ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / 2025-28 ಅವಧಿಗಾಗಿ ಐಟಾ (AIITA) ರಾಜ್ಯ ಸಲಹಾ ಸಮಿತಿ ಸದಸ್ಯರ ಚುನಾವಣೆ

2025-28 ಅವಧಿಗಾಗಿ ಐಟಾ (AIITA) ರಾಜ್ಯ ಸಲಹಾ ಸಮಿತಿ ಸದಸ್ಯರ ಚುನಾವಣೆ

Tue, 03 Sep 2024 21:40:09  Office Staff   SOnews

 

ಭಟ್ಕಳ: ಆಲ್ ಇಂಡಿಯಾ ಐಡಿಯಲ್ ಟೀಚರ್ಸ ಅಸೋಸಿಯೇಶನ್(ರಿ) ಐಟಾ ಕರ್ನಾಟಕ ಇದರ 2025-28ನೆ ಸಾಲಿನ ನಾಲ್ಕು ವರ್ಷದ ಅವಧಿಗಾಗಿ ರಾಜ್ಯ ಸಲಾಹ ಸಮಿತಿ ಸದಸ್ಯರ ಚುನಾವಣೆ ಉಡುಪಿಯ ಸಾಲಿಹಾತ್ ಕ್ಯಾಂಪಸ್ ನಲ್ಲಿ  ರವಿವಾರ ಜರುಗಿತು.

ಯಾಸೀನ್ ಭಿಕ್ಬಾ ಹೊನ್ನಾವರ, ಮುಹಮ್ಮದ್ ರಝಾ ಮಾನ್ವಿ ಭಟ್ಕಳ, ಅಸ್ಲಂ ಹೈಕಾಡಿ ಉಡುಪಿ,  ಇಫ್ತಿಖಾರ್ ಆಹ್ಮದ್ ಹುಮನಾಬಾದ್, ಡಾ.ಮುಬೀನ್ ಉಳ್ಳಾಲ, ಸಲೀಮ್ ಪಾಶ ರಾಯಚೂರು, ಮುಹಮ್ಮದ್ ಅಲ್ತಾಫ್ ಅಮ್ಜದ್ ಬಸವ ಕಲ್ಯಾಣ, ಮಹೆಬೂಬ್ ಉಲ್ ಹಖ್ ಬೆಂಗಳೂರು, ಮುಕ್ತಾರ್ ಆಹ್ಮದ್ ಕೊತ್ವಾಲ್, ಖಾಲಿದ್ ಪರ್ವಾಝ್ ಕಲಬುರಗಿ, ಮುಹಮ್ಮದ್ ಉಮರ್ ಶೇಖ್ ವಿಜಯಪುರ ಅಯ್ಕೆಗೊಂಡಿದ್ದಾರೆ.

ಚುನಾವಣಾ ವೀಕ್ಷಕರಾಗಿ ಕೇಂದ್ರ ಕಾರ್ಯದರ್ಶಿ ಶಾಕಿರ್ ಹುಸೇನ್ ಹಾಗೂ ಅಂದ್ರ ಪ್ರದೇಶ ಐಟಾ ರಾಜ್ಯಾಧ್ಯಕ್ಷ ಅಬ್ದುಲ್ ರಝಾಖ್ ಭಾಗವಹಿಸಿದ್ದರು.

ಮೌಲಾನ ಅಬ್ದುಲ್ ಗಫ್ಫಾರ್ ಹಾಮಿದ್ ಉಮರಿ ರಾಜ್ಯ ಕಾರ್ಯದರ್ಶಿ ಜೆಐಎಚ್ ಶಿಕ್ಷಣ ವಿಭಾಗ ದಿಕ್ಸೂಚಿ ಭಾಷಣ ಮಾಡಿದರು. ಐಟಾ ಕರ್ನಾಟಕ ರಾಜ್ಯಾಧ್ಯಕ್ಷ ಎಂ.ಆರ್.ಮಾನ್ವಿ ಪ್ರಸ್ತವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಯಾಸೀನ್ ಭಿಕ್ವಾ ಧನ್ಯವಾದ ಅರ್ಪಿಸಿದರು. ಐಟಾ ವಿಜಯಪುರ ಜಿಲ್ಲಾಧ್ಯಕ್ಷ ಉಮರ್ ಶೇಖ್ ಕಾರ್ಯಕ್ರಮ ನಿರೂಪಿಸಿದರು.

 

 


Share: