೀತ ಬೆಳ್ಳುಬ್ಬಿ, ಅಬಕಾರಿ ಉಪ ನಿರೀಕ್ಷಕ ಮಹೇಶ ಪಾಟೀಲ, ಪೇದೆಗಳಾದ ವಿಶಾಲ ಪಾಟೀಲ್ ಮತ್ತು ಆನಂದ ಮಿರಿಯಾಲ್ ಪಿಚ್ಚಯ್ಯ ಹಾಗೂ ಹಿರಿಯ ವಾಹನ ಚಾಲಕ ಎಸ್.ಹೆಚ್.ಕಟ್ಟಿಮನಿ  ಹಾಗೂ ಧಾರವಾಡ ಉಪ ವಿಭಾಗದ ಸಿಬ್ಬಂದಿಗಳು ದಾಳಿಯಲ್ಲಿ ಪಾಲ್ಗೊಂಡಿದ್ದರು.


Share: