ಕಾರ್ಕಳ, ಮಾರ್ಚ್ 2: ಬೆಳ್ಮಣ್ಣು ಲಯನ್ಸ್ ಕ್ಲಬ್ ಪ್ರಸಕ್ತ ವರ್ಷದಲ್ಲಿ ಬೆಳ್ಳಿಹಬ್ಬವನ್ನು ಆಚರಿಸುತ್ತಿದ್ದು, ಆ ಪ್ರಯುಕ್ತ ಪ್ರತಿ ತಿಂಗಳು 25 ಸೇವಾ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಗ್ರಾಮೀಣ ಪ್ರದೇಶದ ಉತ್ತಮ ಕ್ಲಬ್ಬಾಗಿ ಇದು ಮೂಡಿ ಬಂದಿದೆ ಎಂದು ಲಯನ್ಸ್ ಜಿಲ್ಲಾ ಗವರ್ನರ್ ಡಾ.ಟಿ.ಬಸವರಾಜ್ ಹೇಳಿದರು.
ಅವರು ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಬಾರಿ ಲಯನ್ಸ್ ಕ್ಲಬ್ ಹಾಕಿಕೊಂಡ ವಿವಿಧ ಯೋಜನೆಗಳನ್ನು ಅನುಷ್ಟಾನಗೊಳಿಸುವ ಮೂಲಕ ಬೆಳ್ಮಣ್ಣು ಲಯನ್ಸ್ ಕ್ಲಬ್ ಶ್ಲಾಘನೀಯವಾಗಿ ಸ್ಪಂದಿಸಿದೆ. ಉಚಿತ ಕಣ್ಣಿನ ತಪಾಸಣಾ ಶಿಬರ, ವಿದ್ಯಾರ್ಥಿಗಳಿಗೆ ನೆರವು, ಬಡವರಿಗೆ ಮನೆ ನಿರ್ಮಾಣ, ಬಸ್ಸು ತಂಗುದಾಣಗಳು, ಸೂಚನಾಫಲಕಗಳು ಮತ್ತಿತರ ಜನೋಪಯೋಗಿ ಕಾರ್ಯಕ್ರಮಗಳನ್ನು ನಡೆಸಿದೆ ಎಂದರು. ಈ ಬಾರಿಯ ಲಯನ್ಸ್ ಜಿಲ್ಲಾ ಸಮ್ಮೇಳನವು ಉಡುಪಿಯಲ್ಲಿ ಎ.೧೦ ಮತ್ತು ೧೧ರಂದು ಬೆಳ್ಮಣ್ಣು ಲಯನ್ಸ್ ಕ್ಲಬ್ ಆತಿಥ್ಯದಲ್ಲಿ ಜರಗಲಿದೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಬೆಳ್ಮಣ್ಣು ಲಯನ್ಸ್ ಕ್ಲಬ್ ಅಧ್ಯಕ್ಷ ಗ್ರೆಗರಿ ಮಿನೇಜಸ್, ಪ್ರಮೀಳಾ ಮಿನೇಜಸ್, ಎನ್.ಎಂ.ಹೆಗ್ಡೆ, ಮುಕುಂದ ಕಾಮತ್, ಜಯಂತ್ ರಾವ್, ವಿ.ಕೆ.ರಾವ್, ಕೆ.ಪಿ.ಭಂಡಾರಿ, ಶಿವರಾಮ ಆಚಾರ್ಯ, ಊರ್ಬನ್ ಡಿಸೋಜಾ ಮತ್ತಿತರರು ಉಪಸ್ಥಿತರಿದ್ದರು