ಭಟ್ಕಳ: ಕರಾವಳಿಯಲ್ಲಿ ಬಿಫರಜೋಯ್ ಚಂಡಮಾರುತದಿಂದಾಗಿ ಸಮುದ್ರದಲ್ಲಿ ಅಲೆಗಳು ಭಾರಿ ಎತ್ತರಕ್ಕೆ ಏಳುತ್ತಿದ್ದು ಸಮುದ್ರ ಪ್ರಕ್ಷುಬ್ಧವಾಗಿದೆ. ಈ ನಡುವೆ ಹವಮಾನ ಇಲಾಖೆಯ ಎಚ್ಚರಿಕೆ ನೀಡಿದ್ದರೂ ಪ್ರವಾಸಿಗರು ಮುರುಡೇಶ್ವರದಲ್ಲಿ ಸಮುದ್ರದಲ್ಲಿ ಇಳಿಯುತ್ತಿರುವುದು ವರದಿಯಾಗಿದೆ.
ಮುರುಡೇಶ್ವರದಲ್ಲಿ ಸಮುದ್ರ ಅಬ್ಬರ ಜೋರಾಗಿದೆ. ಮಳೆ ಗಾಳಿಯೊಂದಿಗೆ ಬಿಫರಜೋಯ್ ಚಂಡಮಾರುತವು ತನ್ನ ಪ್ರಭಾವನ್ನು ಬೀರುತ್ತಿದೆ. ಪ್ರವಾಸಿಗರು ಯಾರು ಕೂಡ ಸಮುದ್ರಕ್ಕೆ ಇಳಿಯದಂತೆ ಕಟ್ಟುನಿಟ್ಟಿನ ಎಚ್ಚರಿಕೆಯ ನಡುವೆಯೂ ಕೂಡ ತಿಳಿದೂ ತಿಳಿಯದೆಯೂ ಸಮುದ್ರಕ್ಕಿ ಇಳಿಯುತ್ತಿರುವುದು ಕಂಡು ಬಂದಿದೆ.
ಸ್ಥಳಿಯ ಜೀವರಕ್ಷಕರು ಈ ಕುರಿತಂತೆ ಎಚ್ಚರಿಕೆಯನ್ನು ನೀಡುತ್ತಿದ್ದಾರೆ ಎನ್ನಲಾಗಿದ್ದು ಅವರ ಮಾತಿಗೆ ಕ್ಯಾರೇ ಅನ್ನದ ಪ್ರವಾಸಿಗರು ಸಮುದ್ರದಲೆಗಳಲ್ಲಿ ಮೋಜು ಮಾಡುತ್ತಿದ್ದಾರೆ. ಇಲ್ಲಿ ಪ್ರವಾಸಿಗರ ನಿಯಂತ್ರಣಕ್ಕಾಗಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಬೇಕು ಎಂಬ ಮಾತುಗಳು ಸ್ಥಳಿಯರಿಂದ ಕೇಳಿ ಬರುತ್ತಿದೆ.