ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಕೈಗಾರಿಕಾ ಸ್ಥಾಪನೆಗೆ ಅರ್ಜಿ ಆಹ್ವಾನ

ಕೈಗಾರಿಕಾ ಸ್ಥಾಪನೆಗೆ ಅರ್ಜಿ ಆಹ್ವಾನ

Fri, 16 Jun 2023 03:47:05  Office Staff   SO News

ಕಾರವಾರ : ಕರ್ನಾಟಕ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯು 2023-24ನೇ ಸಾಲಿನ ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನ (ಪಿಎಂಇಜಿಪಿ) ಯೋಜನೆಯಡಿ ನಗರ ಮತ್ತು ಗ್ರಾಮಾಂತರ ಪ್ರದೇಶದ ನಿರುದ್ಯೋಗ ಯುವಕ, ಯುವತಿಯರಿಗೆ ಕೈಗಾರಿಕಾ ಸೇವಾ ಚಟುವಟಿಕೆ ಸ್ಥಾಪಿಸಲು ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿದಾರರಿಗೆ ಕನಿಷ್ಠ 18 ವರ್ಷ ತುಂಬಿರಬೇಕು. ಕನಿಷ್ಠ 8 ನೇ ತರಗತಿ ಉತ್ತಿರ್ಣರಾಗಿರಬೇಕು, ಉತ್ಪಾದನಾ ಘಟಕವಾಗಿದ್ದಲ್ಲಿ ರು.10 ಲಕ್ಷ ಮತ್ತು ಸೇವಾ ಘಟಕವಾಗಿದ್ದಲ್ಲಿ ರೂ 5 ಲಕ್ಷಗಿಂತ ಮೇಲ್ಪಟ್ಟ ಯೋಜನಾ ವೆಚ್ಚವನ್ನೊಳಗೊಂಡಿದೆ.

ಆಸಕ್ತ ನಿರುದ್ಯೋಗಿ ಯುವಕ, ಯುವತಿಯರು ತಮ್ಮ ಫೋಟೊ, ಯೋಜನಾ ವರದಿ, ಜಾತಿ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಗ್ರಾಮೀಣ ಪ್ರದೇಶದ  ಪ್ರಮಾಣ ಪತ್ರ, ವಿದ್ಯಾಭ್ಯಾಸದ ದಾಖಲಾತಿ, ಬ್ಯಾಂಕ್ ಪಾಸ್ ಪುಸ್ತಕ, ರೇಷನ್ ಕಾರ್ಡ್, ವಾಸ್ತವ್ಯ ದೃಡೀಕರಣ ಪತ್ರ ಹಾಗೂ ಇತರ ದಾಖಲಾತಿಗಳನ್ನು ವೆಬ್ ಸೈಟ್ www.kviconline. gov.in/ pmegpeportal ನ ಮೂಲಕ ಅಪ್ ಲೋಡ್ ಮಾಡಿ ಅರ್ಜಿಯನ್ನು ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿ, ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ (ಕೆ.ವಿ.ಐ.ಬಿ.),  ನಂ.524 ಇಲ್ಲಿಗೆ ಅಥವಾ ದೂರವಾಣಿ ಸಂಖ್ಯೆ: 08382-226506, 9480825632 ಗೆ ಸಂಪರ್ಕಿಸಿ ಎಂದು ಜಿಲ್ಲಾ ಖಾದಿ ಗ್ರಾಮೋದ್ಯೋಗ  ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Share: