ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / 40 ಶೇ. ಕಮಿಷನ್ ಆರೋಪ ನ್ಯಾಯಾಧೀಶರಿಂದ ತನಿಖೆಯಾಗಲಿ: ಎಂ.ಬಿ.ಪಾಟೀಲ್ ಆಗ್ರಹ

40 ಶೇ. ಕಮಿಷನ್ ಆರೋಪ ನ್ಯಾಯಾಧೀಶರಿಂದ ತನಿಖೆಯಾಗಲಿ: ಎಂ.ಬಿ.ಪಾಟೀಲ್ ಆಗ್ರಹ

Tue, 27 Sep 2022 12:38:35  Office Staff   Vb

ಮಂಗಳೂರು: ರಾಜ್ಯ ಸರಕಾರದ ವಿವಿಧ ಇಲಾಖೆಗಳಲ್ಲಿ ಶೇ.40 ಕಮಿಷನ್ ಪಡೆಯಲಾಗುತ್ತಿದೆ ಎಂದು ಗುತ್ತಿಗೆದಾರರ ಸಂಘದ ಆರೋಪದ ಬಗ್ಗೆ ಹಾಲಿ ನ್ಯಾಯಾಧೀಶರು ಅಥವಾ ನಿವೃತ್ತ ನ್ಯಾಯಾಧೀಶರ ಮೂಲಕ ತನಿಖೆಯಾಗಲಿ ಎಂದು ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷ, ಮಾಜಿ ಸಚಿವ ಎಂ.ಬಿ. ಪಾಟೀಲ್‌ ಒತ್ತಾಯಿಸಿದ್ದಾರೆ.

ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 40 ಶೇ. ಕಮಿಷನ್ ಪಡೆಯುವ ಆರೋಪ ಹೊಂದಿರುವ ಇಲಾಖೆಗಳ ಮೇಲೆ ಐ.ಟಿ, ಇ.ಡಿ. ದಾಳಿ ಏಕೆ ನಡೆಯುತ್ತಿಲ್ಲ ಎಂದು ಪ್ರಶ್ನಿಸಿದರು.

ನರೇಂದ್ರ ಮೋದಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬರುವ ಮೊದಲು ದೇಶದಲ್ಲಿ ಅಚ್ಚೇ ದಿನ್ ಇತ್ತು, ಈಗ ಇಲ್ಲ ಎನ್ನುವುದನ್ನು ದೇಶದ ಜನ ಹೇಳುತ್ತಿದ್ದಾರೆ, ದೇಶದ ಯುವ ಜನತೆಗೆ ಭ್ರಮನಿರಸನವಾಗಿದೆ. ಸಾಕಷ್ಟು ಕಂಪೆನಿಗಳು ಖಾಸಗಿಯವರ ಪಾಲಾಗಿವೆ. ನಿರುದ್ಯೋಗದ ಪ್ರಮಾಣ ಏರಿಕೆಯಾಗಿದೆ. ದಿನನಿತ್ಯ ಬಳಕೆಯ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ಖಾದ್ಯ ತೈಲಗಳ ಬೆಲೆ ಗಗನಕ್ಕೇರಿವೆ. ವರ್ಷಕ್ಕೆ ಎರಡು ಕೋಟಿ ಉದ್ಯೋಗ ನೀಡುವ ಪ್ರಧಾನಿಯ ಭರವಸೆ ಈಡೇರಿಸಿಲ್ಲ. ನೋಟ್ ಬ್ಯಾನ್ ಮೂಲಕ ಜನರನ್ನು ಸಂಕಷ್ಟಕ್ಕೀಡು ಮಾಡಿದ ಕೇಂದ್ರ ಸರಕಾರ ಕೊರೋನ ಸಂದರ್ಭದಲ್ಲಿ ಕೋಟ್ಯಂತರ ರೂ. ಖರ್ಚು ಮಾಡಿದೆ ಎನ್ನುತ್ತಿದೆ. ಆದರೆ ಈ ಹಣ ಜನರಿಗೆ ತಲು ಪಿಲ್ಲ ಎಂದು ಎಂ.ಬಿ.ಪಾಟೀಲ್ ಆರೋಪಿ ಸಿದ್ದಾರೆ. ನಳಿನ್ ವಿರುದ್ಧ ಕಾನೂನು ಹೋರಾಟ ಮಲಪ್ರಭಾ ಕಾಲುವೆ ನಿರ್ಮಾಣಕ್ಕೆ ಸಂಬಂಧಿಸಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ತನ್ನ ವಿರುದ್ಧ ಮಾಡಿರುವ ಭ್ರಷ್ಟಾಚಾರ ಆರೋಪದ ವಿರುದ್ಧ ಕಾನೂನು ಹೋರಾಟ ನಡೆಸುವ ಎಂದು ಎಂ.ಬಿ. ಪಾಟೀಲ್ ಹೇಳಿದ್ದಾರೆ.

ನಳಿನ್‌ರಿಗೆ ಕಾನೂನು ಪ್ರಕಾರ ನೋಟಿಸ್‌ ಜಾರಿ ಮಾಡಿ ಅವರು ವಿರುದ್ಧ ಸೂಕ್ತ ಕ್ರಮಕ್ಕಾಗಿ ಕಾನೂನು ಹೋರಾಟ ನಡೆಸು ತೇನೆ ಎಂದು ಹೇಳಿದರು.


Share: