ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಮಂಜೇಶ್ವರ: ಅಯ್ಯಪ್ಪ ಭಕ್ತರ ನಗದು ಅಪಹರಣ

ಮಂಜೇಶ್ವರ: ಅಯ್ಯಪ್ಪ ಭಕ್ತರ ನಗದು ಅಪಹರಣ

Sun, 27 Dec 2009 15:17:00  Office Staff   S.O. News Service
ಮಂಜೇಶ್ವರ, ಡಿಸೆಂಬರ್ 27: ಶಬರಿಮಲೆ ದರ್ಶನ ಮುಗಿಸಿ ಹಿಂತಿರುಗುತ್ತಿದ್ದ  ಭಕ್ತರ ನಗದು ಅಪಹರಿಸಿರೂದಾಗಿ ನಗರ ಠಾಣೆಯಲ್ಲಿ ದೂರು ದಾಕಲಾಗಿದೆ. ಕರ್ನಾಟಕದ ಅರಸೀಕೆರೆ ನಿವಾಸಿ ಅರಸೀಕೆರೆಯಲ್ಲಿ ವಿದ್ಯುನ್ಮಂಡಳಿಯ ಜೂನಿಯರ್ ಇಂಜಿನಿಯರ್ ಆಗಿರುವ ಲಕ್ಮೀಕಾಂತ್ ನೇತೃತ್ವದ ೮ ಮಂದಿಯ ತಂಡವೊಂದು ಇಂದು ಮುಂಜಾನೆ ಚೆರ್ಕಳಕ್ಕೆ ತಲುಪಿತ್ತು.
 
ಚೆರ್ಕಳದ ಕಟ್ಟಡವೊಂದರ ಬಳಿ ನಿದ್ರಿಸುತ್ತಿದ್ದ ವೇಳೆ 21000 ರೂ ನಗದನ್ನು ಅಪಹರಣ ನಡೆದಿರುವುದಾಗಿ ಭಕ್ತರು ದೂರಿದ್ದಾರೆ. ಬೆಳಿಗ್ಗೆ ಎಚ್ಚೆತಾಗ ಅಪಹರಣ ನಡೆದ ಬಗ್ಗೆ ಗಮನಕ್ಕೆ ಬಂದಿದ್ದು ಕೂಡಲೇ ನಗರ ಠಾಣೆಗೆ ದೂರು ನೀಡಲಾಯಿತು. 

ವರದಿ: ಆರಿಫ್ ಮಚ್ಚಂಪಾಡಿ, ಮಂಜೇಶ್ವರ 


Share: