ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಜಾಲಿ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾಗಿ ಮಂಜಪ್ಪ ನಾಯ್ಕ ಅವಿರೋಧ ಆಯ್ಕೆ

ಜಾಲಿ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾಗಿ ಮಂಜಪ್ಪ ನಾಯ್ಕ ಅವಿರೋಧ ಆಯ್ಕೆ

Sun, 02 Jul 2023 21:15:35  Office Staff   SOnews


ಭಟ್ಕಳ: ಜಾಲಿ ಪ.ಪಂ ವ್ಯಾಪ್ತಿಯ ಜಾಲಿ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ಮುಖಂಡ, ಸಹಕಾರಿ ಧುರೀಣ  ಮಂಜಪ್ಪ ನಾಯ್ಕ ಜಾಲಿ ಅವಿರೋಧವಾಗಿ ಆಯ್ಕೆಗೊಂಡಿದ್ದು, ಉಪಾಧ್ಯಕ್ಷರಾಗಿ ರತ್ನಾಕರ ಖಾರ್ವಿ ಆಯ್ಕೆಯಾಗಿದ್ದಾರೆ.

ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಪರವಾಗಿ ಬೆಂಬಲ ವ್ಯಕ್ತಪಡಿಸಲು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ವಿಠ್ಠಲ ನಾಯ್ಕ, ಹಾಲಿ ಪ್ರಧಾನ ಕಾರ್ಯದರ್ಶಿ ಸುರೇಶ ನಾಯ್ಕ ಮೂಡಭಟ್ಕಳ, ಬೆಳಕೆ ಸಹಕಾರಿ ಬ್ಯಾಂಕಿನ ಧುರೀಣ ಮಂಜುನಾಥ ನಾಯ್ಕ, ಕಾಂಗ್ರೆಸ್ ಸೇವಾದಳದ ತಾಲೂಕಾಧ್ಯಕ್ಷ ರಾಜೇಶ ನಾಯ್ಕ ಮುಂಡಳ್ಳಿ ಉಪಸ್ಥಿತರಿದ್ದು ಶುಭಕೋರಿದರು.

ಅಧ್ಯಕ್ಷರಾಗಿ ಆಯ್ಕಗೊಂಡಿರುವ ಮಂಜಪ್ಪ ನಾಯ್ಕ ಜಾಲಿವರಿಗೆ ಸಚಿವ ಮಾಂಕಾಳ್ ವೈದ್ಯರ ಸಂಪೂರ್ಣ ಬೆಂಬಲ ವ್ಯಕ್ತವಾಗಿದ್ದು ಈ ಕಾರಣಕ್ಕಾಗಿಯೆ ಅವರು ಎರಡನೇ ಬಾರಿಗೆ ಜಾಲಿ ಬ್ಯಾಂಕಿನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎನ್ನಲಾಗಿದೆ.


Share: