ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಉ.ಪ್ರ.: ದಂಪತಿಯ ಹತ್ಯೆ, ದರೋಡೆ, ಸೂತ್ರಧಾರ 12 ವರ್ಷದ ಬಾಲಕನ ಬಂಧನ

ಉ.ಪ್ರ.: ದಂಪತಿಯ ಹತ್ಯೆ, ದರೋಡೆ, ಸೂತ್ರಧಾರ 12 ವರ್ಷದ ಬಾಲಕನ ಬಂಧನ

Mon, 26 Dec 2022 16:18:00  Office Staff   Vb

ಗಾಝಿಯಾಬಾದ್: ಉತ್ತರಪ್ರದೇಶದ ಗಾಝಿಯಾಬಾದ್‌ನಲ್ಲಿ ವೃದ್ದ ದಂಪತಿಯನ್ನು ಹತ್ಯೆಗೈದ ಹಾಗೂ ದರೋಡೆಗೈದ ಪ್ರಕರಣದ ಸೂತ್ರಧಾರನೆಂದು ಹೇಳಲಾದ 12 ವರ್ಷದ ಬಾಲಕ ಹಾಗೂ ಇತರ ಇಬ್ಬರನ್ನು ಶನಿವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನವೆಂಬರ್ 22ರಂದು ಗುಜರಿ ವ್ಯಾಪಾರಿ 60 ವರ್ಷದ ಇಬ್ರಾಹೀಂ ಎಂಬವರು ತನ್ನ ಮನೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅವರ ಪತ್ನಿ ಖಾಲಿ ನಿವೇಶನ ವೊಂದರ ಶೌಚಾಲಯದ ಸಮೀಪ ಸಾವನ್ನಪ್ಪಿದ ಸ್ಥಿತಿಯಲ್ಲಿ ಕಂಡು ಬಂದಿದ್ದರು.

ವೃದ್ದ ದಂಪತಿಯ ಹತ್ಯೆ ಹಾಗೂ ದರೋಡೆಯ ಹಿಂದಿರುವ ಸೂತ್ರಧಾರ 12 ವರ್ಷದ ಬಾಲಕ, ದಂಪತಿಗೆ ಬಾಲಕ ಪರಿಚಯಸ್ಥನಾಗಿದ್ದ. ಇಬ್ರಾಹೀಂ ಗುಜರಿ ವ್ಯಾಪಾರದಿಂದ ಸಾಕಷ್ಟು ಹಣ ಗಳಿಸಿದ್ದಾನೆ ಎಂದು ತಿಳಿದ ಬಾಲಕ ದರೋಡೆ ನಡೆಸಲು ಮೂವರನ್ನು ಸೇರಿಸಿಕೊಂಡಿದ್ದ. ಆದರೆ ಅವರು ದರೋಡೆ ನಡೆಸುವ ಸಂದರ್ಭ ದಂಪತಿಯನ್ನು ಹತ್ಯೆಗೈದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರು ಬಾಲಕ ಹಾಗೂ ಮಂಜೇಶ್ ಹಾಗೂ ಶಿವನನ್ನು ಬಂಧಿಸಿದ್ದಾರೆ. ನಾಲ್ಕನೇ ಆರೋಪಿ ಸಂದೀಪ್ ನಾಪತ್ತೆಯಾಗಿದ್ದಾನೆ. ಆರೋಪಿಗಳಿಂದ 12 ಸಾವಿರ ರೂಪಾಯಿ, ಒಂದು ಮೊಬೈಲ್ ಫೋನ್ ಹಾಗೂ ಚಿನ್ನದ ಸರವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಗಾಝಿಯಾಬಾದ್‌ನ ಹಿರಿಯ ಪೊಲೀಸ್‌ ಅಧಿಕಾರಿ ಇರಜ್ ರಾಜಾ ಅವರು ತಿಳಿಸಿದ್ದಾರೆ.


Share: