ಭಟ್ಕಳ: ಜಾನುವಾರುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಆರೋಪದ ಮೇರೆಗೆ ಭಟ್ಕಳ ಗ್ರಾಮೀಣ ಠಾಣಾ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.
ಆರೋಪಿಗಳನ್ನು ತಾಲೂಕಿನ ಮುಂಡಳ್ಳಿಯ ನಿವಾಸಿಗಳಾದ ನಾಗಪ್ಪ ಬಿ. ನಾಯ್ಕ (65) ಮತ್ತು ಗೋವಿಂದ ಎಲ್. ನಾಯ್ಕ ಎಂದು ಗುರುತಿಸಲಾಗಿದೆ. ಆರೋಪಿಗಳಿ೦ದ 2 ಕೋಣಗಳನ್ನು ಜಪ್ತುಪಡಿಸಿ ಕೊಳ್ಳಲಾಗಿದ್ದು, ಇದರ ಮೌಲ್ಯ 8.40 ಸಾವಿರ ಎಂದು ಅಂದಾಜಿಸಲಾಗಿದೆ. ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಎಸ್‌ಐ ಭರತ್ ತನಿಖೆ ಕೈಗೊಂಡಿದ್ದಾರೆ.