ಭಟ್ಕಳ : ನಮ್ಮ ದೇಶದ ಬೆನ್ನೆಲುಬು ಕೇವಲ ರೈತರಷ್ಟೇ ಅಲ್ಲದೆ ಶಿಕ್ಷಕರೂ ಆಗಿದ್ದಾರೆ ಎಂದು ಸಾಹಿತಿ ಮಾನಾಸುತ ಶಂಭು ಹೆಗಡೆ ಹೇಳಿದರು.
ಅವರು ಭಟ್ಕಳದ ದಿ ನ್ಯೂ ಇಂಗ್ಲೀಷ್ ಪಿಯು ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಾ ಸುಸಂಸ್ಕೃತ ಸಮಾಜವನ್ನು ನಿರ್ಮಾಣ ಮಾಡುವಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಗುರುನಿಂದನೆ ಮಹಾಪಾಪ ಗುರುವಂದನೆ ದಾರಿದೀಪ ಎಂದು ಹೇಳಿದರು.
ಶಿಕ್ಷಕ ದಿನಾಚರಣೆಯ ಸಂದರ್ಭದಲ್ಲಿ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಶಿಕ್ಷಕ ಪಾಲಕರಾದ, ಸರಕಾರಿ ಪ್ರೌಢಶಾಲೆ ಬೆಳ್ಕೆಯ ದೈಹಿಕ ಶಿಕ್ಷಣ ಶಿಕ್ಷಕ ಪ್ರಕಾಶ ಶಿರಾಲಿ ಭಟ್ಕಳ, ದಿ ನ್ಯೂ ಇಂಗ್ಲೀಷ್ ಪಿ.ಯು.ಕಾಲೇಜಿನ ಉಪನ್ಯಾಸಕಿ ಶ್ಯಾಮಲಾ ರವಿ ನಾಯ್ಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಂಗನವಾಡಿ ಶಿಕ್ಷಕಿಯರಾದ ಮಾದೇವಿ ನಾಗಪ್ಪ ನಾಯ್ಕ ಮತ್ತು ಶೋಭಾ ಮಂಜುನಾಥ ಆಚಾರಿ ಇವರಿಗೆ ಗುರುವಂದನೆ ಸಲ್ಲಿಸಲಾಯಿತು.
ಭಟ್ಕಳ ಎಜುಕೇಶನ್ ಟ್ರಸ್ಟಿನ ಟ್ರಸ್ಟಿ ಮ್ಯಾನೇಜರ್ ರಾಜೇಶ ನಾಯಕ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ವಿರೇಂದ್ರ ವಿ. ಶಾನಭಾಗ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಶ್ರೀಭಾಗ್ಯ ಮತ್ತು ಸಂಗಡಿಗರು ಪ್ರಾರ್ಥಿಸಿದರು, ಉಪನ್ಯಾಸಕಿ ಧನಶ್ರೀ ಕಲಬಾಗ ಸ್ವಾಗತಿಸಿದರು, ಮೋನಿಕಾ ಕೆ. ವಂದಿಸಿದರು, ಶ್ರೀಮತಿ ನಯನ ನಿರೂಪಿಸಿದರು.