ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಅಂಕೋಲಾ ಮಹಿಳೆ ಕಾಣೆ. ಪತ್ತೆಗಾಗಿ ಮನವಿ.

ಅಂಕೋಲಾ ಮಹಿಳೆ ಕಾಣೆ. ಪತ್ತೆಗಾಗಿ ಮನವಿ.

Mon, 20 Feb 2023 05:41:45  Office Staff   SO News

ಅಂಕೋಲಾ: ಮನೆಯಿಂದ ಹೊರಗೆ ಹೋದ ಗೃಹಿಣಿಯೋರ್ವಳು ಮನೆಗೆ ವಾಪಸ್ ಬರದೆ ಎಲ್ಲಿಯೋ ನಾಪತ್ತೆಯಾದ  ಘಟನೆ  ನಡೆದಿದೆ.
ಶೇಟಗೇರಿಯ  ಉಮಾ ರತೀಶ ನಾಯಕ (48) ಕಾಣೆಯಾಗಿರುವ ಮಹಿಳೆ.

ಈ ಕುರಿತು ಮಹಿಳೆಯ ಪತಿ ರತೀಶ ವೆಂಕಟರಮಣ ನಾಯಕ ಅಂಕೋಲಾ ಠಾಣೆಯಲ್ಲಿ ದೂರು ನೀಡಿದ್ದಾರೆ. 

ಕಳೆದ ಕೆಲವು ತಿಂಗಳಿಂದ ಮಾನಸಿಕ ಖಿನ್ನತೆಗೊಳಗಾಗಿ ಆಗಾಗ ಮನೆ ಬಿಟ್ಟು ಹೋಗುತ್ತೇನೆಂದು ಹೊರ ಹೋದವಳು ಸಂಜೆಗೆ ಮತ್ತೆ ಮನೆಗೆ ವಾಪಸಾಗುತ್ತಿದ್ದಳು ಎನ್ನಲಾಗಿದೆ. ಫೆ. 16ರಂದು ಬೆಳಿಗ್ಗೆ ಮನೆಯಿಂದ ಹೊರಟವಳು ಇದುವರೆಗೂ ಬಾರದೆ
ಎಲ್ಲಿಯೋ ಕಾಣೆಯಾಗಿರುತ್ತಾಳೆ. ಕಾಣೆಯಾಗಿರುವ ಉಮಾ 5.4” ಎತ್ತರದ ನಸುಗಪ್ಪು ಮೈಬಣ್ಣ ಹೊಂದಿದ್ದು ಮನೆಯಿಂದ ಹೊರಟಾಗ ಕೇಸರಿ ಬಣ್ಣದ ಸೀರೆ ಮತ್ತು ನೀಲಿ ಬಣ್ಣದ ರವಿಕೆ ತೊಟ್ಟಿದ್ದು ಬೆನ್ನಿನ ಮೇಲೆ ಗಾಯದ ಕಲೆಯೊಂದಿದೆ. ಮಹಿಳೆಯ ಕುರಿತು ಮಾಹಿತಿ ಸಿಕ್ಕಲ್ಲಿ ಅಂಕೋಲಾ ಪೊಲೀಸ್ ಠಾಣೆ ದೂರವಾಣಿ 08388-220333, ಮೊಬೈಲ್ ಸಂಖ್ಯೆ :  9480805250. 9480705268 ಇವರನ್ನು ಸಂಪರ್ಕಿಸಲು ಕೋರಲಾಗಿದೆ. ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಕೈಗೊಂಡಿದ್ದಾರೆ.


Share: