ಅಂಕೋಲಾ : ಕೇವಲ ಒಂದು ಗ್ರಾಮ ಪಂಚಾಯತ್ ಅಥವಾ ಒಂದು ಸ್ವಚ್ಚತಾ ವಾಹನವನನ್ನಿಟ್ಟುಕೊಂಡು ಇಡೀ ಗ್ರಾಮವನ್ನು ಸ್ವಚ್ಛಗೊಳಿಸಲು ಸಾಧ್ಯವಿಲ್ಲ, ಸ್ವಚ್ಛತೆ ಎನ್ನುವುದು ನಮ್ಮ ಮನೆಯ ಮೊದಲ ಪಾಠವಾಗಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಿಯಾಂಗಾ. ಎಂ ಹೇಳಿದರು
ಅಂಕೋಲಾ ತಾಲೂಕಿನ ಆರ್ವಸಾ ಗ್ರಾಮದಲ್ಲಿ ನಡೆದ ಸ್ವಚ್ಛತಾ ಹೀ ಸೇವಾ ಆಂದೋಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಗ್ರಾಮದ ಪ್ರಮುಖ ಬೀದಿಗಳಾದ ಮಿನು ಮಾರುಕಟ್ಟೆ, ತರಕಾರಿ ಮಾರುಕಟ್ಟೆಗೆ ಸ್ವತಃ ಭೇಟಿ ನೀಡಿ ಸ್ವಚ್ಛಗೊಳಿಸಲು ಗ್ರಾಮದ ಅಧ್ಯಕ್ಷ ಮತ್ತು ಪಿಡಿಓಗಳಿಗೆ ಸೂಚಿಸಿದರು. ನಂತರ ಗ್ರಾಮ ಬೀದಿ, ಗಟಾರುಗಳನ್ನು ಗ್ರಾಮಸ್ಥರು, ಗ್ರಾಮ ಪಂಚಾಯತ್ ಸಿಬ್ಬಂದಿ, ಹಾಗೂ ವಿದ್ಯಾರ್ಥಿಗಳ ಜೊತೆ ಸೇರಿ ಸ್ವಚ್ಛತಾ ಕಾರ್ಯವನ್ನು ಕೈಗೊಂಡರು.
ದಿನ ನಿತ್ಯದ ಬದಲಾವಣೆಯಿಂದಲೆ ಅಭಿವೃದ್ಧಿ ಸಾಧ್ಯವಾಗುವುದು, ನಾವು ಎಷ್ಟೇ ಕಾರ್ಯಕ್ರಮಗಳು ಮಾಡಿದರು ಸಹ, ಸ್ವಚ್ಛತೆಯನ್ನು ಕಾಪಾಡಬೇಕು ಎನ್ನವುದು ನಮ್ಮ ಸ್ವ ಇಚ್ಛೆಯಿಂದ ಬರಬೇಕು. ಕಸ ವಿಂಗಡನೆ ಮಾಡಿ ಅಂತ ಹೇಳಿದರು ಅದು ಸಂಪೂರ್ಣ ಕಾರ್ಯ ರೂಪಕ್ಕೆ ತರಲಾಗುವುದಿಲ್ಲಾ, ಆದ್ದರಿಂದ ನಮ್ಮ ದಿನನಿತ್ಯದ ಬಳಕೆಯ ವಸ್ತುಗಳಲ್ಲಿ ಪ್ಲಾಸ್ಟಿಕ್ ಬಳಸುವುದನ್ನು ಕಡಿಮೆ ಮಾಡುವುದು, ನಮ್ಮ ಸುತ್ತಮುತ್ತಲಿನ ಪ್ರದೇಶ ಹಾಗೂ ನಿವೇಶನಗಳನ್ನು ಸ್ವಚ್ಛವಾಗಿಟ್ಟಕೊಳ್ಳುವುದು, ಮಾರುಕಟ್ಟೆಗೆ ಕೈ ಚೀಲಗಳನ್ನು ಬಳಸುವುದು, ಈ ರೀತಿಯಾಗಿ ಮಾಡುವುದರಿಂದ ಕಡಿಮೆ ಸಮಯದಲ್ಲೇ ನಾವು ಸ್ವಚ್ಛತೆಯಲ್ಲಿ ಬದಲಾವಣೆಯನ್ನು ಕಾಣಬಹುದಾಗಿದೆ ಎಂದರು.
ಪ್ರಮುಖವಾಗಿ ಗ್ರಾಮದ ವಿದ್ಯಾರ್ಥಿಗಳಿಗೆ ಪ್ಲಾಸ್ಟಿಕ್ ಬಳಕೆಯಿಂದ ಮತ್ತು ಅದನ್ನು ಸುಡುವುದರಿಂದ ಉಂಟಾಗುವ ಪರಿಣಾಮದ ಕುರಿತು ಮಾಹಿತಿ ನೀಡಿ, ನೀವು ತಿನ್ನುವ ಚಾಕಲೇಟ್, ಚಿಪ್ಸ ರಾಪರಗಳನ್ನು ಸಿಕ್ಕ ಸಿಕ್ಕಲ್ಲಿ ಬಿಸಾಡುವ ಬದಲು ತಮ್ಮ ಬ್ಯಾಗನಲ್ಲಿ ಇಟ್ಟುಕೊಂಡು ನಂತರ ಕಸದ ಬುಟ್ಟಿಗೆ ಹಾಕುವುದರಿಂದ ಸ್ವಚ್ಚತೆಯನ್ನು ಕಾಪಾಡಬಹುದು ಹಾಗೂ ಗಿಡಗಳನ್ನು ನೆಟ್ಟು, ಪರಿಸರ ಕಾಳಜಿಯನ್ನು ಕುರಿತು ಜಾಗೃತಿ ಮೂಡಿಸಿದರು.
ಈ ಕಾರ್ಯಕ್ರಮದಲ್ಲಿ ಸ್ವಚ್ಛತಾ ಹೀ ಸೇವಾ ಆದೋಂದಲನ ಕಾರ್ಯಕ್ರಮ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಲಾಯಿತು. ಆರ್ವಸಾ ಗ್ರಾಮ ಪಂಚಾಯತ ಪಿಡಿಓ ಸೀತಾ ನಾಯ್ಕ, ಅಂಕೋಲಾ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿ ಸಾವಂತ, ಗ್ರಾಮ ಅಧ್ಯಕ್ಷೆ ಸಾರು ಕುಟಿನೋ, ಉಪಾಧ್ಯಕ್ಷೆ ಅಕ್ಷತಾ ಗಣಪತಿ ನಾಯ್ಕ, ಹಾಗೂ ಗ್ರಾಮದ ಪ್ರಜೆಗಳು, ವಿದ್ಯಾರ್ಥಿಗಳು, ಶಿಕ್ಷಕರು, ಗ್ರಾಮಪಂಚಾಯತ ಸಿಬ್ಬಂದಿ, ಆಶಾ ಕಾರ್ಯಕರ್ತರು, ಸ್ವಚ್ಚತಾ ಕರ್ಮಚಾರಿಗಳು ಭಾಗವಹಿಸಿದ್ದರು.