ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಆಟವಾಡುತ್ತಿದ್ದ ಮಗು ಬಾವಿಯಲ್ಲಿ ಬಿದ್ದು ಸಾವು.

ಆಟವಾಡುತ್ತಿದ್ದ ಮಗು ಬಾವಿಯಲ್ಲಿ ಬಿದ್ದು ಸಾವು.

Sun, 27 Aug 2023 01:54:32  Office Staff   SO News

ಕಾರವಾರ : ಮಣ್ಣಿನ ಮೂರ್ತಿ ಮಾಡುತ್ತಾ ಆಟವಾಡುತ್ತಿದ್ದ ಮಗುವೊಂದು ಬಾವಿಯಲ್ಲಿ ಬಿದ್ದು ಮೃತಪಟ್ಟ ಘಟನೆ 
ಕಾರವಾರ ನಗರದ  ಹರಿದೇವ ನಗರದಲ್ಲಿ ಘಟನೆ ನಡೆದಿದೆ.

ಸ್ತುತಿ ಸೂರಜ್ ಬಂಟ (3) ಮೃತಪಟ್ಟ ಮಗು ಎನ್ನಲಾಗಿದೆ. ಶನಿವಾರ ಬೆಳಿಗ್ಗೆ ಮಗು ಮನೆಯ ಬಳಿ ಆಟವಾಡುತ್ತಿತ್ತು.  ಗಣಪತಿ ಮೂರ್ತಿ ಎಂದು ಮಣ್ಣನ್ನ ಬಾವಿಯಲ್ಲಿ ಹಾಕಲು ಏನು ಅರಿಯದ ಕಂದ ಮುಂದಾಗಿದೆ. ಕಾಲು ಜಾರಿ ಬಾವಿಯಲ್ಲಿ ಬಿದ್ದು ಮೃತಪಟ್ಟಿದೆ.

ಮಗು ನಾಪತ್ತೆಯಾಗಿದೆ ಎಂದು ಪೋಷಕರು ಊರಲೆಲ್ಲಾ ಹುಡುಕಾಡಿದ್ದರು. ಮನೆಯ ಹತ್ತಿರದ ಬಾವಿಯಲ್ಲಿ  ಮಗುವಿನ ಮೃತದೇಹ ಪತ್ತೆಯಾಗಿದೆ. ಮುಗ್ದ ಕಂದನ ಸಾವಿನಿಂದ ಸ್ಥಳೀಯರು ಮಮ್ಮಲ ಮರುಗಿದ್ದಾರೆ.ಕಾರವಾರ ನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.


Share: