ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಆಟೋ ಚಾಲಕರು ನಮ್ಮ ಸಮಾಜದ ಆಪದ್ಬಾಂದವರು- ಶಾಸಕ ಸುನೀಲ ನಾಯ್ಕ

ಆಟೋ ಚಾಲಕರು ನಮ್ಮ ಸಮಾಜದ ಆಪದ್ಬಾಂದವರು- ಶಾಸಕ ಸುನೀಲ ನಾಯ್ಕ

Sat, 19 Nov 2022 07:01:08  Office Staff   so news

ಭಟ್ಕಳ: ಶಾಸಕ ಸುನೀಲ ನಾಯ್ಕ ಅವರ ಆಸೆಯಂತೆ ಇಲ್ಲಿನ ಬಂದರ ರಸ್ತೆಯಲ್ಲಿನ ದಿವಂಗತ ಡಾ. ಯು. ಚಿತ್ತರಂಜನ್ ಆಟೋ ರಿಕ್ಷಾ ನಿಲ್ದಾಣಕ್ಕೆ ನೂತನ ಮೇಲ್ಛಾವಣಿ ನಿರ್ಮಾಣದ ಉದ್ಘಾಟನಾ ಸಮಾರಂಭವು ಶುಕ್ರವಾರದಂದು ಶಾಸಕ ಸುನೀಲ ನಾಯ್ಕ ಅವರು ನೆರವೇರಿಸಿದರು. 

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಸುನೀಲ ನಾಯ್ಕ ' ಸಮಾಜದ ಆಗುಹೋಗುಗಳ ಬಗ್ಗೆ ಹೆಚ್ಚಿನ ನಿಗಾ ವಹಿಸುವವರು ಆಟೋ ರಿಕ್ಷಾ ಚಾಲಕರಾಗಿದ್ದಾರೆ. ಯಾವುದೇ ಸಮಸ್ಯೆಯಾದಲ್ಲಿ ಜನರ ಸಹಾಯ ಸಹಕಾರಕ್ಕೆ ಮುಂಚೂಣಿಯಲ್ಲಿ ನಿಲ್ಲುವ ಆಟೋ ಚಾಲಕರ ಸಮಸ್ಯೆಗಳಿಗೆ ನಾನು ಸಹಕಾರ ಮಾಡಬೇಕೆಂಬ ಆಶಯದಂತೆ ಭಟ್ಕಳ ಹೊನ್ನಾವರ ಕ್ಷೇತ್ರದಲ್ಲಿನ ಆಟೋ ರಿಕ್ಷಾ ಚಾಲಕರಿಗೆ ಅವರ ಆಟೋ ನಿಲ್ಲಿಸಲು ಮೇಲ್ಛಾವಣಿ ನಿರ್ಮಿಸುವ ಕೆಲಸಕ್ಕೆ ಮುಂದಾಗಿದ್ದೇನೆ.‌ ಸರಕಾರದಿಂದ ಆಟೋ ಚಾಲಕರಿಗೆ ನಿಲ್ದಾಣದ ಅಭಿವೃದ್ಧಿಗೆ ಅನುದಾನ ವಿಳಂಬವಾಗಲಿದ್ದು, ಈ ಹಿನ್ನೆಲೆ ಚಿಕ್ಕಂದಿನಿಂದಲೂ ಆಟೋ ಚಾಲಕರ ಮೇಲೆ ನನ್ನ ಖಣವಿದ್ದು ಅದನ್ನು ಈ ಮೂಲಕ ತೀರಿಸುವ ಅವಕಾಶ ಸಿಕ್ಕಂತಾಗಿದೆ. ಈ ರಿಕ್ಷಾ ನಿಲ್ದಾಣದ ನಿರ್ಮಾಣಕ್ಕೆ ಸಾಕಷ್ಟು ಅಡೆತಡೆಗಳು ಬಂದಿದ್ದು, ಅವೆಲ್ಲರದ ನಡುವೆ ಆಟೋ ಚಾಲಕರ ಅನೂಕೂಲಕ್ಕೆ ಈ ನಿಲ್ದಾಣ ಮಾಡಲಾಗಿದೆ. 
ಕೇವಲ ರಿಕ್ಷಾ ನಿಲ್ದಾಣದ ಬೇಡಿಕೆಯೊಂದೆ ಅಲ್ಲದೇ ಸಂಘದ ಅಭಿವೃದ್ಧಿಗೆ ವೈಯಕ್ತಿಕವಾಗಿ ಸಹಾಯ ಮಾಡಲು ನಾನು ಸಿದ್ದನಿದ್ದೇನೆ ಎಂದರು.

ಮುಖ್ಯ ಅತಿಥಿ ಮಾಜಿ ಆಟೋ ರಿಕ್ಷಾ ಚಾಲಕ ಮಾಲಕರ ಸಂಘದ ಮಾಜಿ ಅಧ್ಯಕ್ಷ ವೆಂಕಟೇಶ ನಾಯ್ಕ ಮಾತನಾಡಿ 'ಬಹುಬೇಡಿಕೆಯಾದ ಮೇಲ್ಛಾವಣಿ ನಿರ್ಮಾಣದ ಜೊತೆಗೆ 

ಭಟ್ಕಳದಲ್ಲಿ ಪ್ರಮುಖ ಬೇಡಿಕೆಯ ಆಟೋ ಚಾಲಕರಿಗೆ ಪೆಟ್ರೋಲ್ ಹಾಗೂ ಗ್ಯಾಸ್ ದರ ಏರಿಕೆಯ ನಟುವೆ ಸಿ.ಎನ್.ಜಿ. ಪಂಪ್ ನಿರ್ಮಾಣ ಮಾಡಿಕೊಡಬೇಕೆಂದು ಶಾಸಕರಲ್ಲಿ ಮನವಿಯನ್ನು ಮಾಡಿದರು. 

ನಂತರ ಭಟ್ಕಳ ಆಟೋ ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ಕ್ರಷ್ಣ ನಾಯ್ಕ ಆಸರಕೇರಿ ಮಾತನಾಡಿ ' ಜಿಲ್ಲೆಯಲ್ಲಿನ ಆರು ಶಾಸಕರಿಗೆ ಆಟೋ ರಿಕ್ಷಾ ಚಾಲಕರಿಗೊಂದು ಸರಕಾರದಿಂದ ಯಾವುದಾದರು ಅನುದಾನ ಒದಗಿಸಿ ರಿಕ್ಷಾ ನಿಲ್ದಾಣದ ಬೇಡಿಕೆಯನ್ನಿಟ್ಟು ಮನವಿ ಸಲ್ಲಿಸಿದ್ದೆರಲ್ಲಿ ಶಾಸಕ ಸುನೀಲ ನಾಯ್ಕ ಅವರು ನಮಗೆ ಮೊದಲಿಗರಾಗಿ ಸ್ಪಂದಿಸಿದರು. ಭಟ್ಕಳದ ಮಟ್ಟಿಗೆ ಶಾಸಕ ಸುನೀಲ ನಾಯ್ಕ ಅವರು ಆಟೋ ಚಾಲಕರಿಗೆ ಹಾಗೂ ಸಂಘಕ್ಕೆ ಸಾಕಷ್ಟು ಸಹಾಯ ಸಹಕಾರ ನೀಡಿದ್ದಾರೆ ಮುಂಬರುವ ದಿನದಲ್ಲಿ ಇವೆಲ್ಲರ ಪ್ರತಿಫಲ ನಿಮಗೆ ನೀಡಲಿದ್ದು ಖಣ ತೀರಿಸಲಿದ್ದೇವೆ ಎಂದರು. 

ಈ ಸಂದರ್ಭದಲ್ಲಿ ಶಾಸಕ ಸುನೀಲ ನಾಯ್ಕ, ಸಂಘದ ಮಾಜಿ ಅಧ್ಯಕ್ಷ ವೆಂಕಟೇಶ ನಾಯ್ಕ, ಸಂಘದ ಅಧ್ಯಕ್ಷ ಕ್ರಷ್ಣ ನಾಯ್ಕ ಆಸರಕೇರಿ,  ದಿವಂಗತ ಡಾ. ಯು. ಚಿತ್ತರಂಜನ್ ಆಟೋ ರಿಕ್ಷಾ ನಿಲ್ದಾಣದ ಅಧ್ಯಕ್ಷ ಪಾಂಡು ನಾಯ್ಕ, ಕೋವಿಡ ಸಮಯದಲ್ಲಿ ಉತ್ತಮ ಕೆಲಸ ಮಾಡಿದ ಆಟೋ ಚಾಲಕ ಶ್ರೀನಿವಾಸ ನಾಯ್ಕ ಅವರನ್ನು ಸನ್ಮಾನಿಸಿ ಗೌರವಿಸಿದರು.

ಈ ಸಂಧರ್ಭದಲ್ಲಿ ಆಟೋ ರಿಕ್ಷಾ ಚಾಲಕ ಮಾಲಕರ ಸಂಘದ ಆಟೋ ರಿಕ್ಷಾ ಸಮಿತಿ ಅಧ್ಯಕ್ಷ ಮಂಜುನಾಥ ನಾಯ್ಕ, ಆಟೋ ಚಾಲಕರಾದ ಲಕ್ಷ್ಮಣ ನಾಯ್ಕ, ದಿನೇಶ ನಾಯ್ಕ, ಕ್ರಷ್ಣ ನಾಯ್ಕ ತಲಗೇರಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.


Share: