ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಉತ್ತರಕನ್ನಡ : ಬಾರೀ ಮಳೆ ಮುನ್ಸೂಚನೆ. ಜಿಲ್ಲೆಯಲ್ಲಿ ನಾಳೆಯೂ ರಜೆ ಮುಂದುವರಿಕೆ.

ಉತ್ತರಕನ್ನಡ : ಬಾರೀ ಮಳೆ ಮುನ್ಸೂಚನೆ. ಜಿಲ್ಲೆಯಲ್ಲಿ ನಾಳೆಯೂ ರಜೆ ಮುಂದುವರಿಕೆ.

Wed, 06 Jul 2022 23:47:15  Office Staff   SO News

ಕಾರವಾರ : ಉತ್ತರಕನ್ನಡ ಜಿಲ್ಲೆಯಲ್ಲಿ ನಾಳೆ ಜುಲೈ 7 ಬೆಳಿಗ್ಗೆಯಿಂದ  ಭಾರೀ ಮಳೆ ಬೀಳುವ ಮುನ್ಸೂಚನೆ ಇರುವುದರಿಂದ ಅಂಗನವಾಡಿ,  ಶಾಲಾಕಾಲೇಜುಗಳಿಗೆ, ಶೈಕ್ಷಣಿಕ ಸಂಸ್ಥೆಗಳಿಗೆ ರಜೆ ಮುಂದುವರಿಸಲಾಗಿದೆ.

ಕಳೆದ ಕೆಲ ದಿನಗಳಿಂದ  ಬಾರೀ ಮಳೆ ಬೀಳುತ್ತಿದ್ದು ಜುಲೈ ಏಳರಿಂದ ಮತ್ತೆ ಮಳೆ ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ  ಜಿಲ್ಲಾಧಿಕಾರಿ ಮುಲೈ ಮುಹಿಲನ್ ರಜೆ ಘೋಷಿಸಿ ಆದೇಶಿಸಿದ್ದಾರೆ. 

ಕಾರವಾರ ಮತ್ತು ಶಿರಸಿ ಶೈಕ್ಷಣಿಕ  ಜಿಲ್ಲೆಯ ಉಪನಿರ್ದೇಶಕರಿಗೆ ಆದೇಶ ಪಾಲಿಸುವಂತೆ ಸೂಚಿಸಿದ್ದಾರೆ. 


Share: