ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಉಡ ಬೇಟೆಯಾಡಲು ಪ್ರಯತ್ನಿಸಿದ ಕಾಳಿಂಗ ಸರ್ಪ

ಉಡ ಬೇಟೆಯಾಡಲು ಪ್ರಯತ್ನಿಸಿದ ಕಾಳಿಂಗ ಸರ್ಪ

Mon, 12 Sep 2022 04:33:28  Office Staff   SO News

ಶಿರಸಿ : ಬೃಹತ್ ಗಾತ್ರದ ಕಾಳಿಂಗ ಸರ್ಪವೊಂದು ಉಡವನ್ನು ಬೇಟೆಯಾಡುತ್ತಿರುದ ದೃಶ್ಯ ಸೆರೆಯಾಗಿದೆ

 ಶಿರಸಿಯ ಯಾಣ ಕ್ರಾಸ್ ಬಳಿ ಸುಮಾರು ಒಂದು ಗಂಟೆಗೂ ಹೆಚ್ಚು ಹೊತ್ತು  ಕಾಳಿಂಗ ಸರ್ಪ ಉಡವನ್ನು ನುಂಗಲು ಯತ್ನಿಸಿ ವಿಫಲಾಗಿದೆ. ಉಡದ ಬಾಲ ಕಲ್ಲು ಬಂಡೆಗೆ  ಸಿಲುಕಿದ್ದರಿಂದ ಕಾಳಿಂಗ ಸರ್ಪಕ್ಕೆ ಉಡವನ್ನು ನುಂಗಲಾಗದೇ ಅರ್ಧ ನುಂಗಿದ ಉಡವನ್ನು ವಾಪಸ್ ಹೊರಹಾಕಿದೆ. ಬಳಿಕ  ಉಡವೂ ಸಾವನ್ನಪ್ಪಿದೆ. 

ಬೈಕಲ್ಲಿ ತೆರಳುತ್ತಿದ್ದ  ಅನಂತಮೂರ್ತಿ ಮತ್ತಿಘಟ್ಟ ಎನ್ನುವವರು ತಮ್ಮ ಮೊಬೈಲ್ ನಲ್ಲಿ ದೃಶ್ಯವನ್ನು ಸೆರೆ ಹಿಡಿದಿದ್ದಾರೆ. 


Share: