ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಬಂಟ್ವಾಳ: ಸೋಮವಾರ ಬಿಸಿ ರೋಡಿನಲ್ಲಿ ಬೀದಿ ನಾಟಕ

ಬಂಟ್ವಾಳ: ಸೋಮವಾರ ಬಿಸಿ ರೋಡಿನಲ್ಲಿ ಬೀದಿ ನಾಟಕ

Tue, 05 Jan 2010 02:46:00  Office Staff   S.O. News Service
ಬಂಟ್ವಾಳ, ಜನವರಿ 4:ಬಂಟ್ವಾಳ ಶಿಕ್ಷಣ ಸಂಪನ್ಮೂಲ ಕೇಂದ್ರ, ಮಕ್ಕಳ ಮಾಸೋತ್ಸವದ ನಿರ್ಣಯಗಳ ಅನುಷ್ಠಾನ ಸಮಿತಿ ದ,ಕ ಜಿಲ್ಲೆ , ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಜಿಲ್ಲಾ ಒಕ್ಕೂಟ ಹಾಗೂ ಸಸಾರ ತಂಡದ ಆಶ್ರಯದಲ್ಲಿ ಮಕ್ಕಳ ಹಕ್ಕುಗಳ ಕುರಿತಾಗಿ ಜಾಗೃತಿ ಬೀದಿನಾಟಕ ಜಾಥಾಕ್ಕೆ  ಸೋಮವಾರ ಬಿ.ಸಿ.ರೋಡಿನಲ್ಲಿ ಚಾಶಲನೆ ದೊರಕಿದೆ.
 
ಮೊಡಂಕಾಪು ದೀಪಿಕಾ ಫ್ರೌಡಶಾಲಾ ಆವರಣದಲ್ಲಿ ಆರಂಭ ಗೊಂಡ ಜಾಗೃತಿ ಬೀದಿ ನಾಟಕ ಜಾಥಾವನ್ನು ಶಾಲಾ ಮುಖ್ಯೋಪಾಧ್ಯಾಯರಾದ ಮಹಾಬಲೇಶ್ವರ ಹೆಬ್ಬಾರ್ ಉದ್ಘಾಟಿಸಿದರು. ಮಕ್ಕಳ ಹಕ್ಕುಗಳ ಸಂದೇಶವನ್ನು ಸಾರುತ್ತಾ ಮಕ್ಕಳ ಕ್ರಿಯಾಶೀಲತೆಗೆ ಮತ್ತಷ್ಟು ಹುರುಪು ತುಂಬಿಸುವ ಜಾಥಾ ಯಶಸ್ಸನ್ನುಕಾಣಲಿ ಎಂದವರು ಶುಭ ಹಾರೈಸಿದರು, ಜಾಥಾದ ಜಿಲ್ಲ ವ್ಯವಸ್ಥಾಪನಾ ಸಮಿತಿ ಸಂಚಾಲಕ ಮಂಜು ವಿಟ್ಲ, ಸಂಸಾರ ತಂಡದ ನಿರ್ದೇಶಕ ಸಂಶುದ್ದೀನ್ ಸಂಪ್ಯ,ವೆಲೊರೆಡ್ ನ ಜಿಲ್ಲಾ ತರಬೇತಿ ಸಂಯೋಜಕ ಸುರೇಶ ಬಾಳಿಲ,ಕ್ಷೇತ್ರ ಸಂಯೋಜಕ ಧರ್ಣಪ್ಪ,ಬಂಟ್ವಾಳ ಶಿಕ್ಷಣ ಸಂಪನ್ಮೂಲ ಕೇಂದ್ರದ ಅಧ್ಯಕ್ಷ ಉಮೇಶ್ ನಿರ್ಮಲ್ ಸ್ವಾಗತಿಸಿದರು. ಜತೆ ಕಾರ್ಯದರ್ಶಿ ಭಾರತಿರಾಜೇಂದ್ರ ವಂದಿಸಿದರು. ಕಾರ್ಯದರ್ಶಿ ಮೌನೇಶ್ ವಿಶ್ವಕರ್ಮ ಕಾರ್ಯಕ್ರಮ ನಿರ್ವಹಿಸಿದರು.

Share: