ಶಿರಸಿ : ಉತ್ತರಕನ್ನಡ ಜಿಲ್ಲೆಯ ಮೊಗೇರರಿಗೆ ಎಸ್ಸಿ ಸೌಲಭ್ಯ ಮುಂದುವರಿಸುವಂತೆ ಆಗ್ರಹಿಸಿ ಶಿರಸಿಯಲ್ಲೂ ಕೂಡ ಮೊಗೇರ ನಾಗರಿಕರು ಪ್ರತಿಭಟನೆ ನಡೆಸಿದ್ದಾರೆ.
ಬುಧವಾರ ನಗರದ ಬಿಡ್ಕಿಬೈಲಿನಲ್ಲಿರುವ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಪ್ರತಿಭಟನಾಕಾರರು ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಸಿಪಿ ಬಜಾರ್ ರಸ್ತೆ ಮೂಲಕ ಉಪವಿಭಾಗಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದರು.
ಬಳಿಕ ಉಪವಿಭಾಗಾಧಿಕಾರಿ ಕಚೇರಿ ಮುಂದೆ ಧರಣಿ ಕುಳಿತು ಮನವಿ ಸಲ್ಲಿಸಿದರು.
ಮೊಗೇರ ಜಾತಿಗೆ ತಡೆಹಿಡಿಯಲ್ಪಟ್ಟ ಪರಿಶಿಷ್ಟ ಜಾತಿ ಸೌಲಭ್ಯವನ್ನ ವಿಳಂಭವಿಲ್ಲದೇ ಮುಂದುವರಿಸಬೇಕು. ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನ ವಿತರಿಸಲು ತಂತ್ರಾಂಶದಲ್ಲಿದ್ದ ಪ್ರ ವರ್ಗ 1ರಲ್ಲಿ ಮೊಗೇರ ಕಡಿಮೆಗೊಳಿಸುವುದು. ಉದ್ಯೋಗ ಹಾಗೂ ಶಿಕ್ಷಣ ಆಕಾಂಕ್ಷಿಗಳ ತಡೆಹಿಡಿಯಲ್ಪಟ್ಟಿರುವ ಸಿಂಧುತ್ವ ಪ್ರಮಾಣ ಪತ್ರವನ್ನ ವಿಳಂಭ ಮಾಡದೇ ನೀಡಬೇಕು. ಜಾತಿ ಪ್ರಮಾಣ ಪತ್ರಕ್ಕೆ ಸಂಬಂಧಿಸಿದಂತೆ ಸಮಾಜದವರ ವಿರುದ್ಧ ದಾಖಲಿಸಿದ ಕ್ರಿಮಿನಲ್ ಪ್ರಕರಣವನ್ನ ಹಿಂಪಡೆಯುವುದು. ಮೊಗೇರ ಜಾತಿಗೆ ಪರಿಶಿಷ್ಟ ಜಾತಿ ಪ್ರಮಾಣಪತ್ರವನ್ನವನ್ನ ರದ್ದುಪಡಿಸಲು ನೀಡಿದ ಆದೇಶವನ್ನ ಹಿಂಪಡೆಯುವುದು. ಸೇರಿದಂತೆ ವಿವಿಧ ಬೇಡಿಕೆಯನ್ನು ಈಡೇರಿಸುವಂತೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಮಾಜಿ ಶಾಸಕ ವಿವೇಕಾನಂದ ವೈದ್ಯ, ಅಶೋಕ ಭಟ್ಕಳ, ರಾಜು ಉಗ್ರಾಣಕರ, ಗಣೇಶ ಜೈವಂತ ಸೇರಿದಂತೆ ಐನೂರಕ್ಕೂ ಹೆಚ್ಚು ಜನ ಭಾಗವಹಿಸಿದ್ದರು.