ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಅದಾನಿ ಗ್ರೂಪ್‌ನ ಮಾರುಕಟ್ಟೆ ಮೌಲ್ಯ 100 ಶತಕೋಟಿ ಡಾ.ಗೂ ಕೆಳಕ್ಕೆ ಕುಸಿತ

ಅದಾನಿ ಗ್ರೂಪ್‌ನ ಮಾರುಕಟ್ಟೆ ಮೌಲ್ಯ 100 ಶತಕೋಟಿ ಡಾ.ಗೂ ಕೆಳಕ್ಕೆ ಕುಸಿತ

Thu, 23 Feb 2023 08:18:01  Office Staff   Vb

ಹೊಸದಿಲ್ಲಿ: ಕೃತಕವಾಗಿ ಶೇರುಗಳ ಬೆಲೆಗಳ ಏರಿಕೆ ಮತ್ತು ಲೆಕ್ಕಪತ್ರ ವಂಚನೆಯನ್ನು ಆರೋಪಿಸಿದ್ದ ಹಿಂಡನ್‌ಬಗ್ ರೀಸರ್ಚ್‌ನ ವರದಿಯ ಹೊಡೆತದಿಂದ ಅದಾನಿ ಗ್ರೂಪ್ ಇನ್ನೂ ಚೇತರಿಸಿಕೊಂಡಿಲ್ಲ. ಗ್ರೂಪ್‌ ಕಂಪೆನಿಗಳ ಸಂಯೋಜಿತ ಮಾರುಕಟ್ಟೆ ಮೌಲ್ಯವು 100 ಶತಕೋಟಿ ಡಾ.ಗೂ ಕೆಳಕ್ಕೆ ಕುಸಿದಿದೆ.

ಮಂಗಳವಾರ ಶೇರು ಮಾರುಕಟ್ಟೆಗಳ ವಹಿವಾಟು ಅಂತ್ಯಗೊಂಡಾಗ ಅದಾನಿ ಗ್ರೂಪ್ ನಡಿ ಲಿಸ್ಟೆಡ್ ಏಳು ಕಂಪೆನಿಗಳ ಪೈಕಿ ಕೇವಲ ಅದಾನಿ ಪೋರ್ಟ್ಸ್ ಮತ್ತು ಅದಾನಿ ಪವರ್ ಶೇರುಗಳು ಧನಾತ್ಮಕ ಮುಕ್ತಾಯವನ್ನು ಕಂಡಿವೆ. ಅದಾನಿ ಎಂಟರ್‌ಪೈಸಸ್, ಅದಾನಿ ಟ್ರಾನ್ಸ್ ಮಿಷನ್, ಅದಾನಿ ಗ್ರೀನ್ ಎನರ್ಜಿ, ಅದಾನಿ ಟೋಟಲ್ ಗ್ಯಾಸ್ ಮತ್ತು ಅದಾನಿ ವಿಲ್ಕರ್ ಶೇರುಗಳು ನಷ್ಟದಲ್ಲಿ ಮುಕ್ತಾಯಗೊಂಡಿವೆ.

ಗ್ರೂಪ್‌ನ ಮುಂಚೂಣಿ ಕಂಪೆನಿ ಅದಾನಿ ಎಂಟರ್‌ಪೈಸಸ್‌ನ ಶೇರು 50.35 (ಶೇ.3.11) ಅಂಶಗಳನ್ನು ಕಳೆದುಕೊಂಡು 1,571.10 ರೂ.ನಲ್ಲಿ ದಿನದಾಟವನ್ನು ಮುಗಿಸಿದೆ.

ಜ.24ರಂದು ಹಿಂಡನ್‌ಬರ್ಗ್ ವರದಿ ಪ್ರಕಟಗೊಂಡ ಬಳಿಕ ಅದಾನಿ ಗ್ರೂಪ್ 136 ಶತಕೋಟಿ ಡಾ.ಗೂ ಅಧಿಕ (11.26 ಲ.ಕೋ ರೂ.ಗೂ ಹೆಚ್ಚು) ಮಾರುಕಟ್ಟೆ ಬಂಡವಾಳವನ್ನು ಕಳೆದುಕೊಂಡಿದೆ.


Share: