ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಬೆಂಗಳೂರು: ಸೆಮಿ ಕಂಡಕ್ಟರ್ ನೀತಿ ಜಾರಿಗೆ ತಂದ ಮೊಟ್ಟಮೊದಲ ರಾಜ್ಯ ಕರ್ನಾಟಕ- ಮುಖ್ಯಮಂತ್ರಿಗಳು

ಬೆಂಗಳೂರು: ಸೆಮಿ ಕಂಡಕ್ಟರ್ ನೀತಿ ಜಾರಿಗೆ ತಂದ ಮೊಟ್ಟಮೊದಲ ರಾಜ್ಯ ಕರ್ನಾಟಕ- ಮುಖ್ಯಮಂತ್ರಿಗಳು

Wed, 10 Mar 2010 18:24:00  Office Staff   S.O. News Service

ಬೆಂಗಳೂರು, ಮಾರ್ಚ್ ೧೦ (ಕರ್ನಾಟಕವಾರ್ತೆ)- ಸೆಮಿ ಕಂಡಕ್ಟರ್ ನೀತಿ ಜಾರಿಗೆ ತಂದ ಮೊಟ್ಟಮೊದಲ ರಾಜ್ಯ ಕರ್ನಾಟಕ ಎಂದು ಮುಖ್ಯ ಮಂತ್ರಿ ಶ್ರೀ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ. ವಿಧಾನ ಪರಿಷತ್ ನಲ್ಲಿ ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಚರ್ಚೆಗೆ ಪ್ರತಿಕ್ರಿಯಿಸಿ ಅವರು ಮಾತನಾಡಿದರು. ಸೆಮಿಕಂಡಕ್ಟರ್ ನೀತಿ ಜಾರಿಗೊಳಿಸುವ ಮೂಲಕ ರಾಜ್ಯ ಮುಂಚೂಣಿಗೆ ಸಾಗಿದೆ ಈ ಸಂಬಂಧ ನಿನ್ನೆ ದೆಹಲಿ ಭೇಟಿ ಸಂದಭದಲ್ಲಿ ಕೇಂದ್ರ ಸರ್ಕಾರದ ಹಿರಿಯ ಸಚಿವರ ಗಮನಕ್ಕೆ ತರಲಾಗಿದೆ ಎಂದರು. ಇದಲ್ಲದೆ, ರಾಜ್ಯದಲ್ಲಿ ನೂತನ ವಸ್ತ್ರ ನೀತಿ ತರಲಾಗಿದೆ. ನಾಲ್ಕು ಆಹಾರ ಪಾರ್ಕ್‌ಗಳನ್ನು ಸ್ಥಾಪಿಸಲಾಗಿದ್ದು ಇನ್ನೂ ೬ ಆಹಾರ ಪಾರ್ಕ್ ಸ್ಥಾಪನೆ ಪ್ರಸ್ತಾಪ ಸರ್ಕಾರದ ಮುಂದಿದೆ ಎಂದರು.

 

ನೂತನ ಕೈಗಾರಿಕಾ ನೀತಿ ಜಾರಿಗೆ ತರಲಾಗಿದ್ದು ೫೦ ಕೋಟಿ ರೂಗಳಿಗೂ ಹೆಚ್ಚಿನ ಬಂಡವಾಳ ಹೂಡಿಕೆ ಮಾಡುವ ೩೮ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ ಎಂದರು.

ರಾಜ್ಯದಲ್ಲಿ ನಮ್ಮ ಸರ್ಕಾರ ಸಮಾಜದ ಎಲ್ಲ ವರ್ಗದ ಜನರಿಗೂ ವಿವಿಧ ಸೌಲಭ್ಯಗಳನ್ನು ನೀಡಿದ್ದು ಸುಮಾರು ೧೫೦ ಲಕ್ಷಕ್ಕೂ ಹೆಚ್ಚು ಕುಟುಂಬಗಳು ಯೋಜನೆಗಳ ಲಾಭ ಪಡೆದಿವೆಯೆಂದು ಮುಖ್ಯ ಮಂತ್ರಿಗಳು ತಿಳಿಸಿದರು. ಅಲ್ಲದೆ, ೪೨.೫೬ ಲಕ್ಷ ಜನರು ಸಂಧ್ಯಾಸುರಕ್ಷಾ ಯೋಜನೆ, ವಿಧವಾ ವೇತನ, ಅಂಗವಿಕಲರ ವೇತನ ಹೀಗೆ ವಿವಿಧ ಯೋಜನೆಗಳಿಗೆ ನೇರ ಫಲಾನುಭವಿಗಳಾಗಿದ್ದಾರೆ ಎಂದರು. ಭಾಗ್ಯಲಕ್ಷ್ಮಿಯೋಜನೆ, ಬಿಸಿಯೂಟ, ಆರೋಗ್ಯಕವಚ, ಉಚಿತ ಬೈಸಿಕಲ್ ವಿತರಣೆ ಸ್ಭೆರಿದಂತೆ ವಿವಿಧ ವಿನೂತನ ಕಾರ್ಯಕ್ರಮಗಳನ್ನು ವಿಸ್ತರಿಸಲಾಗಿದೆ ಎಂದರು.

 

ಹಣಕಾಸು ಪರಿಸ್ಥಿತಿ ಸುಸ್ಥಿರ:

 

ರಾಜ್ಯ ಸರ್ಕಾರಕ್ಕೆ ಹಣಕಾಸಿನ ಕೊರತೆ ಇಲ್ಲ ಎಚಿದು ಸ್ಪಷ್ಟ ಪಡಿಸಿರುವ ಶ್ರೀ ಬಿ.ಎಸ್.ಯೆಡಿಯೂರಪ್ಪ ರಾಜ್ಯಸರ್ಕಾರ ಕೈಗೊಂಡ ಯೋಜನೆಗಳಿಗೆ ಆಧ್ಯತೆಯ ಮೇರೆಗೆ ಹಣ ಬಿಡುಗಡೆ ಮಾಡಿರುವುದಾಗಿ ತಿಳಿಸಿದರು. ಕೃಷಿ, ನೀರಾವರಿ, ಗ್ರಾಮ್ಭಿಣಾಭಿವೃದ್ಧಿ ಹಾಗೂ ಮೂಲ ಸೌಲಭ್ಯಕ್ಕೆ ಹೆಚ್ಚಿನ ಆಧ್ಯತೆ ನೀಡಿರುವುದಲ್ಲದೆ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಪ್ರಗತಿ ಸಾಧಿಸಲಾಗಿದೆ ಎಂದರು.g

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಪರಿಸ್ಥಿತಿ ಸುಭದ್ರವಾಗಿದ್ದು ಜನರು ನೆಮ್ಮದಿಯಿಂದ ಬದುಕಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು

ಯಶಸ್ವಿನಿ ಯೋಜನೆಗೆ ೯೯.೬೨ ಕೋಟಿ ರೂ ವೆಚ್ಚ ಮಾಡಲಾಗಿದ್ದು ೧,೧೯,೮೨೩ ಮಂದಿ ಯೋಜನೆಯ ಪ್ರಯೋಜನ ಪಡೆದಿದ್ದಾರೆ. ಅಲ್ಲದೆ, ೨,೯೩,೧೭೯ ಮಂದಿ ಹೊರರೋಗಿಗಳಾಗಿ ಚಿಕಿತ್ಸೆ ಪಡೆದು ಯೋಜನೆಯ ಅನುಕೂಲ ಪಡೆದುಕೊಂಡಿದ್ದಾರೆ ಎಂದರು.

ದ್ರ್ರಾಕ್ಷಾರಸ ನೀತಿ, ರಸಗೊಬ್ಬರ ಖರೀದಿ, ಹೈನುಗಾರಿಕೆಗೆ ಪ್ರೋತ್ಸಾಹದಂತಹ ರೈತಪರ ಯೋಜನೆಗಳನ್ನು ಕೈಗೊಳ್ಳುವ ಮೂಲಕ ಪ್ರಗತಿಯ ಹೆಜ್ಜೆ ಇರಿಸಲಾಗಿದೆ. ಜ್ಞಾನಾಧಾರಿತ ಉದ್ಯೋಗಾವಕಾಶ, ಮಹಿಳೆಯರ ಸಬಲೀಕರಣ, ಸಮಾಜ ಕಲ್ಯಾಣ ಇಲಾಖೆಯ ಮೂಲಕ ಶೋಷಿತರಿಗೆ ಹಲವಾರು ಯೋಜನೆಗಳು, ವೃತ್ತಿಪರ ಕೋರ್ಸ್‌ಗಳಿಗೆ ತರಭೇತಿ, ಹೀಗೆ ಹಲವು ಉಪಯುಕ್ತ ಯೋಜನೆಗಳನ್ನು ಸರ್ಕಾರ ಹಮ್ಮಿಕೊಂಡಿದೆ. ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಇನ್ನೂ ಹಲವಾರು ಕಾರ್ಯಕ್ರಮಗಳನ್ನು ಹಾಕಿಕೊಳ್ಳುವುದಾಗಿ ಮುಖ್ಯ ಮಂತ್ರಿಗಳು ಸದನದಲ್ಲಿ ಭರವಸೆ ನೀಡಿದರು. ಅಂತಿಮವಾಗಿ ರಾಜ್ಯಪಾಲರ ಭಾಷಣದ ವಂದನಾರ್ಪಣೆ ನಿರ್ಣಯವನ್ನು ಸಭಾಪತಿ ವೀರಣ್ಣ ಮತ್ತಿಕಟ್ಟಿ ಧ್ವನಿಮತದ ಮೂಲಕ ಸರ್ವಾನುಮತದಿಂದ ಅಂಗೀಕರಿಸಿದರು.

 

 

 

ಬಳ್ಳಾರಿಯಲ್ಲಿ ೪೯೯೪ ಎಕರೆ ಭೂಮಿ ಸ್ವಾಧೀನಕ್ಕೆ ಅಧಿಸೂಚನೆ: ಮುರುಗೇಶ್ ನಿರಾಣಿ

 

ಬೆಂಗಳೂರು, ಮಾ.೧೦ (ಕರ್ನಾಟಕ ವಾರ್ತೆ)- ಉಕ್ಕಿನ ಸ್ಥಾವರ ಹಾಗೂ ವಿದ್ಯುತ್ ಘಟಕ ಸ್ಥಾಪನೆ ಉದ್ದೇಶಕ್ಕಾಗಿ ಬಳ್ಳಾರಿ ತಾಲೂಕಿನ ಕುಡುತಿನಿ ಹಾಗೂ ಹರಗಿನದೋಣಿ ಗ್ರಾಮಗಳಲ್ಲಿ ಒಟ್ಟು ೪೯೯೪-೬೯ ಎಕರೆ ಜಮೀನು ಸ್ವಾಧೀನಪಡಿಸಿಕೊಳ್ಳಲು ಕಳೆದ ಫೆಬ್ರವರಿ ೫ರಂದು ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಶ್ರೀ ಮುರುಗೇಶ್ ಆರ್ ನಿರಾಣಿ ಅವರು ವಿಧಾನ ಪರಿಷತ್‌ನಲ್ಲಿ ಬುಧವಾರ ತಿಳಿಸಿದರು.

 

ಆರ್ಸೆಲರ್ ಮಿತ್ತಲ್ ಅವರ ೬ ಎಂಟಿಪಿ‌ಎ ಉಕ್ಕಿನ ಸ್ಥಾವರ ಹಾಗೂ ೭೫೦ ಮೆಗಾವ್ಯಾಟ್ ಸಾಮರ್ಥ್ಯದ ವಿದ್ಯುತ್ ಘಟಕ ಸ್ಥಾಪನೆಗಾಗಿ ಭೂಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಲಾಗಿದೆ. ಈ ಪೈಕಿ ೪೦೦೦ ಎಕರೆ ಭೂಮಿಯನ್ನು ಕಂಪನಿಗೆ ಕೊಡಲಾಗುವುದು. ಉಳಿದ ಭೂಮಿಯನ್ನು ಟೌನ್‌ಶಿಪ್ ಹಾಗೂ ಅಧೀನ ಘಟಕಗಳ ಸ್ಥಾಪನೆಗೆ ಉಪಯೋಗಿಸುವ ಉದ್ದೇಶವಿದೆ ಎಂದು ಹೇಳಿದರು.

ಪ್ರಾಥಮಿಕ ಅಧಿಸೂಚನೆಯಂತೆ ಕೆ‌ಐ‌ಎಡಿ ಕಲಂ ೨೮(೨)ರಡಿ ಭೂಮಾಲೀಕರಿಗೆ ವೈಯಕ್ತಿಕ ನೋಟೀಸ್‌ಗಳನ್ನು ನೀಡಲಾಗುತ್ತಿದೆ. ನೋಟೀಸಿಗೆ ಕೆಲವು ರೈತರು ಕೆಲವು ತಿದ್ದುಪಡಿ ಮಾಡುವಂತೆ ಆಕ್ಷೇಪಣೆಗಳನ್ನು ಸಲ್ಲಿಸಿದ್ದಾರೆ. ಇವುಗಳನ್ನು ವಿಚಾರಣೆ ವೇಳೆ ಪರಿಗಣಿಸಲಾಗುವುದು ಎಂದು ಸಚಿವರು ತಿಳಿಸಿದರು.


Share: