ಕುಂದಾಪುರ, ಮಾರ್ಚ್ 9: ದಿನಾಂಕ ೦೮/೦೩/೧೦ ರಂದು ಕುಂದಾಪುರ ತಾಲೂಕಿನ ಕೋಟೆಶ್ವರ ಗ್ರಾಮದ ಮೇಪು ಎಂಬಲ್ಲಿ ಕು. ಸುಪ್ರಿತಾ ಇವರು ಎನ್.ಎಚ್. ರಸ್ತೆಂದ ಮನೆಯ ಕಡೆಗೆ ನಡೆದುಕೊಂಡು ಹೋಗುತ್ತಿರುವಾಗ ಅಪರಿಚಿತ ವ್ಯಕ್ತಿಯು ಮೋಟಾರ್ ಸೈಕಲ್‌ನಲ್ಲಿ ಬಂದು ಕುತ್ತಿಗೆಯಲ್ಲಿದ್ದ ಸುಮಾರು ೧೦,೦೦೦/-ರೂಪಾಯಿ ಮೌಲ್ಯದ ೧೦ ಗ್ರಾಂ ತೂಕದ ಚಿನ್ನದ ಚೈನನ್ನು ಬಲತ್ಕಾರವಾಗಿ ಎಳೆದುಕೊಂಡು ಮೋಟಾರ್ ಸೈಕಲ್‌ನಲ್ಲಿ ಪರಾರಿಯಾಗಿರುತ್ತಾನೆ. ಎಂಬುದಾಗಿ ಕು,.ಸುಪ್ರಿತಾ ಎಸ್ (೧೯ ವರ್ಷ) ಬಿನ್. ದಿವಂಗತ. ಕೆ.ಎಚ್ ಶಂಕರ ವಾಸ ಶ್ರೀಕಾವೇರಿ ನಿಲಯ ಮೇಪು ಕೋಟೇಶ್ವರ ಗ್ರಾಮ ಕುಂದಾಪುರ ತಾಲೂಕು ರವರು ನೀಡಿದ ದೂರಿನಂತೆ ಕುಂದಾಪುರ ಠಾಣೆಯಲ್ಲಿ ಅಪರಾಧ ಕ್ರಮಾಂಕ ೮೪/೧೦ ಕಲಂ ೩೯೨ ಐ.ಪಿ.ಸಿ.ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಗೃಹಿಣಿಗೆ ಮಾನಸಿಕ ಹಿಂಸೆ ಖಾಸಗಿ ದೂರು ದಾಖಲು
ಗಂಗೊಳ್ಳಿ: ಶ್ರೀಮತಿ ಶಾಂತಾ (೩೩ವರ್ಷ) ಗಂಡ: ಬಾಬು ತಿಮ್ಮಣ್ಣ ಮೊಗೇರ ವಾಸ: ಕುದ್ರುಸಾಲು ಗುಡ್ಡೆಯಂಗಡಿ ನಾಡಾ ಗ್ರಾಮ ಕುಂದಾಪುರ ತಾಲೂಕು ಎಂಬವರು ದಿನಾಂಕ ೬/೦೭/೨೦೦೮ರಂದು ಆರೋಪಿ ೧.ಬಾಬು ತಿಮ್ಮಣ್ಣ ಮೊಗೇರ(೩೭ವರ್ಷ) ಕೆರೆಕೋಣ ಅಕ್ಕನ ಗದ್ದೆ ಮನೆ ಅರೆಅಂಗಡಿ ಅಂಚೆ ಹೊನ್ನಾವರ ತಾಲೂಕು ಉತ್ತರ ಕನ್ನಡ ಜಿಲ್ಲೆ. ರವರೊಂದಿಗೆ ಮದುವೆಯಾಗಿದ್ದು, ಗಂಡನ ಜೊತೆ ಹೊನ್ನಾವರ ತಾಲೂಕಿನ ಅರೆಂಗಡಿಯಲ್ಲಿ ವಾಸ ಮಾಡಿದ್ದು, ಮದುವೆಯ ಪೂರ್ವದಲ್ಲಿ ೧ ರಿಂದ ೭ನೇ ಆರೋಪಿಗಳಾದ ೨. ಜಯಶ್ರೀ (೩೪ವರ್ಷ) ಬಾಬು ತಿಮ್ಮಣ್ಣ ಮೊಗೇರರ ತಂಗಿ ಕೆರೆಕೋಣ ಅಕ್ಕನ ಗದ್ದೆ ಮನೆ ಅರೆಅಂಗಡಿ ಅಂಚೆ ಹೊನ್ನಾವರ ತಾಲೂಕು ಉತ್ತರ ಕನ್ನಡ ಜಿಲ್ಲೆ. ೩. ಶ್ರೀಮತಿ ರಮಾಬಾ (೬೦ವರ್ಷ) ಗಂಡ ಶೇಷಪ್ಪ ೪. ಶಾಂತಪ್ಪ (೬೦ವರ್ಷ) ತಂದೆ ಮಂಗು ಗೌಡ ೫. ರೇಖಾ (೨೮ವರ್ಷ) ಶಾಂತಪ್ಪರವರ ಮಗಳು ೬. ಬೇಬಿ (೩೧ವರ್ಷ) ರಾಕೇಶರ ಪತ್ನಿ ೭. ದತ್ತಾತ್ರೆಯ ರಾಮ ಚಂದ್ರ ಹೆಗಡೆ(೫೫ವರ್ಷ) ಹೊಡಲು ಗದ್ದೆ ಮನೆ ಕೆರೆಕೋಣು ಶಾಲೆ ಬಳಿ ೩ ರಿಂದ ೭ನೇಯವರು ಅರೆಅಂಗಡಿ ಅಂಚೆ ಹೊನ್ನಾವರ ತಾಲೂಕು ಉತ್ತರ ಕನ್ನಡ ಜಿಲ್ಲೆ. ಇವರುಗಳು ಸೇರಿಕೊಂಡು ೨,೦೦,೦೦೦ನಗದು ಮತ್ತು ೨ ಪವನು ಚಿನ್ನಾಭರಣವನ್ನು ವರದಕ್ಷಿಣೆಯಾಗಿ ಕೋರಿದ್ದು, ಅವರ ಒತ್ತಾಯದ ಮೇರೆಗೆ ೧,೦೦,೦೦೦ ನಗದು ಮತ್ತು ೨ ಪವನ ಚಿನ್ನಾಭರಣ ನೀಡಿದ್ದು, ಹೆಚ್ಚಿನ ವರದಕ್ಷಿಣೆಗಾಗಿ ಆರೋಪಿತರೆಲ್ಲರೂ ಸೇರಿ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಿದ್ದು, ಒಂದನೆ ಆರೋಪಿ ಉಳಿದ ಆರೋಪಿತರ ಪ್ರೇರಣೆಯ ಮೇರೆಗೆ ಕೈಂದ ಹೊಡೆದು ಅವಾಚ್ಯ ಶಬ್ದಗಳಿಂದ ಬೈದು ಆತ್ಮಹತ್ಯೆಗೆ ಪ್ರಚೋದಿಸಿ, ಕೊಲೆ ಮಾಡುವುದಾಗಿ ಹೆದರಿಸಿ ೨ ತಿಂಗಳಿಂದ ಮನೆಯಿಂದ ಹೊರಗೆ ಹಾಕಿರುವುದಾಗಿದೆ ಎಂಬುದಾಗಿ ಶ್ರೀಮತಿ ಶಾಂತಾರವರು ನ್ಯಾಯಾಲಯದಲ್ಲಿ ಖಾಸಗಿ ದೂರು ನೀಡಿದ್ದು ಅದರಂತೆ ಗಂಗೊಳ್ಳಿ ಠಾಣೆಯಲ್ಲಿ ಅಪರಾಧ ಕ್ರಮಾಂಕ ೦೮/೨೦೧೦ ಕಲಂ ೩೨೩, ೫೦೪, ೫೦೬(೨) ಜೊತೆಗೆ ೩೪ ಐಪಿಸಿ ಮತ್ತು ಕಲಂ ೩, ೪ ಮತ್ತು ೬ ಡಿ.ಪಿ ಕಾಯಿದೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಪಘಾತ ಪ್ರಕರಣ
ಕುಂದಾಪುರ: ದಿನಾಂಕ ೦೭/೦೩/೨೦೧೦ ರಂದು ಮಧ್ಯಾಹ್ನ ೧:೪೫ ಗಂಟೆಗೆ ಮೊಹಮ್ಮದ್ ಹನೀಪ್ (೨೭ ವರ್ಷ) ಬಿನ್ ಅಂಗಡಿ ಹುಸೈನಾರ್ ವಾಸ ಮಸೀದಿ ಬಳಿ, ಕುಂದಾಪುರ ಎಂಬವರು ಅಬ್ದುಲ್ ಅಜೀದ್‌ರವರು ಚಲಾಯಿಸುತ್ತಿದ್ದ ಕೆ.ಎ ೨೦ ಕೆ ೩೨೫೪ನೇ ಮೋಟಾರು ಸೈಕಲಿನಲ್ಲಿ ಹಿಂಬದಿ ಸವಾರರಾಗಿ ಕುಳಿತು ಕುಂದಾಪುರ ಕಡೆಯಿಂದ ಬೀಜಾಡಿ ಕಡೆಗೆ ರಾಷ್ಟ್ರೀಯ ಹೆದ್ದಾರಿ ೧೭ರಲ್ಲಿ ಹೋಗುತ್ತಿರುವಾಗ ಕೋಟೇಶ್ವರ ಕಾಮತ್ ಪೆಟ್ರೋಲ್ ಬಂಕ್ ಬಳಿ ತಲುಪಿದಾಗ ಆರೋಪಿ ಮೋಟಾರು ಸೈಕಲ್ ಸವಾರ ಅಬ್ದುಲ್ ಅಜೀದ್ ಎಂಬವರು ತನ್ನ ಮೋಟಾರು ಸೈಕಲನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ ಪರಿಣಾಮ ಹಿಂಬದಿ ಸವಾರರಾದ ಮೊಹಮ್ಮದ್ ಹನೀಪ್‌ರವರು ರಸ್ತೆಗೆ ಬಿದ್ದು ಮೊಣ ಕಾಲಿಗೆ ಗುದ್ದಿದ ರಕ್ತಗಾಯವಾಗಿರುತ್ತದೆ ಎಂದು ಅರೋಪಿಸಿ ಮೊಹಮ್ಮದ್ ಹನೀಪ್‌ರವರು ನೀಡಿದ ದೂರಿನಂತೆ ಕುಂದಾಪುರ ಠಾಣೆಯಲ್ಲಿ ಅಪರಾಧ ಕ್ರಮಾಂಕ ೮೫/೨೦೧೦ ಕಲಂ ೨೭೯, ೩೩೭ ಐ.ಪಿ.ಸಿ.ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. ಆರೋಪಿಯ ದಸ್ತಗಿರಿಯಾಗದೇ ಇರುವ ಕಾರಣ ಹೆಚ್ಚಿನ ಮಾಹಿತಿ ತಿಳಿದುಬಂದಿಲ್ಲ.
ವರದಿ: ಇಬ್ರಾಹಿಂ, ಗಂಗೊಳ್ಳಿ