ಭಟ್ಕಳ: ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಬೈಕ್ ಕಳ್ಳತನ ಹಾಗೂ ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೋರ್ವನು ಸತತ ನಾಲ್ಕು ವರ್ಷದಿಂದ ನ್ಯಾಯಾಲಯಕ್ಕೆ ಹಾಜರಾಗದೇ ಇದ್ದು, ಈ ಕುರಿತಂತೆ
ಕಾರ್ಕಳದಲ್ಲಿ ಭಟ್ಕಳ ಶಹರ ಪೋಲಿಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ಬಂಧಿತ ಆರೋಪಿಯು ಮೂಲತಃ ಬೆಳ್ತಂಗಡಿಯ ಸತೀಶ ಸಾಜಿ(ಸ್ಕೋರ್ಪಿಯೋ ಸತೀಶ) ಎಂದು ತಿಳಿದು ಬಂದಿದೆ.
ಸುಮಾರು 4 ವರ್ಷಗಳಿಂದ ಮೂರು ಜಿಲ್ಲೆಯಲ್ಲಿ ಕಳ್ಳತನ ಮಾಡಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ ಇವನನ್ನು ಪೋಲಿಸರು ಹುಡುಕಾಟ ನಡೆಸುತ್ತಿದ್ದರು. ಇದರೊಂದಿಗೆ ನ್ಯಾಯಾಲಯ ಪ್ರೊಕ್ಲಮೆಷನ್ ವಾರೆಂಟ್ ಹೊರಡಿಸಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಭಟ್ಕಳ ಶಹರ ಠಾಣೆಯ ಪೊಲೀಸ ನಿರೀಕ್ಷಿಕ ದಿವಾಕರ ಅವರ ಮಾರ್ಗದರ್ಶನದಲ್ಲಿ ಠಾಣೆಯ ಸಿಬ್ಬಂದಿಗಳಾದ ಗಿರೀಶ ಅಂಕೋಲೆಕರ ಮತ್ತು ಈರಣ್ಣ ಅವರು ಕಾರ್ಕಳದಲ್ಲಿ ಕಾರ್ಕಳ ಪೊಲೀಸರ ಸಹಯೋಗದಲ್ಲಿ ಆರೋಪಿ ಸತೀಶ ಸಾಜಿಯನ್ನು ಬಂಧಿಸಿ
ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಸದ್ಯ ಕಾರವಾರ ಜೈಲಗೆ ಕಳುಹಿಸಲಾಗಿದೆ.