ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / 30 ದಿನಗಳ ಜೆಸಿಬಿ ಆಪರೇಟರ್ ಟ್ರೈನಿಂಗ್

30 ದಿನಗಳ ಜೆಸಿಬಿ ಆಪರೇಟರ್ ಟ್ರೈನಿಂಗ್

Sat, 03 Sep 2022 03:48:55  Office Staff   SO News

ಕಾರವಾರ : ಕೆನರಾ ಬ್ಯಾಂಕ್ ದೇಶಪಾಂಡೆ ಆರ್‍ಸೆಟ್ ಹಳಿಯಾಳ ಹಾಗೂ ಜೆಸಿಬಿ ಇಂಡಿಯಾ ಇವರ ಜಂಟಿ ಸಹಯೋಗದಲ್ಲಿ  ಉಚಿತ 30  ದಿನಗಳ ಜೆಸಿಬಿ ಆಪರೇಟರ್ ಟ್ರೈನಿಂಗ್ ತರಬೇತಿಯನ್ನು ಹಮ್ಮಿಕೋಳ್ಳಲಾಗಿದೆ.
  
ಆಸಕ್ತ 18 ರಿಂದ 45 ವರ್ಷದೊಳಗಿನ ಯುವಕರು, ತಮ್ಮ ಹೆಸರು, ಹುಟ್ಟಿದ ದಿನಾಂಕ ಮತ್ತು ವಿಳಾಸ, ಮೊಬೈಲ್ ಸಂಖ್ಯೆ, ವಿದ್ಯಾರ್ಹತೆ, ತರಬೇತಿಯ ಅವಶ್ಯಕತೆ ಹಾಗೂ ಈಗ ಮಾಡುತ್ತಿರುವ ಕೆಲಸದ ವಿವರಗಳನ್ನೂಳಗೊಂಡ ಅರ್ಜಿಯನ್ನು ಸೆಪ್ಟೆಂಬರ್ 20 ರ ಒಳಗಾಗಿ ಅಂಚೆ ಮೂಲಕ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‍ಸೆಟಿ ವಿಸ್ತರಣಾ ಕೇಂದ್ರ ಹಸನಮಾಳ್, ದಾಂಡೇಲಿ-581325 ಗೆ ಅಥವಾ ವಾಟ್ಸಪ್ ಸಂಖ್ಯೆ 8050741744, 9632143217, 9449782425 ಮೂಲಕವೂ  ಸಹ ಅರ್ಜಿ ಸಲ್ಲಿಸಬಹುದು.  ತರಬೇತಿಯು ಊಟ ವಸತಿ ಉಚಿತವಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08284-298547 ಗೆ ಸಂಪರ್ಕಿಸಿ ಎಂದು ದಾಂಡೇಲಿ  ಕೆನರಾ ಬ್ಯಾಂಕ್ ದೇಶಪಾಂಡೆ ಆರ್ ಸೆಟಿ ವಿಸ್ತರಣಾ ಕೇಂದ್ರ ಹಸನಮಾಳ ಪ್ರಕಟಣೆಯಲ್ಲಿ ತಿಳಿಸಿದೆ.


Share: