ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಉಡುಪಿ : ವಕೀಲೆ ಮನೆಯಿಂದ ನಗ-ನಗದು ಕಳವು ಮಾಡಿದ‌ ಆರೋಪಿ ಬಂಧನ

ಉಡುಪಿ : ವಕೀಲೆ ಮನೆಯಿಂದ ನಗ-ನಗದು ಕಳವು ಮಾಡಿದ‌ ಆರೋಪಿ ಬಂಧನ

Tue, 26 Jul 2022 04:35:36  Office Staff   SO News

ಉಡುಪಿ: ನಗರದ ಕೋರ್ಟ್ ಹಿಂಭಾಗ ದ ರಸ್ತೆಯ ಪಕ್ಕದಲ್ಲಿರುವ ವಕೀಲರಾದ  ವಾಣಿ ವಿ ರಾವ್ ಅವರ ಮನೆಯಲ್ಲಿ ನಗ ನಗದು ಕಳ್ಳತನ ಮಾಡಿದ ಆರೋಪಿಯನ್ನು ಉಡುಪಿ ನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಯನ್ನು ಬಾಗಲಕೋಟೆ ಜಿಲ್ಲೆಯ ನೀಲನಗರ ನಿವಾಸಿ ಮುತ್ತಪ್ಪ ಬಸಪ್ಪ ಮಾವರಾಣಿ ಎಂದು ಗುರುತಿಸಲಾಗಿದೆ.

ಉಡುಪಿಯ ವಕೀಲರಾದ ವಾಣಿ ವಿ ರಾವ್ ಎಂಬವರ ಮನೆಗೆ ಜುಲೈ 19 ರಂದು ರಂದು  ಮನೆಯ ಒಳಪ್ರವೇಶಿಸಿ, ಬೆಡ್‌ರೂಂನಲ್ಲಿದ್ದ ಕಬ್ಬಿಣದ ಕಪಾಟಿನ ಲಾಕರ್‌ನಲ್ಲಿದ್ದ  45 ಸಾವಿರ ರೂ. ನಗದು ಮತ್ತು ಚಿನ್ನದ ಬ್ರೇಸ್‌ಲೇಟ್‌,  ಮುತ್ತಿನ ಬಳೆ, ಚಿನ್ನದ ಖಡಗ ಬಳೆಗಳು, ಚಿನ್ನದ ಸರ,  ಪೆಂಡೆಂಟ್‌, ಮಲ್ಲಿಗೆ ಮೊಗ್ಗು ಚಿನ್ನದ ಸರ, ನೀಲಿ ಕಲ್ಲಿನ ಬೆಂಡೋಲೆ ಮತ್ತು ಕರಮಣಿ ಹರಳಿನ ಬೆಂಡೋಲೆ, ಜುಮ್ಕಿ ಮತ್ತು ಮಾಟಿ-,  ಚಿನ್ನದ ತುಂಡುಗಳು ಮತ್ತು ಕೊಕ್ಕೆ,  ಗ್ರೇನೆಟ್‌ ಹರಳಿನ ನೆಕ್ಲೇಸ್‌, ರೇಷ್ಮೆ ಸೀರೆಗಳು ಮತ್ತು 1 ಸಾಧಾರಣ ಸೀರೆಗಳನ್ನು ಕಳವು ಮಾಡಲಾಗಿತ್ತು. ಕಳವಾದ ಸೊತ್ತುಗಳ ಒಟ್ಟು ಮೌಲ್ಯ ರೂಪಾಯಿ 25 ಲಕ್ಷ ರೂ‌. ಎಂದು ಉಡುಪಿ ನಗರ ಠಾಣೆಯಲ್ಲಿ ದೂರು ನೀಡಿದ್ದರು.

ದೂರನ್ನು ಸ್ವೀಕರಿಸಿದ ಉಡುಪಿ ನಗರ ಠಾಣೆಯ ಪೊಲೀಸರು ಆರೋಪಿಯನ್ನು ಬಂಧಿಸಿ ಆತನಿಂದ 10ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು 38,500 ನಗದನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

ಪ್ರಕರಣದಲ್ಲಿ, ಆರೋಪಿ ಪತ್ತೆಯ ಬಗ್ಗೆ ಪೊಲೀಸ್ ಅಧೀಕ್ಷಕರಾದ ಎಸ್. ವಿಷುವರ್ಧನ್, ಐಪಿಎಸ್, ಉಡುಪಿ ರವರ ಆದೇಶದಂತೆ, ಸಿದ್ಧಲಿಂಗಪ್ಪ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಸುಧಾಕರ ಸದಾನಂದ ನಾಯ್ಕ, ಡಿವೈಎಸ್‌ಪಿ ಉಡುಪಿ ರವರ ನಿರ್ದೇಶ್ರನದಲ್ಲಿ, ಉಡುಪಿ ನಗರ ಪೊಲೀಸ್ ಠಾಣೆಯ ಪೊಲೀಸ್‌ ನಿರೀಕ್ಷಕರಾದ ಪ್ರಮೋದ ಕುಮಾರ್‌ ರವರ ಮಾರ್ಗದರ್ಶನದಂತೆ ಪಿ.ಎಸ್.ಐ-1 ಮಹೇಶ್ ಟಿ,ಎಮ್, ಪ್ರಸಾದ್‌ಕುಮಾರ್ , ಪೊಲೀಸ್‌ ಉಪ ನಿರೀಕ್ಷಕರು ತನಿಖೆ-1, ಹಾಗೂ ಸಿಬ್ಬಂದಿಯವರಾದ ಎ.ಎಸ್‌.ಐ ಆರುಣ್ ಸತೀಶ್ ಬೆಳ್ಳೆ ಹೆಚ್ ಸಿ ಸತೀಶ್, ಮಲ್ಲಯ್ಯ, ಚೇತನ್ ಅನಂದ ಕಾರ್ತಿಕ್, ಕುಮಾರ್ ನಯ್, ಗಡಯ, ಹೇಮಂತ್, ಶಿವಕುಮಾರ್  ಸಹಕರಿಸಿದ್ದರು.


Share: