ಉಡುಪಿ, ಮೇ15: ಅಪರಿಚಿತ ವಾಹನವೊಂದು ಬೈಕ್‌ಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರನೊಬ್ಬ ಮೃತಪಟ್ಟು, ಸಹಸವಾರ ಗಾಯ ಗೊಂಡ ಘಟನೆ ಇಲ್ಲಿನ ಕಿನ್ನಿಮೂಲ್ಕಿ ಅಬ್ಕೋ ಸ್ಟೀಲ್‌ನ ಎದುರುಗಡೆ ರಾಷ್ಟ್ರೀಯ ಹೆದ್ದಾರಿ 17ರಲ್ಲಿ ಇಂದು ಮಧ್ಯಾಹ್ನ ನಡೆದಿದೆ.
ಮೃತನನ್ನು ತೆಂಕನಿಡಿಯೂರಿನ ನಿವಾಸಿ ಭಾಸ್ಕರ ಎಂಬವರ ಮಗ ಗಣೇಶ್ (30) ಎಂದು ಗುರುತಿಸ ಲಾಗಿದೆ. ಗಾಯಗೊಂಡಿರುವ ಗರಡಿ ಮಜಲ್‌ನ ರತನ್ ಕುಮಾರ್(18) ಎಂಬವರು ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗಣೇಶ್ ತಮ್ಮ ಬೈಕ್‌ನಲ್ಲಿ ಉದ್ಯಾವರ ಕಡೆಗೆ ಹೋಗುತ್ತಿದ್ದ ವೇಳೆ ಎದುರಿನಿಂದ ಒಂದರ ಹಿಂದೆ ಒಂದರಂತೆ ವೇಗದಿಂದ ಬಂದ ವಾಹನಗಳಲ್ಲಿ ಒಂದು ವಾಹನ ಓವರ್‌ಟೇಕ್ ಮಾಡುವ ಭರದಲ್ಲಿ ಇವರ ಬೈಕ್‌ಗೆ ಢಿಕ್ಕಿ ಹೊಡೆಯಿತೆನ್ನ ಲಾಗಿದೆ. ಇದರಿಂದ ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡಿದ್ದ ಗಣೇಶ್ ಆಸ್ಪತ್ರೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟನೆಂದು ಪೊಲೀಸರು ತಿಳಿಸಿದ್ದಾರೆ. ಅಪಘಾತ ನಡೆಸಿದ ವಾಹನ ನಿಲ್ಲಿಸದೆ ಪರಾರಿಯಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.