ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಎಸ್ಪಿ ಸ್ಕ್ವಾಡ್ ನ ಅಧಿಕಾರಿಗಳಿಂದ ನಡೆದ ಹಲ್ಲೆಯನ್ನು ಖಂಡಿಸಿ ಸಹಾಯಕ ಆಯುಕ್ತರಿಗೆ ಮನವಿ

ಎಸ್ಪಿ ಸ್ಕ್ವಾಡ್ ನ ಅಧಿಕಾರಿಗಳಿಂದ ನಡೆದ ಹಲ್ಲೆಯನ್ನು ಖಂಡಿಸಿ ಸಹಾಯಕ ಆಯುಕ್ತರಿಗೆ ಮನವಿ

Sun, 18 Sep 2022 23:41:40  Office Staff   S.O. News Service

ಭಟ್ಕಳ: ಎಸ್ಪಿ ಸ್ಕ್ವಾಡ್ ನ ಅಧಿಕಾರಿಗಳಿಂದ ನಡೆದ ಹಲ್ಲೆಯನ್ನು ಖಂಡಿಸಿ ಸಿರಿಗನ್ನಡ ಗೆಳೆಯರ ಬಳಗ ಬಸ್ತಿಮಕ್ಕಿ ಮುಡೇಶ್ವರ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಗಜಸೇನೆ ಹೊನ್ನಾವರದಿಂದ ಸಹಾಯಕ ಆಯುಕ್ತರಿಗೆ ಮನವಿಯನ್ನು ಸಲ್ಲಿಸಿದರು

ನಾವು ಸಿರಿಗನ್ನಡ ಗೆಳೆಯರ ಬಳಗ ಎಂಬ ಸಂಘವು ಕಟ್ಟಿ ಸುಮಾರು 10 ರಿಂದ 12  ವರ್ಷವಾಗುತ್ತಿದೆ. ನಮ್ಮ ಸಂಘಟನೆಯಿಂದ ಹಲವಾರು ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡಿರುತ್ತೇವೆ ಹಾಗೂ ಕನ್ನಡ ನಾಡು ನುಡಿಯ ವಿಷಯದಲ್ಲಿ ಯಾರಾದರೂ ತಪ್ಪು ಮಾಹಿತಿಯನ್ನು ಕೊಟ್ಟಲ್ಲಿ ಅವರ ವಿರುದ್ಧದ ಹೋರಾಟವನ್ನು ಮಾಡಿರುತ್ತೇವೆ .ನಮ್ಮ ಸಂಘದ ಅಧ್ಯಕ್ಷರಾದ ವಾಸು ಮಂಜಪ್ಪ ನಾಯ್ಕ ಸುಮಾರು 1 ವರ್ಷದಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಮಂಗಳೂರಿನ ಸಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಕೆಲ ದಿನಗಳಿಂದ ಮತ್ತೆ ಹೊಟ್ಟೆನೋವು ಕಾಣಿಸಿಕೊಂಡ ಹಿನ್ನೆಲೆ  ಸೆಪ್ಟೆಂಬರ 7 ರ ರಾತ್ರಿ 12 ಗಂಟೆಗೆ ನಮ್ಮ ಸಂಘದ ಅಧ್ಯಕ್ಷರಾದ ವಾಸು  ಮಂಜಪ್ಪ ನಾಯ್ಕ ತಮ್ಮ ಸಂಬಂಧಿಕರಾದ ಗಣಪತಿ ನಾಯ್ಕ ಇವರೊಂದಿಗೆ ತನ್ನ ಮನೆ ನೀರಗದ್ದೆ  ಬಸ್ತಿಮಕ್ಕಿಯಿಂದ ಆಸ್ಪತ್ರೆಗೆ ಹೊರಡಲು ಎನ್.ಎಚ್.66ರ ದೊಡ್ಡಬಲ್ಸೆ ಕ್ರಾಸ್ ನ ಸ್ವಲ್ಪ ದೂರದಲ್ಲಿರುವ ಹವ್ಯಕ ಸಭಾಭವನದ ಸಮೀಪ  ಮೂತ್ರ ವಿಸರ್ಜನೆ ಮಾಡಲು ತನ್ನ ಕಾರು ನಿಲ್ಲಿಸಿ ಪುನಃ ಕಾರು ಹತ್ತುವ ಸಮಯದಲ್ಲಿ 2 ಕಾರು ಹಾಗೂ 1ಬೈಕ್ ನಲ್ಲಿ ಬಂದ ಒಬ್ಬ ವ್ಯಕ್ತಿ ನನ್ನ ಹಿಂಭಾಗದಿಂದ ಬಂದು ನನ್ನ ಕುತ್ತಿಗೆ ಹಿಡಿದು ಅವಾಚ್ಯ ಶಬ್ದದಿಂದ ಬೈದು ಇಲ್ಲಿ ಏಕೆ ನಿಂತಿರುವೆ?  ಯಾರ ಮನೆ ದರೋಡೆ ಮಾಡಲು ಬಂದಿರುವೆ ಎಂದು ಕೇಳಿದರು. ಅಷ್ಟರಲ್ಲಿ ಉಳಿದ ಸುಮಾರು 7ರಿಂದ 8 ಜನ ನನ್ನ ಮೇಲೆ ಎರಗಿ ನನ್ನ ಕುತ್ತಿಗೆ ಹಾಗೂ ಎದೆ ಭಾಗದ ಮೇಲೆ ಏಕಾಏಕಿ ಹೊಡೆಯತೊಡಗಿದರು . ನಂತರ ನನ್ನನ್ನು ಕೆಳಗೆ ಬೀಳಿಸಿ ಅವರ ಬೂಟ್ ಕಾಲಿನಿಂದ ಒದ್ದು  ಮಾರಣಾಂತಿಕ ಹಲ್ಲೆ ಮಾಡಿರುತ್ತಾರೆ. ಆ ಸಂದರ್ಭದಲ್ಲಿ ನನಗೆ ಬಾಯಾರಿಕೆಯಾಗಿ ನೀರು ನೀರು ಎಂದು ಕೂಗಿಕೊಂಡಿರುತ್ತೇನೆ . ಆ ವೇಳೆ ಅದರಲ್ಲಿದ್ದ ಒಬ್ಬ ನೀರು ಬೇಕೇ ನಿನಗೆ ಎಂದು ಕೇಳುತ್ತಾ ಅವರ ಪ್ಯಾಡ್ ಚಿಪ್ಪನ್ನು ಸರಿಸಿ ಮೂತ್ರ ವಿಸರ್ಜನೆ ಮಾಡಲು ಮುಂದಾಗಿದ್ದರು .ನನ್ನ ಜೊತೆಯಲ್ಲಿದ್ದ ಗಣಪತಿ ನಾಯ್ಕ ಅವರು ದರೋಡೆಕೋರರು ಇರಬಹುದೆಂದು ಓಡಹೋಗಿ ಅಲ್ಲಿ ಪೆಟ್ರೋಲ್ ಬಂಕ್ ನಲ್ಲಿರುವ 112 ಕರೆದು ತಂದು. ಅದರ ಮೇಲೆ ನನ್ನನ್ನು ಮುರುಡೇಶ್ವರ ಪೊಲೀಸ ಸ್ಟೇಷನ್ನಿಗೆ ಕರೆದುಕೊಂಡು ಹೋದರು. ನನ್ನ ಹಿಂಬದಿದಲ್ಲಿ ಇನೋವಾದಲ್ಲಿ  ನನಗೆ ಹೊಡೆದಿರುವ ಎಲ್ಲಾ ವ್ಯಕ್ತಿಗಳು ಬಂದಿದ್ದು. ಅಲ್ಲಿ ವಿಚಾರಿಸಿದರೆ ಇವರು ಎಸ್ಪಿ ಸ್ಕ್ವಾಡ್ ಕಾರವಾರದವರು ಎಂದು ತಿಳಿದು ಬಂದಿರುತ್ತದೆ .ಎಸ್ಪಿ ಸ್ಕ್ವಾಡ್   ಪಿ.ಎಸ್.ಐ ಪ್ರೇಮನಗೌಡ ಪಾಟೀಲ್, ಮಂಕಿ ಪಿ.ಎಸ್ ಐ ಮನಗುಣಿ,  ಭಗವಾನ್ ಇದ್ದು ಒಟ್ಟು 8 ಸಿಬ್ಬಂದಿಗಳು ಇದ್ದರು. ನನಗೆ ಕಿವಿಯಲ್ಲಿ ರಕ್ತಸ್ರಾವ ಆಗಿದ್ದರಿಂದ ಭಟ್ಕಳ ಸರಕಾರಿ ಆಸ್ಪತ್ರೆಗೆ ಹೋಗಿದ್ದು ಆ ಸಮಯದಲ್ಲಿ ಕರ್ತವ್ಯ ನಿರತ ವೈದ್ಯರು ನಿನಗೆ ಸಿಟಿಸ್ಕ್ಯಾನ್ ಅವಶ್ಯಕತೆವಿದೆ .ಸ್ಕ್ಯಾನ್ ಮಾಡಿ ಬರುವಂತೆ ತಿಳಿಸಿದರು. ನಂತರ ನಾನು ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ 3 ದಿನ ದಾಖಲಾಲಿದ್ದು. ಅಲ್ಲಿಂದ ಮುರುಡೇಶ್ವರ ಪೊಲೀಸ್ ಠಾಣೆಗೆ ತೆರಳಿ ಈ ಘಟನೆ ಬಗ್ಗೆ ದೂರು ಕೊಟ್ಟರೂ  ಅದನ್ನು ರಜಿಸ್ಟರ್ ಮಾಡದೆ ಎನ್ ಸಿ ಪ್ರಕರಣ ಎಂದು ದಾಖಲಿಸಿ ಕೊಂಡಿರುತ್ತಾರೆ. ಈ ರೀತಿಯಲ್ಲಿ ಮಾರಣಾಂತಿಕ ಹಲ್ಲೆ ಮಾಡಿರುವುದು  ರಜಿಸ್ಟರ್ ಮಾಡದಿರುವುದು ಖಂಡನೀಯವಾಗಿದೆ . 

ಇವರು ಸಿರಿಗನ್ನಡ ಗೆಳೆಯರ ಬಳಗದ ಅಧ್ಯಕ್ಷ ನಾಗಿದ್ದು ಹಾಗೂ ಬೈಲೂರು ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಸಾಮಾಜಿಕ ಕಾರ್ಯಕರ್ತರಾಗಿದ್ದಾರೆ.ಇಂಥವರಿಗೆ ನ್ಯಾಯ ಸಿಗದಿರುವುದು ಮನುಕುಲಕ್ಕೆ ಅವಮಾನವಾಗಿರುತ್ತದೆ ಆದರೆ ಇದು ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆ ಯಾಗಿರುತ್ತದೆ. ಪೊಲೀಸರು ಅಮಾನುಷವಾಗಿ ನಾಗರಿಕರ ಮೇಲೆ ದಬ್ಬಾಳಿಕೆ ದೌರ್ಜನ್ಯ ನಡೆಸಿತು ಕಾನೂನಿಗೆ ವಿರುದ್ಧವಾಗಿರುತ್ತದೆ ಯಾವುದೇ ತಪ್ಪು ಮಾಡದೆ ಒಬ್ಬ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ್ದು ಆರಕ್ಷಕರೇ ಭಕ್ಷಕರಾಗಿಧಕ್ಕೆ  ಸ್ಪಷ್ಟ ಉದಾಹರಣೆ ಯಾಗಿ ರುತ್ತದೆ .ಕರ್ತವ್ಯಲೋಪ ಎಸಗಿರುವ ಪೊಲೀಸರ ಮೇಲೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಅಲ್ಲದೆ ಸದ್ರಿ ಘಟನೆ ನಡೆದಿದೆ ಎಲ್ಲ ಎಂಬ ಬೇಜವಾಬ್ದಾರಿ ಹೇಳಿಕೆ ಕೊಟ್ಟಿರುತ್ತಾರೆ .ಆದ್ದರಿಂದ ದಯಾಳುಗಳಾದ ತಾವು ಈ ಘಟನೆಗೆ ಕಾರಣವಾದ ಪೊಲೀಸ್ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಂಡು ನ್ಯಾಯ ಕೊಡಿಸಬೇಕು ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ . 

ನ್ಯಾಯ ದೊರಕದೆ ಇದ್ದಲ್ಲಿ ಮುಂದಿನ ದಿನಗಳಲ್ಲಿ ಉಳಿದ ಕನ್ನಡಪರ ಸಂಘಟನೆಗಳ ನೆರವಿನಿಂದ ಜಿಲ್ಲಾದ್ಯಂತ ಉಗ್ರ ಹೋರಾಟ ಮಾಡುವುದಾಗಿ ತಿಳಿಸಿದ್ದಾರೆ


Share: