ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಅಗ್ನಿವೀರ್ ತರಬೇತಿ ಪಡೆದ ಮೊದಲ‌ ಬ್ಯಾಚ್ ಸಮಾರೋಪ.

ಅಗ್ನಿವೀರ್ ತರಬೇತಿ ಪಡೆದ ಮೊದಲ‌ ಬ್ಯಾಚ್ ಸಮಾರೋಪ.

Mon, 27 Feb 2023 04:46:22  Office Staff   SO News

ಕಾರವಾರ : ಜಿಲ್ಲೆಯಲ್ಲಿ  ಸ್ವತಂತ್ರ ಹೋರಾಟಗಾರ ಹೆಂಜಾ ನಾಯ್ಕ ಅವರ ಹೆಸರಿನಲ್ಲಿ ಸ್ಥಾಪಿತವಾದ ಅಗ್ನಿವೀರ ತರಬೇತಿ ಶಾಲೆಯಲ್ಲಿ ತರಬೇತಿ ಪಡೆದ ಯುವಕರು ರಾಷ್ಟ್ರಭಕ್ತರಾಗಿ ಇಂದಲ್ಲ ನಾಳೆ ಈ ದೇಶವನ್ನ ರಕ್ಷಿಸುವಂತಹ ಕೆಲಸ ಮಾಡುತ್ತಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದರು.

ನಗರದ ಜಿಲ್ಲಾ ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ  ಹೆಂಜಾ ನಾಯ್ಕ್ ತರಬೇತಿ ಸೈನಿಕ ಶಾಲೆಯ ಮೊದಲ ಬ್ಯಾಚಿನ ಸಮಾರೋಪ ಸಮಾರಂಭದಲ್ಲಿ ಜ್ಯೋತಿಯನ್ನು ಬೆಳಗಿಸಿ ಮಾತನಾಡಿದ ಅವರು, ಉತ್ತರ ಕನ್ನಡ ಜಿಲ್ಲೆಯು ಸ್ವತಂತ್ರ ಕಿಚ್ಚು ಹಚ್ಚಿದ ಪ್ರಥಮ ಜಿಲ್ಲೆಯಾಗಿದೆ ಸಾಹಿತ್ಯ ಕಲೆ ಸಾಂಸ್ಕೃತಿಕ ಮತ್ತು ಸ್ವಾತಂತ್ರ್ಯ ಹೋರಾಟ ಈ ಜಿಲ್ಲೆಯು ಹೆಸರುವಾಸಿಯಾಗಿದೆ. ಹೆಂಜಾ ನಾಯ್ಕ್ ಶ್ರೇಷ್ಠ ರಾಷ್ಟ್ರಭಕ್ತ, ಬ್ರಿಟಿಷರ ವಿರುದ್ದ ಹೋರಾಡಿದ ಮಹಾನ್ ರಾಷ್ಟ್ರ ನಾಯಕ ಇವರ ಹೆಸರಿನಲ್ಲಿ  ಆರಂಭವಾದ ಈ ಸೈನಿಕ ಶಾಲೆಯಲ್ಲಿ ಈಗಾಗಲೇ 4 ತಿಂಗಳ ಸೇನಾ ಪೂರ್ವ ತಯಾರಿ ತರಬೇತಿಯನ್ನು ಯುವಕರಿಗೆ ನೀಡಲಾಗಿದೆ. ಮುಂದಿನ ತರಬೇತಿಗಾಗಿ ಈಗಾಗಲೇ 300  ಅರ್ಜಿಗಳು ಬಂದಿರುತ್ತವೆ ಇದು ಈ ಜಿಲ್ಲೆಯ ಯುವಕರಲ್ಲಿ  ರಾಷ್ಟ್ರಭಕ್ತಿಯನ್ನು ತೋರಿಸುತ್ತದೆ ಎಂದರು. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರೋತ್ಸಾಹವನ್ನು ನೀಡಿ ಈ ತರಬೇತಿ ಶಾಲೆಯನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗಲು ನಾವೆಲ್ಲರೂ ಶ್ರಮಿಸಬೇಕಾಗಿದೆ ಎಂದರು.

 ಬಳಿಕ ಶಾಸಕಿ ರೂಪಾಲಿ ನಾಯ್ಕ್ ಮಾತನಾಡಿ ಜಿಲ್ಲೆಯ ಯುವಕರಿಗೆ ರಾಷ್ಟ್ರ ರಕ್ಷಣೆಯಲ್ಲಿ ಸೇರಿಕೊಳ್ಳಲು ಜಿಲ್ಲೆಯಲ್ಲಿ ಒಂದು ತರಬೇತಿ ಸೈನಿಕ ಶಾಲೆಯನ್ನು ಹುಟ್ಟು ಹಾಕುವುದು ಅವಶ್ಯಕತೆವಿತ್ತು. ಈಗ ಅದು ಸಾಕಾರವಾಗಿದ್ದು, ಜಿಲ್ಲೆಯ ಸ್ವತಂತ್ರ ಹೋರಾಟಗಾರ ಹೆಂಜಾ ನಾಯ್ಕ್ ಅವರ ಹೆಸರಿನಲ್ಲಿ ಪ್ರಾರಂಭಿಸಿದ್ದೇವೆ. ಇವತ್ತು ಈ ಸೈನಿಕ ಶಾಲೆಯಿಂದ ತರಬೇತಿ ಪಡೆದ ಯುವಕರು ಮುಂದೆ ರಾಷ್ಟ್ರಸೇವೆಯಲ್ಲಿ ತೊಡಗಿಕೊಳ್ಳಲೆಂದು ಆಶಿಸಿದರು. ಈಗಿನಯುವಕರಲ್ಲಿ ದೈಹಿಕ ಕ್ಷಮತೆಯು ಅತಿ ಅವಶ್ಯಕವಾಗಿದೆ ಈ ತರಬೇತಿ ಶಾಲೆಯಿಂದ ದೈಹಿಕ ಕ್ಷಮತೆಯನ್ನು ಬೆಳೆಸಿಕೊಳ್ಳಲು ಸಹಕಾರಿಯಾಗುತ್ತದೆ. ಈ ತರಬೇತಿ ಶಾಲೆಯ ಸೌಲಭ್ಯವನ್ನು ಸಂಪೂರ್ಣವಾಗಿ ಉಪಯೋಗಿಸಿಕೊಳ್ಳುವಂತೆ ಯುವಕರಿಗೆ ಕರೆ ನೀಡಿದರು.

 ಬಳಿಕ ನ್ಯೂ ಹೈಸ್ಕೂಲ್ ಪ್ರಾಂಶುಪಾಲ ರಾಜೇಶ ಶ್ರೀಕಾಂತ ಸಿಂಗೆ ಮಾತನಾಡಿ ಪ್ರಪಂಚದಲ್ಲಿ ಅತ್ಯಂತ ಶ್ರೇಷ್ಠವಾದ ಸೈನ್ಯವು ನಮ್ಮ ದೇಶ ಹೊಂದಿದೆ ಆ ಸೈನಿಕಕ್ಕೆ ನೆರವಾಗಲು ಇಂದು ನಮ್ಮ ಜಿಲ್ಲೆಯ ಯುವಕರಿಗೆ ಒಂದು ಒಳ್ಳೆಯ ಅವಕಾಶ ಒದಗಿ ಬಂದಿದೆ ಎಂದರು ಯಾವ ಒಬ್ಬ ವ್ಯಕ್ತಿಯ ಮನಸ್ಸಿನಲ್ಲಿ ರಾಷ್ಟ್ರ ನಿರ್ಮಾಣದ ಮನೋಭಾವನೆಯನ್ನು ಹೊಂದಿರುತ್ತಾನೋ ಅಂತಹ ವ್ಯಕ್ತಿಯ ವ್ಯಕ್ತಿತ್ವದಲ್ಲಿ ಕೂಡ ಬದಲಾವಣೆಯಾಗುತ್ತದೆ. ವ್ಯಕ್ತಿತ್ವದಿಂದ ಸಂಕಲ್ಪ ಸಂಕಲ್ಪದಿಂದ ರಾಷ್ಟ್ರ ನಿರ್ಮಾಣವಾಗುತ್ತದೆ ಎಂದರು.

 ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ಗಣಪತಿ ಉಳ್ವೆಕರ್, ನಗರಸಭೆ ಅಧ್ಯಕ್ಷ ನಿತಿನ್ ಪಿಕಳೆ ಇತರ ಅಧಿಕಾರಿ ವರ್ಗದವರು ಉಪಸಿತರಿದ್ದರು.


Share: