ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಅಣಶಿ ಮಾರ್ಗ ರಾತ್ರಿ ಏಳರಿಂದ ಬೆಳಿಗ್ಗೆ ಏಳರವರೆಗೆ ಬಂದ್ : ಜಿಲ್ಲಾಧಿಕಾರಿ.

ಅಣಶಿ ಮಾರ್ಗ ರಾತ್ರಿ ಏಳರಿಂದ ಬೆಳಿಗ್ಗೆ ಏಳರವರೆಗೆ ಬಂದ್ : ಜಿಲ್ಲಾಧಿಕಾರಿ.

Fri, 08 Jul 2022 04:50:18  Office Staff   SO News

ಕಾರವಾರ :  ಜೋಯಿಡಾ ತಾಲೂಕಿನ ಅಣಶಿ ಘಟ್ಟದಲ್ಲಿ ನಿರಂತರ ಗುಡ್ಡ ಕುಸಿತವಾಗುವ ಕಾರಣಕ್ಕೆ ರಾತ್ರಿ ಸಂಚಾರ ಬಂದ್ ಮಾಡಿ  ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್  ಆದೇಶ ಮಾಡಿದ್ದಾರೆ.

ಅಣಿಶಿ ಘಟ್ಟದಲ್ಲಿ ಸಂಜೆ 7ಗಂಟೆಯಿಂದ ಬೆಳಗ್ಗೆ 7 ಘಂಟೆ ವರೆಗೆ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಹೀಗಾಗಿ ಸದಾಶಿವಗಡ -ಲೋಂಡಾ ರಾಜ್ಯ ಹೆದ್ದಾರಿ- 34 ಬಂದ್ ಆಗಲಿದೆ.

ಕೆಲ ದಿನಗಳ ಹಿಂದೆ   ಕೇಂದ್ರ ಭೂ ವಿಜ್ಞಾನಿಗಳ ತಂಡ  ಈ ಮಾರ್ಗ ಪರಿಶೀಲನೆ ಮಾಡಿ ಅಪಾಯ ಎಂದು ವರದಿ ನೀಡಿತ್ತು. ಅಲ್ಲದೇ ಈ ಬಾರೀ ಮಳೆಗಾಲದಲ್ಲಿ ನಿರಂತರವಾಗಿ ಗುಡ್ಡ ಕುಸಿಯುತ್ತಿದೆ. ಹೀಗಾಗಿ ರಾತ್ರಿ ವೇಳೆ ಸಂಚಾರ ಸ್ಥಗಿತಗೊಳಿಸಲಾಗಿದೆ.


Share: