ಅಂಕೋಲಾ : ಜಿಲ್ಲೆಯ ವಿವಿಧ ಠಾಣಾ ವ್ಯಾಪ್ತಿಯಲ್ಲಿ ದಾಖಲಾದ ಪ್ರಕರಣಗಳಲ್ಲಿ ವಶಪಡಿಸಿಕೊಳ್ಳಲಾದ 75 ಕೆಜಿ ಮಾದಕ ದ್ರವ್ಯವನ್ನ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ ಸುಮನ್ ಫೆನ್ನೆಕರ್ ಸಮ್ಮುಖದಲ್ಲಿ ಭಾನುವಾರ ನಾಶಪಡಿಸಲಾಯಿತು.
ಅಂತರಾಷ್ಟ್ರೀಯ ಮಾದಕದ್ರವ್ಯ ಕಳ್ಳಸಾಗಣೆ ವಿರೋಧಿ ದಿನ ಹಿನ್ನಲೆಯಲ್ಲಿ ಈ ಕ್ರಮ ಕೈಗೊಳ್ಳಲಾಯಿತು.
ಒಟ್ಟೂ 69 ಪ್ರಕರಣಗಳಲ್ಲಿ ಒಟ್ಟು
75.119 ಕೆಜಿ ಗಾಂಜಾ, 195 ಗ್ರಾಂ ಚರಸ್, 61 ಗಾಂಜಾ ಗಿಡ ಸೇರಿ 75.314 ಕೆಜಿ ಮಾದಕದ್ರವ್ಯ ವಶಪಡಿಸಿಕೊಳ್ಳಲಾಗಿತ್ತು. ಒಟ್ಟು 16,17,460 ಲಕ್ಷ ಮೌಲ್ಯದ ಮಾದಕ ದ್ರವ್ಯವನ್ನ ಪೊಲೀಸರು ನಾಶಪಡಿಸಿದರು.
ಅಂಕೋಲಾ ತಾಲೂಕಿನ ಬೊಗ್ರಿಬೈಲ್ನಲ್ಲಿರುವ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಎಸ್ಪಿ ಸುಮನ್ ಪೆನ್ನೇಕರ್ ಎದುರು ನಾಶಪಡಿಸಲಾಯಿತು.