ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಆಟವಾಡುತ್ತಿದ್ದ ಬಾಲಕ ಮಳೆನೀರು ಹರಿಯುವ ಕಾಲುವೆಗೆ ಬಿದ್ದು ಸಾವು

ಆಟವಾಡುತ್ತಿದ್ದ ಬಾಲಕ ಮಳೆನೀರು ಹರಿಯುವ ಕಾಲುವೆಗೆ ಬಿದ್ದು ಸಾವು

Sun, 22 May 2022 06:19:06  Office Staff   SO NEWS

ಭಟ್ಕಳ: ಅಂಗನವಾಡಿಗೆ ಹೋಗಿ ಬಂದಿದ್ದ ಬಾಲಕನೋರ್ವ ಮನೆಯ ಹಿಂದುಗಡೆ ಆಟವಾಡುತ್ತಾ ಇರುವಾಗ ಮಳೆ ನೀರಿನ ಕಾಲುವೆಯಲ್ಲಿ ಬಿದ್ದು ನೀರು ಕುಡಿದು ಮೃತಪಟ್ಟ ಘಟನೆ ತಾಲೂಕಿನ ಪಡುಶಿರಾಲಿಯಲ್ಲಿ ಸಂಭವಿಸಿದೆ. 
ಮೃತ ಬಾಲಕನನ್ನು ವಿಜೇತ ಗಣಪತಿ ನಾಯ್ಕ (೪ ವರ್ಷ) ಎಂದು ಗುರುತಿಸಲಾಗಿದೆ. ಈತನು ಅಂಗನವಾಡಿಗೆ ಹೋಗಿದ್ದು ಮೇ.೨೦ರಂದು ಮಧ್ಯಾಹ್ನ ಮನೆಗೆ ಬಂದಿದ್ದು ತಾಯಿ ಮನೆಗೆಲಸದಲ್ಲಿರುವಾಗ ಮನೆಯ ಹಿಂದುಗಡೆ ಆಟವಾಡಿಕೊಂಡಿದ್ದ ಎನ್ನಲಾಗಿದೆ. ಅಕಸ್ಮಾತ್ ಮಳೆನೀರು ಹರಿಯುವ ಕಾಲುವೆಗೆ ಬಿದ್ದ ಈತ ನೀರು ಕುಡಿದಿದ್ದು ತಕ್ಷಣ ಗಮನಿಸಿದ ತಾಯಿ ಆತನನ್ನು ಶಿರಾಲಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋದಾಗ ವೈದ್ಯರು ಮೃತ ಪಟ್ಟಿರುವ ಬಗ್ಗೆ ತಿಳಿಸಿದ್ದಾರೆನ್ನಲಾಗಿದೆ.  
ಮಗುವಿನ ಶವ ಆಸ್ಪತ್ರೆಗೆ ಸಾಗಾಣೆ ಮಾಡಿದ್ದು, ಸಂಬಂಧಿಕರ ಆಕ್ರಂದನ ಮಗಿಲು ಮುಟ್ಟಿದೆ.
ಈ ಕುರಿತು ಮೃತ ಬಾಲಕನ ತಂದೆ ಗಣಪತಿ ಕೃಷ್ಣಾ ನಾಯ್ಕ ಮುರ್ಡೇಶ್ವರ ಠಾಣೆಯಲ್ಲಿ ದೂರು ನೀಡಿದ್ದು ದೂರನ್ನು ದಾಖಲಿಸಿಕೊಂಡ ಸಬ್ ಇನ್ಸ್ಪೆಕ್ಟರ್ ಪರಮಾನಂದ ಕೊಣ್ಣೂರ ತನಿಖೆ ನಡೆಸಿದ್ದಾರೆ.


Share: