ಕಾರವಾರ: ಭಟ್ಕಳ ತಾಲೂಕಿನ ಮಾವಳ್ಳಿ-2, ಮುಂಡಗೋಡ ತಾಲೂಕಿನ ಮಳಗಿ, ಸಾಲಗಾಂವ, ಕಾರವಾರ ತಾಲೂಕಿನ ಚಿತ್ತಾಕುಲ, ಶಿರಸಿ ತಾಲೂಕಿನ ಬೈರುಂಬೆ, ಸೂಪಾ ತಾಲೂಕಿನ ಗಂಗೋಡ, ನಂದಿಗದ್ದೆ, ಅಣಶಿ, ಬಜಾರ್‌ಕುಣಂಗ, ನಾಗೋಡ, ಸೇರಿದಂತೆ ಒಟ್ಟು 10 ಗ್ರಾಮ ಪಂಚಾಯತಿಗಳಲ್ಲಿ ಹೊಸದಾಗಿ ಗ್ರಾಮ ಒನ್ ಕೇಂದ್ರ ಅನುಷ್ಠಾನಗೊಳ್ಳುವುದು ಅವಶ್ಯಕತೆ ಇದ್ದು, ಆಯ್ದ ಗ್ರಾಮಗಳಲ್ಲಿ ಸಮಗ್ರ ನಾಗರಿಕ ಸೇವಾ ಕೇಂದ್ರ ಗ್ರಾಮ ಒನ್ ಆರಂಭಿಸಲು ಉದ್ದೇಶಿಸಿದ್ದು, ಪ್ರಾಂಚೈಸಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತರು ವೆಬ್‌ಸೈಟ್: https://www.karnatakaone.gov.in/Public/GramOneFranchiseeTerms ಮೂಲಕ ಜೂ.15 ರೊಳಗಾಗಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಆಯಾ ತಾಲೂಕಿನ ತಹಶೀಲ್ದಾರ ಕಚೇರಿಯನ್ನು ಸಂಪರ್ಕಿಸುವAತೆ ಅಪರ ಜಿಲ್ಲಾಧಿಕಾರಿ ಹಾಗೂ ಗ್ರಾಮ ಒನ್ ಯೋಜನೆಯ ಸದಸ್ಯ ಕಾರ್ಯದರ್ಶಿ ಸಾಜಿದ್ ಮುಲ್ಲಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.