ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಚಿಕ್ಕಬಳ್ಳಾಪುರ: ಕಛೇರಿಗಳಲ್ಲಿ ದೂರವಾಣಿ ಕರೆಗಳನ್ನು ಸ್ವೀಕರಿಸಲು ವ್ಯವಸ್ಥೆ ಮಾಡಲು ಸೂಚನೆ

ಚಿಕ್ಕಬಳ್ಳಾಪುರ: ಕಛೇರಿಗಳಲ್ಲಿ ದೂರವಾಣಿ ಕರೆಗಳನ್ನು ಸ್ವೀಕರಿಸಲು ವ್ಯವಸ್ಥೆ ಮಾಡಲು ಸೂಚನೆ

Wed, 18 Nov 2009 03:19:00  Office Staff   S.O. News Service
ಚಿಕ್ಕಬಳ್ಳಾಪುರ ನವೆಂಬರ್ 17: ಜಿಲ್ಲಾ ಮಟ್ಟದ ಅಧಿಕಾರಿಗಳ ಕಛೇರಿಗೆ ತುರ್ತು ಕಾರ್ಯಗಳ ಮಾಹಿತಿಗಾಗಿ ಜಿಲ್ಲಾ ಉಸ್ತುವಾರಿ ಸಚಿವರ ಕಾರ್ಯಾಲಯದಿಂದ ದೂರವಾಣಿ ಕರೆ ಮಾಡಿದಾಗ ದೂರವಾಣಿ ಕರೆಯನ್ನು ಒಮ್ಮೊಮ್ಮೆ ಯಾರು ಸ್ವೀಕರಿಸುತ್ತಿಲ್ಲವೆಂದು ತುಂಬಾ ವಿಷಾಧ ವ್ಯಕ್ತಪಡಿಸಿರುತ್ತಾರೆ. ಆದುದರಿಂದ ಅಧಿಕಾರಿಗಳು ಕಛೇರಿಯ ಹೊರಗಡೆ ಹೋಗುವ ಸಂದರ್ಭದಲ್ಲಿ ಕಛೇರಿಯ ದೂರವಾಣಿ ಕರೆಗಳನ್ನು ಸ್ವೀಕರಿಸಲು ಸಿಬ್ಬಂದಿಯ ವ್ಯವಸ್ಥೆ ಮಾಡಲು ಜಿಲ್ಲಾಧಿಕಾರಿ ಅನ್ವರ್ ಪಾಷ ಸೂಚಿಸಿದ್ದಾರೆ.

ಪರಿಶಿಷ್ಟ ಜಾತಿಯ ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಮಂಜೂರು


ಚಿಕ್ಕಬಳ್ಳಾಪುರ: ಜಿಲ್ಲೆಯ ಎಲ್ಲಾ ಪರಿಶಿಷ್ಟ ಜಾತಿಯ ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ೨೦೦೮-೦೯ ನೇ ಸಾಲಿನವರೆಗೂ ಬಾಕಿಯಿರುವ ಎಲ್ಲಾ ವಿದ್ಯಾರ್ಥಿವೇತವನ್ನು ಮಂಜೂರು ಮಾಡಿದ್ದು. ವಿದ್ಯಾರ್ಥಿಗಳು ಸಂಬಂಧಿಸಿದ ಪ್ರಾಂಶುಪಾಲರನ್ನು ಸಂಪರ್ಕಿಸಿ ವಿದ್ಯಾರ್ಥಿವೇತವನ್ನು ಪಡೆಯಲು ಕೋರಿದೆ. ಒಂದು ವೇಳೆ ವಿದ್ಯಾರ್ಥಿವೇತನ ಮಂಜೂರು ಆಗದೇ ಇದ್ದ ಪಕ್ಷದಲ್ಲಿ ಸಂಬಂಧಿಸಿದ ತಾಲ್ಲೂಕು ಸಮಾಜ ಕಲ್ಯಾಣ ಅಧಿಕಾರಿಗಳನ್ನು ಅಥವಾ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳನ್ನು ಸಂಪರ್ಕಿಸಬಹುದು.
    ೨೦೦೯-೧೦ನೇ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದ ಮೆಟ್ರಿಕ್ ನಂತರದ ವಿದ್ಯಾರ್ಥಿವೇತವನ್ನು ಗಣಿಕೀಕೃತಗೊಳಿಸಿದ್ದು. ವಿದ್ಯಾರ್ಥಿಗಳು ತಮ್ಮ ನೊಂದಣಿಯನ್ನು ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿಗಳು ಸೂಚಿಸುವ ದಿನಾಂಕದಂದು ನೊಂದಣಿ ಮಾಡಿಸಿದವರಿಗೆ ಮಾತ್ರ ವಿದ್ಯಾರ್ಥಿವೇತನವನ್ನು ಮಂಜೂರು ಮಾಡಲು ಅವಕಾಶವಿರುತ್ತದೆ. ನೋಂದಣಿ ಮಾಡದೇ ಇರುವಂತಹ ಯಾವುದೇ ವಿದ್ಯಾರ್ಥಿಗೆ ವಿದ್ಯಾರ್ಥಿವೇತವನ್ನು ಪಡೆಯುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದ ಎಲ್ಲಾ ವಿದ್ಯಾರ್ಥಿಗಳು ನವೆಂಬರ್ ೨೦೦೯ ರೊಳಗೆ ಸಂಬಂಧಿಸಿದ ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿಗಳ ಕಛೇರಿಯಲ್ಲಿ ನೋಂದಣಿಯನ್ನು ಮಾಡಿಸಬೇಕೆಂದು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾತ್ಕಾಲಿಕ ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗಳಿಗೆ ಅರ್ಜಿ ಆಹ್ವಾನ

ಚಿಕ್ಕಬಳ್ಳಾಪುರ ನವಂಬರ್ ೧೭: ಚಿಂತಾಮಣಿ ತಾಲ್ಲೂಕಿನ ನಗರ/ಗ್ರಾಮಗಳ ವ್ಯಾಪ್ತಿಯಲ್ಲಿ ಗೌರವ ಧನ ಆಧಾರಿತ ತಾತ್ಕಾಲಿಕ ಅಂಗನವಾಡಿ ಕಾರ್ಯಕರ್ತೆಯರ ೬೦ ಹುದ್ದೆಗಳು ಹಾಗೂ ಮಿನಿ ಅಂಗನವಾಡಿ ಕಾರ್ಯಕರ್ತೆಯರ ೩೧ ಹುದ್ದೆಗಳು ಖಾಲಿ ಇದ್ದು. ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.. ಅಭ್ಯರ್ಥಿಗಳು ಹುದ್ದೆಗಳು ಖಾಲಿ ಇರುವ ಸ್ಥಳಗಳಲ್ಲಿಯೇ ದೃಢೀಕರಣ ಪತ್ರವನ್ನು ಪಡೆದು ಅರ್ಜಿಯೊಂದಿಗೆ ಲಗತ್ತಿಸಬೇಕು. ಅರ್ಜಿ ನಮೂನೆಯನ್ನು ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಛೇರಿ, ಚೇಳೂರು ವೃತ್ತ, ಚಿಂತಾಮಣಿ ಇಲ್ಲಿ ಉಚಿತವಾಗಿ ಪಡೆಯಬಹುದು. ಅರ್ಜಿಗಳನ್ನು ಡಿಸೆಂಬರ್ ೮ ಸಂಜೆ ೫.೩೦ ರ ಒಳಗೆ ಸಲ್ಲಿಸಬೇಕೆಂದು ಚಿಂತಾಮಣಿ ತಾಲ್ಲೂಕು ಶಿಶು ಅಭಿವೃದ್ದಿ ಯೋಜನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳು, ಚಿಂತಾಮಣಿ ಇವರನ್ನು ಸಂಪರ್ಕಿಸಬಹುದು.

ಜಿಲ್ಲಾ ಕಾರ್ಯನಿರತ ಪತ್ರಕರ್ತರಿಗೆ ದ್ವಿಚಕ್ರ ವಾಹನ ಕಲಿಕಾ ಪರವಾನಗಿ 

ಚಿಕ್ಕಬಳ್ಳಾಪುರ ನವಂಬರ್ ೧೭: ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಸುಹಾಸ್ ಮೋಟಾರ್‍ಸ್ ಇವರ ವತಿಯಿಂದ ಜಿಲ್ಲೆಯ ಕಾರ್ಯನಿರತ ಪತ್ರಕರ್ತರಿಗೆ ದ್ವಿಚಕ್ರ ವಾಹನ ಕಲಿಕಾ ಪರವಾನಗಿ, ಪರವಾನಗಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಜಿಲ್ಲಾ ಕಾರ್ಯನಿರತ ಪತ್ರಕರ್ತರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಕೋರಿದೆ. 
   ತಮ್ಮ ಇತ್ತೀಚಿನ ಪಾಸ್ ಪೋರ್ಟ್ ಅಳತೆಯ ೬ ಭಾವಚಿತ್ರಗಳು, ವಿಳಾಸ ಹಾಗೂ ವಯಸ್ಸಿನ ದೃಡೀಕರಣ ಪತ್ರಗಳೊಂದಿಗೆ ನವೆಂಬರ್ ೨೬ ರ ಒಳಗೆ ತಮ್ಮ ಹೆಸರನ್ನು ನೋಂದಾಯಿಸಬೇಕೆಂದು ಸಂಘದ ಅಧ್ಯಕ್ಷರಾದ ಕೆ.ಎನ್.ಗೋಪಾಲಚಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಹೆಚ್.ವಿ.ನಾರಾಯಣ ರೆಡ್ಡಿ, ಸುಹಾಸ್ ಮೋಟಾರ್‍ಸ್, ಬಿ.ಬಿ.ರಸ್ತೆ, ಚಿಕ್ಕಬಳ್ಳಾಪುರ ಇವರನ್ನು ಸಂಪರ್ಕಿಸಬಹುದು. ದೂರವಾಣಿ: ೯೮೪೫೮೬೫೪೪೮.

ಗೌರಿಬಿದನೂರಿಗೆ ಲೋಕಾಯುಕ್ತರ ಭೇಟಿ

ಚಿಕ್ಕಬಳ್ಳಾಪುರ ನವಂಬರ್ ೧೭: ಕರ್ನಾಟಕ ಲೋಕಾಯುಕ್ತ ಪೋಲೀಸ್ ಅಧೀಕ್ಷಕರು ಹಾಗೂ ಅಧಿಕಾರಿ ವರ್ಗದವರು ಗೌರಿಬಿದನೂರು ತಾಲ್ಲೂಕಿನ ಸಾರ್ವಜನಿಕರಿಂದ ಗೌರಿಬಿದನೂರು ತಾಲ್ಲೂಕು ಕಾರ್ಯ ನಿರ್ವಹಣಾಧಿಕಾರಿಗಳ ಕಛೇರಿ ಹಾಗೂ ತಹಶೀಲ್ದಾರ್ ಕಛೇರಿಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಅಹವಾಲುಗಳನ್ನು ಗೌರಿಬಿದನೂರು ಪುರಸಭೆಯ ಸಭಾಂಗಣದಲ್ಲಿ ನವೆಂಬರ್ ೧೯ ರಂದು ಬೆಳಿಗ್ಗೆ ೧೧.೩೦ ರಿಂದ ೨ ಗಂಟೆವರೆಗೆ ಸ್ವೀಕರಿಸಲಿದ್ದಾರೆ. ಗೌರಿಬಿದನೂರು ತಾಲ್ಲೂಕಿನ ಕಾರ್ಯ ನಿರ್ವಹಣಾಧಿಕಾರಿ ಹಾಗೂ ತಹಶೀಲ್ದಾರ್ ರವರುಗಳು ಭಾಗವಹಿಸುತ್ತಿದ್ದು. ಸದರಿ ಎರಡೂ ಕಛೇರಿಗಳಲ್ಲಿ ಗೌರಿಬಿದನೂರು ತಾಲ್ಲೂಕಿನ ಸಾರ್ವಜನಿಕರ ಕೆಲಸಗಳನ್ನು ಕಾನೂನು ಪ್ರಕಾರ ಮಾಡಿಕೊಡಲು ಅನಗತ್ಯ ವಿಳಂಭ/ನಿರ್ಲಕ್ಷ್ಯೆ ಮಾಡುತ್ತಿದ್ದ ಪಕ್ಷದಲ್ಲಿ ದೂರು ಸಲ್ಲಿಸಬಹುದು ಎಂದು ಕರ್ನಾಟಕ ಲೋಕಾಯುಕ್ತ ಪೋಲೀಸ್ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.        


ಚಿಂತಾಮಣಿ ತಾಲ್ಲೂಕಿನಲ್ಲಿ ನೂತನ ಉಪ-ಕಾರಾಗೃಹ ಉದ್ಘಾಟನಾ ಸಮಾರಂಭ,

ಚಿಕ್ಕಬಳ್ಳಾಪುರ ನವಂಬರ್ ೧೭: ಕರ್ನಾಟಕ ಕಾರಾಗೃಹಗಳ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಪೋಲೀಸ್ ಗೃಹ ನಿರ್ಮಾಣ ನಿಗಮ ಇವರ ಸಂಯುಕ್ತ ಆಶ್ರಯದಲ್ಲಿ ನವೆಂಬರ್ ೧೮ ರಂದು ಸಂಜೆ ೪.೩೦ ಗಂಟೆಗೆ ಚಿಂತಾಮಣಿ ತಾಲ್ಲೂಕಿನ ನೂತನ ತಾಲ್ಲೂಕು ಉಪ-ಕಾರಾಗೃಹದ ಆವರಣದಲ್ಲಿ ನೂತನ ತಾಲ್ಲೂಕು ಉಪ-ಕಾರಾಗೃಹದ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.
  ಉದ್ಘಾಟನೆಯನ್ನು ತೋಟಗಾರಿಕೆ ಮತ್ತು ಬಂಧೀಖಾನೆ ಸಚಿವ ಉಮೇಶ್.ವಿ.ಕತ್ತಿ ನೆರವೇರಿಸುವರು. ಅಧ್ಯಕ್ಷತೆಯನ್ನು ಶಾಸಕ ಡಾ|| ಎಂ.ಸಿ.ಸುಧಾಕರ್ ವಹಿಸುವರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ವಕ್ಫ್ ಮತ್ತು ಅಲ್ಪಸಂಖ್ಯಾತರ ಖಾತೆ ಸಚಿವ ಡಾ. ಮುಮ್ತಾಜ್ ಅಲಿ ಖಾನ್ ಭಾಗವಹಿಸುವರು. ಅತಿಥಿಗಳಾಗಿ ಕೇಂದ್ರ ಕಾನೂನು ಮತ್ತು ನ್ಯಾಯಾಂಗ ಸಚಿವ ಎಂ.ವೀರಪ್ಪ ಮೊಯ್ಲಿ, ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಕೆ.ಹೆಚ್.ಮುನಿಯಪ್ಪ, ಮುಖ್ಯ ಸಚೇತಕರು, ವಿಧಾನ ಪರಿಷತ್ ಡಾ|| ಎ.ಹೆಚ್.ಶಿವಯೋಗಿಸ್ವಾಮಿ, ವಿಧಾನ ಪರಿಷತ್ ಸದಸ್ಯರಾದ ವಿ.ಆರ್.ಸುದರ್ಶನ್, ನಜೀರ್ ಅಹಮದ್, ಡಿ.ಎಸ್.ವೀರಯ್ಯ, ವೈ.ಎ.ನಾರಾಯಣಸ್ವಾಮಿ, ಶಾಸಕರಾದ ವಿ.ಮುನಿಯಪ್ಪ, ಎನ್.ಹೆಚ್.ಶಿವಶಂಕರರೆಡ್ಡಿ, ಎನ್.ಸಂಪಂಗಿ, ಕೆ.ಪಿ.ಬಚ್ಚೇಗೌಡ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ವಿನುತ ಶ್ರೀನಿವಾಸ್, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಚೆಂಡೂರು ವಿ.ವೆಂಕಟೇಶ್, ಚಿಂತಾಮಣಿ ತಾಲ್ಲೂಕು ಪಂಚಾಯತ್ ಅಧ್ಯಕ್ಷ ಹೆಚ್.ಕೆ.ಮಂಜುನಾಥ್, ನಗರ ಸಭೆ ಅಧ್ಯಕ್ಷ ಎನ್.ವೆಂಕಟರಮಣಸ್ವಾಮಿ, ಜಿಲ್ಲಾಧಿಕಾರಿ ಅನ್ವರ್ ಪಾಷ, ಜಿಲ್ಲಾ ರಕ್ಷಣಾಧಿಕಾರಿ ರವೀಂದ್ರ ಪ್ರಸಾದ್, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್.ಕೃಷ್ಣಪ್ಪ ಭಾಗವಹಿಸುವರು.

Share: