ಭಟ್ಕಳ: ಬೀನಾ ವೈದ್ಯ ಇಂಟರ್ ನ್ಯಾಶನಲ್ ಪಬ್ಲಿಕ್ ಸ್ಕೂಲ್ ಮುರ್ಡೇಶ್ವರ 2021-22 ನೇ ಸಾಲಿನ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬಂದಿದೆ.
ಸುಹಾನ್ ಹರಿಕಾಂತ್ (94.88%) ಅಂಕಗಳು, ಪಡೆಯುವುದರೊಂದಿಗೆ ಶಾಲೆಗೆ ಮೊದಲನೇ ಸ್ಥಾನ ಪಡೆದಿರುತ್ತಾನೆ. ಸದಾಫ್ ಮಿರ್ಜಾ (91.36%) ಅಂಕಗಳು ಪಡೆಯುವುದರೊಂದಿಗೆ ಶಾಲೆಗೆ ಎರಡನೇ ಸ್ಥಾನ ಪಡೆದಿರುತ್ತಾಳೆ. ಅನನ್ಯಾ ಮೊಗೇರ (90.72%) ಅಂಕಗಳು ಪಡೆಯುವುದರೊಂದಿಗೆ ಶಾಲೆಗೆ ಮೂರನೇ ಸ್ಥಾನ ಪಡೆದಿರುತ್ತಾಳೆ.
ಅಹ್ಮದ್ ಅಫ್ರಾಜ್ (89.92) ಅಂಕಗಳು ಪಡೆಯುವುದರೊಂದಿಗೆ ಶಾಲೆಗೆ ನಾಲ್ಕನೇ ಸ್ಥಾನ ಪಡೆದಿರುತ್ತಾನೆ. ವನಿತಾ ಮೊಗೇರ (88.32%) ಅಂಕಗಳು ಪಡೆಯುವುದರೊಂದಿಗೆ ಶಾಲೆಗೆ ಐದನೇ ಸ್ಥಾನ ಪಡೆದಿರುತ್ತಾಳೆ. ಐಶ್ವರ್ಯ ನಾಯ್ಕ (85.92%) ಅಂಕಗಳು ಪಡೆಯುವುದರೊಂದಿಗೆ ಶಾಲೆಗೆ ಆರನೇ ಸ್ಥಾನವನ್ನು ಪಡೆದಿರುತ್ತಾಳೆ. ಒಟ್ಟು 25 ಮಕ್ಕಳಲ್ಲಿ 6 ಮಕ್ಕಳು ಡಿಸ್ಟಿಂಕ್ಷನ್ ಪಡೆದುಕೊಂಡಿರುತ್ತಾರೆ.
ಉಳಿದ ಎಲ್ಲಾ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಶಾಲೆಗೆ ಕೀರ್ತಿಯನ್ನು ತಂದಿರುತ್ತಾರೆ. ಇವರಿಗೆ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮಂಕಾಳ ಎಸ್. ವೈದ್ಯ ಹಾಗೂ ಆಡಳಿತ ನಿರ್ದೇಶಕಿ ಪುಷ್ಪಲತಾ ಎಮ್.ಎಸ್, ಶಾಲೆಯ ಸಂಯೋಜಕರು, ಪ್ರಾಂಶುಪಾಲರು, ಬೋಧಕ ವೃಂದದವರು ಅಭಿನಂದಿಸಿದ್ದಾರೆ