ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಕರ್ನಾಟಕ ಉಚ್ಛ ನ್ಯಾಯಾಲಯ, ಧಾರವಾಡ ಪೀಠದಲ್ಲಿ ರಾಷ್ಟ್ರೀಯ ಲೋಕ ಅದಾಲತ್‍ನಲ್ಲಿ 181 ಪ್ರಕರಣಗಳು‌ ಇತ್ಯರ್ಥ

ಕರ್ನಾಟಕ ಉಚ್ಛ ನ್ಯಾಯಾಲಯ, ಧಾರವಾಡ ಪೀಠದಲ್ಲಿ ರಾಷ್ಟ್ರೀಯ ಲೋಕ ಅದಾಲತ್‍ನಲ್ಲಿ 181 ಪ್ರಕರಣಗಳು‌ ಇತ್ಯರ್ಥ

Thu, 17 Nov 2022 03:45:23  Office Staff   SO News

ಧಾರವಾಡ : ಕರ್ನಾಟಕ ಉಚ್ಛ ನ್ಯಾಯಾಲಯ ಧಾರವಾಡ ಪೀಠದಲ್ಲಿ    “ರಾಷ್ಟ್ರೀಯ  ಲೋಕ ಅದಾಲತ್‍”  ಹಿರಿಯ ನ್ಯಾಯಮೂರ್ತಿಗಳಾದ   ಎಸ್. ಸುನಿಲ್ ದತ್ ಯಾದವ್  ಮಾರ್ಗದರ್ಶನದಲ್ಲಿ ನಡೆಯಿತು.

ಅದಾಲತ್‍ನಲಿ ಹಿರಿಯ ನ್ಯಾಯಮೂರ್ತಿಗಳೊಂದಿಗೆ ನ್ಯಾಯಮೂರ್ತಿಗಳಾದ ಎಸ್. ರಾಚಯ್ಯ, ಮತ್ತು ಜಿ. ಬಸವರಾಜ  ಹಾಗೂ  ಲೋಕ ಅದಾಲತ್‍ನ ಸದಸ್ಯರಾದ   ಎಸ್. ಎಲ್. ಮಟ್ಟಿ, ವಿ.ಜಿ. ದಳವಾಯಿ ಮತ್ತು ಎಮ್. ಎಮ್. ಕೊಣ್ಣೂರು ಈ ರೀತಿಯಾಗಿ ಒಟ್ಟು  3 ಪೀಠಗಳನ್ನು ಆಯೋಜಿಸಲಾಗಿತ್ತು. ಸದರಿ ಅದಾಲತ್‍ನಲ್ಲಿ ಒಟ್ಟು 885 ಪ್ರಕರಣಗಳನ್ನು ವಿಚಾರಣೆಗೆಂದು ಗುರುತಿಸಿಕೊಳ್ಳಲಾಗಿತ್ತು. ಆ ಪೈಕಿ ಒಟ್ಟು 181 ಪ್ರಕರಣಗಳನ್ನು ರೂ.5,60,11,118/- ಮೊತ್ತಕ್ಕೆ ಇತ್ಯರ್ಥಪಡಿಸಲಾಯಿತು. 

ಧಾರವಾಡ ಪೀಠದ ಉಚ್ಛ ನ್ಯಾಯಾಲಯ ಕಾನೂನು ಸೇವಾ ಸಮಿತಿ, ಕಾರ್ಯದರ್ಶಿಗಳು ಮತ್ತು ಅಧೀಕ ವಿಲೇಖನಾಧಿಕಾರಿ ವೆಂಕಟೇಶ್ ಆರ್. ಹುಲಗಿ  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Share: