ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಉಚಿತ ತರಬೇತಿಗೆ ಅರ್ಜಿ ಆಹ್ವಾನ

ಉಚಿತ ತರಬೇತಿಗೆ ಅರ್ಜಿ ಆಹ್ವಾನ

Thu, 19 May 2022 13:11:38  Office Staff   SO News

ಕಾರವಾರ : ಕೆಂದ್ರ ಸರಕಾರದ ಗ್ರಾಮೀಣಾಭಿವೃದ್ಧಿ ಮಂತ್ರಾಲಯ ಹಾಗೂ ಕೆನರಾ ಬ್ಯಾಂಕ್ ಜಂಟಿ  ಸಹಯೋಗದಲ್ಲಿ 10 ದಿನಗಳ ಪೇಪರ್ ಕವರ್ ಬ್ಯಾಗ ಮತ್ತು ಪೇಪರ ಲಕೋಟೆ ತಯಾರಿಕಾ ತರಬೇತಿ, 10 ದಿನಗಳ ಫಾಸ್ಟ್ ಫುಡ್ ತರಬೇತಿ, 13 ದಿನಗಳ  ಸಿ.ಸಿ ಕ್ಯಾಮರಾ ದುರಸ್ತಿ ಮತ್ತು ಅಳವಡಿಕೆ ತರಬೇತಿ, ಹಾಗೂ 30 ದಿನಗಳ ಎಲೆಕ್ಟ್ರಿಕ್ ಮೋಟರ್ ರಿರ್ವಂಡಿಂಗ್ ಉಚಿತ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ.

ತರಬೇತಿಯನ್ನು ಉಚಿತ ಊಟ ವಸತಿಯೊಂದಿಗೆ ನೀಡಲಾಗುವುದು.  ಗ್ರಾಮೀಣ ಭಾಗದ ಅರ್ಹ ಬಿ.ಪಿ.ಎಲ್ ಕುಟುಂಬದ  ಕಾಮರ್ಸ್ ಓದಿದ 18 ರಿಂದ 45ರ ವರ್ಷದೊಳಗಿನ ಆಸಕ್ತ ಯುವಕರು  ಯುವತಿಯರು  ಮೇ 31 ರೊಳಗೆ ಅರ್ಜಿ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಹಳಿಯಾಳ ಕೆನರಾ ಬ್ಯಾಂಕ್ ದೇಶಪಾಂಡೆ ಸ್ವ- ಉದೋಗ ಸಂಸ್ಥೆ ಅಥವಾ ದೂರವಾಣಿ ಸಂಖ್ಯೆ 08284-295307 9483485489, 9482188780, 9844796998, 8197022501, ಗೆ ಸಂಪರ್ಕಿಸಿ ಎಂದು ಕೆನರಾ ಬ್ಯಾಂಕ್ ದೇಶಪಾಂಡೆ ಆರ್‍ಸೆಟ್ ಸಂಸ್ಥೆಯ ನಿರ್ದೇಶಕ ಪ್ರಸನ್ನಕುಮಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Share: