ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಉಡುಪಿ: ಕಾಣೆಯಾಗಿರುವ ಬಾಲಕ - ಪ್ರಕರಣ ದಾಖಲು

ಉಡುಪಿ: ಕಾಣೆಯಾಗಿರುವ ಬಾಲಕ - ಪ್ರಕರಣ ದಾಖಲು

Sun, 25 Oct 2009 02:45:00  Office Staff   S.O. News Service
ಉಡುಪಿ, ಅಕ್ಟೋಬರ್ ೨೪: ದಿನಾಂಕ ೨೩/೧೦/೦೯ ರಂದು ೨೧:೩೦ ಗಂಟೆಗೆ ರಮೀಝ್ ಖಾನ್, ತಂದೆ: ಶಾಜಿ, ವಾಸ: ರೂಂ ನಂಬ್ರ: ೨೦೨, ೨ನೇ ಮಹಡಿ, ಮಾಂಡವಿ ಮೆರಿಡಿಯನ್, ಪಂಚರತ್ನ ಹೋಟೆಲ್‌ನ ಹಿಂಭಾಗ, ಕೋರ್ಟ್ ಎದುರು, ಉಡುಪಿ ಎಂಬವರು ಠಾಣೆಗೆ ಹಾಜರಾಗಿ ಪಿರ್‍ಯಾಧಿ ನೀಡಿದ್ದು ತನ್ನ ತಮ್ಮ ಮೊಹಮ್ಮದ್ ಶೊಹೇಬ್ ಪ್ರಾಯ: ೧೧ ವರ್ಷ ಎಂಬಾತನು ಎಂದಿನಂತೆ ಈ ದಿನ ದಿನಾಂಕ ೨೩/೧೦/೦೯ ರಂದು ಸಂಜೆ ೪:೦೦ ಗಂಟೆಗೆ ಶಾಲೆಂದ ಶಾಲೆಯ ವ್ಯಾನ್‌ನಲ್ಲಿ ಅಪಾರ್ಟ್‌ಮೆಂಟ್‌ನ ಬಳಿ ಬಂದವನು ಲಿಪ್ಟ್‌ನಲ್ಲಿ ಕಟ್ಟಡದ ಟ್ಯಾರಿಸ್‌ನ ಮೇಲಕ್ಕೆ ಹೋದವನು ಟ್ಯಾಂಕಿಯ ಅಡಿಯಲ್ಲಿ ಶಾಲೆಯ ಬ್ಯಾಗ್ ಹಾಗೂ ಶಾಲೆಯ ಸಮವಸ್ತ್ರವನ್ನು ಬ್ಯಾಗಿನ ಒಳಗಡೆ ಇಟ್ಟು ನೀಲಿ ಚಡ್ಡಿ ಹಾಗೂ ಬಿಳಿ ಬಣ್ಣದ ಶರ್ಟ್‌ನ್ನು ಹಾಕಿಕೊಂಡು ಕೆಳಗೆ ಬಂದವನು ನಂತರ ಮನೆಗೆ ಬಾರದೆ ಕಾಣೆಯಾಗಿರುತ್ತಾನೆ.
 
ಈ ಬಗ್ಗೆ ರಮೀಝ್ ಖಾನ್‌ರವರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ ೩೬೩/೦೯ ಕಲಂ ಹುಡುಗ ಕಾಣೆಯಂತೆ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ. ಕಾಣೆಯಾದ ಹುಡುಗನು ಸುಮಾರು ೪ ಅಡಿ ಎತ್ತರ, ಗೋಧಿ ಮೈಬಣ್ಣ ಹೊಂದಿದ್ದು, ನೀಲಿ ಚಡ್ಡಿ ಹಾಗೂ ಬಿಳಿ ಬಣ್ಣದ ಶರ್ಟ್ ಧರಿಸಿರುತ್ತಾನೆ, ಇಂಗ್ಲಿಷ್, ಹಿಂದಿ, ಮಲೆಯಾಳಂ, ಕನ್ನಡ,ತುಳು ಭಾಷೆ ಮಾತನಾಡುತ್ತಾನೆ. ಮೇಲೆ ತಿಳಿಸಿದ ಚಹರೆಯುಳ್ಳ ಹುಡುಗ ಪತ್ತೆಯಾದಲ್ಲಿ ಪೊಲೀಸ್ ಉಪನಿರೀಕ್ಷಕರು, ಉಡುಪಿ (೦೮೨೦-೨೫೨೦೪೪, ೦೮೨೦-೨೫೨೦೩೨೯) ಇವರನ್ನು ಅಥವಾ ಪೊಲೀಸ್ ಕಂಟ್ರೋಲ್ ರೂಂ, ಉಡುಪಿ (೦೮೨೦-೨೫೨೬೪೪೪) ಇವರನ್ನು ಸಂಪರ್ಕಿಸಲು ಕೋರಲಾಗಿದೆ.


Share: