ಭಟ್ಕಳ: ತಾಲೂಕಿನ ಕೋಟೇಶ್ವರ ನಗರದ ಸಮೀಪ ಅಪರಿಚಿತ ಲಾರಿಯೊಂದು ಬಿಡಾಡಿ ದನಕ್ಕೆ ಢಿಕ್ಕಿ ಹೊಡೆದು ಅಪಘಾತ ಪಡಿಸಿ ಪರಾರಿಯಾಗಿದ್ದು ಸ್ಥಳೀಯ ಯುವಕರು ಸ್ಥಳದಲ್ಲೇ ವೈದ್ಯರನ್ನು ಕರೆದು ಚಿಕಿತ್ಸೆ ನೀಡಿದ್ದಾರೆ.
ಅಪರಿಚಿತ ಲಾರಿಯೊಂದು ಬಿಡಾಡಿ ದನಕ್ಕೆ ಢಿಕ್ಕಿ ಹೊಡೆದು ಅಪಘಾತ ಪಡಿಸಿದ ನಂತರ ರಸ್ತೆ ಪಕ್ಕದಲ್ಲಿ ಬಿದ್ದು ನೋವು ಪಡುತ್ತಿದ್ದ ದನವನ್ನು ಗಮನಿಸಿದ ಯುವಕರು ವಶು ವೈದ್ಯರನ್ನು ಸ್ಥಳಕ್ಕೆ ಕರೆಸಿ ಚಿಕಿತ್ಸೆ ನೀಡಿದಲ್ಲದೆ. ಹೆಚ್ಚಿನ ಚಿಕಿತ್ಸೆಗಾಗಿ ಅಲ್ಲೇ ಸಮೀಪ ಇರುವ ಪಶು ಆಸ್ಪತ್ರೆಗೆ ಸಾಗಿಸಿ ಗಾಯಗೊಂಡ ದನಕ್ಕೆ ಆರೈಕೆ ಮಾಡಿದ್ದಾರೆ.
ಇವರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೇಚ್ಚುಗೆ ವ್ಯಕ್ತವಾಗಿದೆ