ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಅರೆಬೈಲ್ ಘಟ್ಟದಲ್ಲಿ ನೂರು ಮೀಟರ್ ಪ್ರಪಾತಕ್ಕೆ ಬಿದ್ದ ಲಾರಿ. ಇಬ್ಬರ ದುರ್ಮರಣ.

ಅರೆಬೈಲ್ ಘಟ್ಟದಲ್ಲಿ ನೂರು ಮೀಟರ್ ಪ್ರಪಾತಕ್ಕೆ ಬಿದ್ದ ಲಾರಿ. ಇಬ್ಬರ ದುರ್ಮರಣ.

Sun, 18 Sep 2022 04:33:14  Office Staff   SO News

ಯಲ್ಲಾಪುರ :  ಗ್ರ್ಯಾನೆಟ್ ಸಾಗಿಸುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ನೂರು ಮೀಟರ್ ಆಳದ ಪ್ರಪಾತಕ್ಕೆ ಬಿದ್ದ ಘಟನೆ ಶನಿವಾರ ನಡೆದಿದೆ. 

ಪರಿಣಾಮವಾಗಿ  ಚಾಲಕ ಹಾಗೂ ಕ್ಲಿನರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗುಂಟೂರು ಮೂಲದ ಸೈದಾ ಎಸ್ಕೆ ಪಚಾ ಸಾಹೇಬ್,  ಶೇಖ  ಬುಡಾ ನರಸರಾವ್ ಪೇಟೆ ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. 

ಯಲ್ಲಾಪುರ ಕಡೆಯಿಂದ ಅಂಕೋಲಾದ ಕಡೆಗೆ ಗ್ರಾನೆಟ್ ತುಂಬಿಕೊಂಡು ಲಾರಿ ತೆರಳುತಿತ್ತು. ಅರೆಬೈಲ್ ರಾ. ಹೆದ್ದಾರಿ 63 ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿಯಾಗಿದೆ. 

ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿವೆ.


Share: