ಉಡುಪಿ: ಜಿಲ್ಲಾ ಬಾಭವನ, ಉಡುಪಿಯಲ್ಲಿ ೨೦೧೦ ರ ಜೂನ್ ೧ ರಂದು ೫ ರಿಂದ ೧೬ ವರ್ಷ ವಯಸ್ಸಿನ ಮಕ್ಕಳಿಗೆ ಉಚಿತವಾಗಿ, ನೃತ್ಯ, ಸಂಗೀತ, ಚಿತ್ರಕಲೆ, ಯೋಗ, ವ್ಯಕ್ತಿತ್ವ ವಿಕಸನ, ಕರಕುಶಲಕಲೆ, ಕರಾಟೆ, ಭಾಷಣ ಕಲೆ ಇತ್ಯಾದಿಗಳಲ್ಲಿ ತರಬೇತಿ ನೀಡಲಾಗುವುದು. ಸಮಯ ಶನಿವಾರ ಮಧ್ಯಾಹ್ನ ೨.೦೦ ಗಂಟೆಯಿಂದ ೬.೦೦ ಗಂಟೆವರೆಗೆ ಹಾಗೂ ರವಿವಾರ ಪೂರ್ವಾಹ್ನ ೧೦ ರಿಂದ ೬.೦೦ ಗಂಟೆ ವರೆಗೆ, ಉಳಿದ ದಿನಗಳಲ್ಲಿ ಸಂಜೆ ೪.೦೦ ರಿಂದ ೬.೦೦ ಗಂಟೆವರೆಗೆ ವಾಚನಾಲಯ ಸೌಲಭ್ಯಗಳನ್ನು ಬಳಸಿಕೊಳ್ಳಬಹುದಾಗಿದೆ. ಸೋಮವಾರ ರಜಾ ದಿನವಾಗಿರುತ್ತದೆ.
ಆಸಕ್ತ ವಿದ್ಯಾರ್ಥಿಗಳು ತಮ್ಮ ಹೆಸರನ್ನು ಈ ಕೆಳಗಿನ ವಿಳಾಸದಲ್ಲಿ ದಿ: ೨೬-೫-೨೦೧೦ ಸಂಜೆ ೫.೩೦ ರೊಳಗೆ ನೊಂದಾಯಿಸಬಹುದಾಗಿದೆ. ಮೊದಲು ಬಂದವರಿಗೆ ಮೊದಲ ಪ್ರಾಶಸ್ತ್ಯ ನೆಲೆಯಲ್ಲಿ ಪ್ರವೇಶ ಕಲ್ಪಿಸಲಾಗುವುದು. ಕಲಿಕಾ ಆಸಕ್ತಿಯ ವಿಷಯವನ್ನು ನಮೂದಿಸಬೇಕಾಗುತ್ತದೆ.
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿರಿ ಕಾರ್ಯದರ್ಶಿ ಜಿಲ್ಲಾ ಬಾಲಭವನ, ಉಡುಪಿ ಹಾಗೂ ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಕಿತ್ತೂರು ಚೆನ್ನಮ್ಮ ರಸ್ತೆ, ಉಡುಪಿ. ದೂರವಾಣಿ ಸಂಖ್ಯೆ : ೨೫೩೧೦೬೨ ನ್ನು ಸಂಪರ್ಕಿಸಬೇಕೆಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪ ನಿರ್ದೇಶಕರಾದ ಶ್ರೀಮತಿ ಸುಮನ ರವರು ತಿಳಿಸಿರುತ್ತಾರೆ.