ಭಟ್ಕಳ:ಶನಿವಾರ ರಾತ್ರಿ ಅಪಹರಣಕ್ಕೆ ಓಳಗಾದ ಬಾಲಕನನ್ನು ಗೋವಾದಲ್ಲಿ ರಕ್ಷಣೆ ಮಾಡಿದ ಪೊಲೀಸರು ತಾಲೂಕಾಸ್ಪತ್ರೆಗೆ ಕರೆತಂದು ಮೆಡಿಕಲ್ ಗೆ ಒಳಪಡಿಸಿ ಬಾಲಕನನ್ನು ಕುಟುಂಬದವರಿಗೆ ಒಪ್ಪಿಸಿದರು
ಬಾಲಕನನ್ನು ಗೋವಾದ ಕ್ಯಾಲಂಗುಟ್ ಬೀಚ್ ಸಮೀಪದ ಲಾಡ್ಜ್ ಒಂದರಲ್ಲಿ ಕುಡಿಟ್ಟಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಸಿ.ಪಿ.ಐ ದಿವಾಕರ ನೇತೃತ್ವದ ತಂಡ ಗೋವಾಕ್ಕೆ ತೆರಳಿ ಲಾಡ್ಜ್ ನಲ್ಲಿ ಕುಡಿಟ್ಟ ಬಾಲಕನ್ನು ರಕ್ಷಣೆ ಮಾಡಿದ್ದಾರೆ. ಆದರೆ ಸ್ಥಳದಲ್ಲಿದ್ದ ಆರೋಪಿಗಳು ಪರಾರಿಯಾಗಿದ್ದು .ಓರ್ವ ಆರೋಪಿಯನ್ನು ಕಾರವಾರದಲ್ಲಿ ಬಂಧಿಸಲಾಗಿದೆ.
ಅಪಹರಣಕ್ಕೆ ಓಳಗಾದ ಬಾಲಕನನ್ನು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಕರೆ ತಂದು ಮೆಡಿಕಲ್ ಗೆ ಒಳ ಪಡಿಸಿದರು. ನಂತರ ಬಾಲಕನನ್ನು ಭಟ್ಕಳ ನಗರ ಠಾಣೆಗೆ ಕರೆ ತಂದು ಕುಟುಂಬದವರಿಗೆ ಒಪ್ಪಿಸಿದ್ದಾರೆ