ಭಟ್ಕಳ: ಅಂಜುಮನ್ ಹಾಮಿಯೆ ಮುಸ್ಲಿಮೀನ್ ಶಿಕ್ಷಣ ಸಂಸ್ಥೆ ಅಂಜುಮಾನ್ ತಾಂತ್ರಿಕ ಮಹಾವಿದ್ಯಾಲಯದ ಕನ್ನಡ ವೇದಿಕೆಯಿಂದ “ನ್ಯಾಯವಾದಿ-೨೦೨೩” ಕಾರ್ಯಕ್ರಮ ಜರಗಿತು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಮುಹಮ್ಮದ್ ಮುಝಮ್ಮಿಲ್ ಕಾಜಿಯಾ, ಕನ್ನಡ ಭಾಷೆ ಅತ್ಯಂತ ಪ್ರಾಚೀನ ಭಾಷೆಯಾಗಿದೆ ಮತ್ತು ಅದಕ್ಕೆ ಸಿಕ್ಕ ಸ್ಥಾನಮಾನಗಳು ಕಡಿಮೆಯಾಗಿದೆ ಇನ್ನೂ ಹೆಚ್ಚಿನ ಸ್ಥಾನಮಾನ ಸಿಗಬೇಕು ಎಂದ ಅವರು, ಈಗ ನ್ಯಾಯಾಲಯಗಳಲ್ಲಿ ತೀರ್ಪುಗಳು ಕನ್ನಡ ಭಾಷೆಯಲ್ಲಿ ಲಭ್ಯವಿರುವುದು ನಮಗೆಲ್ಲ ಸಂತಸ ತಂದಿದೆ ಎಂದರು.
ಮುಖ್ಯ ಅತಿಥಿ ನ್ಯಾಯವಾದಿ ರವೀಂದ್ರ ಆರ್. ಶ್ರೇಷ್ಟಿ ಮಾತನಾಡಿ ಕನ್ನಡಕ್ಕಾಗಿ ನಾವು ಎಲ್ಲರೂ ಯಾವ ತ್ಯಾಗಕ್ಕೂ ಸಿದ್ಧರಾಗಿರಬೇಕು, ಕನ್ನಡದಲ್ಲಿ ಮಾತನಾಡಲು ರೂಡಿಸಿಕೊಳ್ಳಿ ಎಂದು ಕಿವಿಮಾತುಮಾತು ನೀಡಿದರು. ಶೇಖರ್ ಹರಿಕಾಂತ್ ಮಾತನಾಡಿ, ಕನ್ನಡ ಲಿಪಿ ಪ್ರಾರಂಭವಾಗಿದ್ದು ಕಲ್ಲಿನ ಮೇಲೆ,ಕನ್ನಡ ಅಕ್ಷರಗಳನ್ನು ರಾಜ ಮಹಾರಾಜರ ಕಾಲದಲ್ಲಿ ಕೆತ್ತುತ್ತಿದ್ದರು ಎಂದು ಸ್ಮರಿಸಿಕೊಂಡರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ. ಫಜ್ಲ್-ಉರ್- ರೆಹಮಾನ್, ಕಾಲೇಜಿನ ರಿಜಿಸ್ಟ್ರಾರ್ ಪ್ರೊ.ಝಾಹಿದ್ ಖರೂರಿ, ವೇದಿಕೆ ಸಂಚಾಲಕ ಡಾ. ಪದ್ಮಯ್ಯ ನಾಯ್ಕ, ವಿದ್ಯಾರ್ಥಿ ಸಂಚಾಲಕ ವಾಸುದೇವ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.
ಕುಮಾರಿ ಸನ್ನಿಧಿ ಮತ್ತು ಕುಮಾರಿ ಶ್ರೀನಿಧಿ ನಿರೂಪಿಸಿದರು. ವಾಸುದೇವ ನಾಯ್ಕ ಸ್ವಾಗತಿಸಿದರು ಮತ್ತು ಸಾಬೀತ್ ಸಾಹೇಬ್ ಧನ್ಯವಾದ ಅರ್ಪಿಸಿದರು.